ಗುರುಕುಲ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಗಾರ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ಎದುರಿಸುವ ಮತ್ತು ಉತ್ತಮ ಅಂಕಗಳನ್ನು ಪಡೆಯುವ ಕೌಶಲ್ಯ ಹೆಚ್ಚಿಸುವ ಅಂಶಗಳು ಅನಿವಾರ್ಯವಾಗಿದೆ. ಒತ್ತಡವನ್ನು ನಿಭಾಯಿಸುವಿಕೆ ಮತ್ತು ಉತ್ತಮವಾಗಿ ಪ್ರಶ್ನೆಪತ್ರಿಕೆಯಲ್ಲಿ ಉತ್ತರವನ್ನು ಬರೆಯಬಲ್ಲ ಸಾಮರ್ಥವನ್ನು ಪ್ರತಿಯೊಬ್ಬ ವಿದ್ಯಾರ್ಥಿಯು ಹೊಂದಿದಾಗ ಮಾತ್ರ ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗುರುಕುಲ ಪಬ್ಲಿಕ್ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪದವಿಪೂರ್ವ ಮಕ್ಕಳಿಗೆ ವಿಶೇಷವಾದ ಎರಡು ದಿವಸಗಳ ಪರೀಕ್ಷೇಯ ವಿವಿಧ ಆಯಾಮಗಳು ಎನ್ನುವ ವಿಷಯದ ಕುರಿತು ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು.

Call us

Click Here

ರಾಷ್ಟ್ರದ ಪ್ರತಿಷ್ಠಿತ ತರಬೇತಿ ಸಂಸ್ಥೆಗಳಲ್ಲಿ ಒಂದಾದ ಆರ್.ಸಿ.ಚೈಲ್ಡ್ ಡೆವೆಲಪ್‌ಮೆಂಟ್ ಎಜೆನ್ಸಿಯ ತಂಡದ ಸಹಾಯದಿಂದ ಮಕ್ಕಳಿಗೆ ವಿಭಿನ್ನ ಬಗೆಯ ಪರೀಕ್ಷೇಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಾಹಿತಿಗಳನ್ನು ನೀಡಲಾಯಿತು. ಕ್ಲಿಷ್ಟಕರ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಗಳ ವಿಭಿನ್ನ ಬಗೆಯ ಪರಿಕಲ್ಪನೆಗಳನ್ನು ನೆನಪಿನಲ್ಲಿಟ್ಟುಕೊಳ್ಳಲು ಬೇಕಾದ ಪದ್ಧತಿಗಳ ಬಗ್ಗೆ ಕ್ರೀಯಾ ಚಟುವಟಿಕೆಗಳ ಮೂಲಕ ತಿಳಿಸಲಾಯಿತು. ಸ್ಮರಣಾ ಕೌಶಲ್ಯ, ಬರವಣಿಗೆಯ ಸಾಮರ್ಥ್ಯ ಮತ್ತು ಧೀರ್ಘವಾದ ಉತ್ತಗಳನ್ನು ಬರೆಯುವ ಬಗ್ಗೆ ಹೆಚ್ಚಿನ ಗಮನವಿಟ್ಟು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಅಲ್ಲದೇ ಧ್ಯಾನದ ಮೂಲಕ ವಿದ್ಯಾರ್ಥಿಗಳು ತಮ್ಮ ಸ್ಮರಣಾಶಕ್ತಿಯನ್ನು ಹೆಚ್ಚಿಸಲು ಸಾಧ್ಯ ಎನ್ನುವುದನ್ನು ಪ್ರಾತಿಕ್ಷ್ಯತೆಯ ಮೂಲಕ ನಿರೂಪಿಸಿದರು. ಇವುಗಳಲ್ಲದೇ ವಿದ್ಯಾರ್ಥಿಗಳಲ್ಲಿ ಆತ್ಮಸೆರ್ಯವನ್ನು ಹೆಚ್ಚಿಸುವ ಚಟುವಟಿಕೆಗಳನ್ನು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾಗುವ ಮೂಲಾಂಶಗಳ ಬಗ್ಗೆ ಎರಡು ದಿನಗಳ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಮಚಂದ್ರ ನಾಯರ್ ಮತ್ತು ತಂಡದವರು ಈ ಕಾರ್ಯಗಾರವನ್ನು ಸಮರ್ಪಕವಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಪ್ರಾಂಶುಪಾಲರಾದ ಸಾಯಿಜು. ಕೆ.ಆರ್. ನಾಯರ್ ವಹಿಸಿದ್ದರು. ಶಿಕ್ಷಕಿಯರಾದ ಅನುಪಮ ಶೆಟ್ಟಿ ಮತ್ತು ಸ್ಮಿತಾ ಕಾರ್ಯಕ್ರಮವನ್ನು ನಿರೂಪಿಸಿದರು.

 

Leave a Reply