ಡಿ. 28ರಿಂದ 5 ದಿನಗಳ ಕಾಲ ‘ಬೈಂದೂರು ಬೀಚ್ ಉತ್ಸವ’

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ನೂತನ ಬೈಂದೂರು ತಾಲೂಕಿನ ವಿವಿಧ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಕೊಂಡಿಯಾಗಿ ಬೆಸುಗೆ ಫೌಂಡೇಶನ್ ಬೈಂದೂರು ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದು, ಸಂಸ್ಥೆಯ ಮೂಲಕ ಮೊದಲ ಭಾರಿಗೆ ಪಡುವರಿ ಗ್ರಾಮ ಪಂಚಾಯತ್ ಆತಿಥ್ಯ ಹಾಗೂ ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ಡಿ.೨೮ರಿಂದ ಜ.೧ರ ತನಕ ಐದು ದಿನಗಳ ಕಾಲ ಬೀಚ್ ಉತ್ಸವವನ್ನು ಆಯೋಜಿಸಲಾಗುತ್ತಿದೆ ಎಂದು ಬೆಸುಗೆ ಫೌಂಡೇಶನ್ ರಿ. ಬೈಂದೂರು ಇದರ ಅಧ್ಯಕ್ಷ ಕೆ. ವೆಂಕಟೇಶ ಕಿಣಿ ಹೇಳಿದರು.

Call us

Click Here

ಅವರು ಬೈಂದೂರಿನಲ್ಲಿ ನಡೆದ ಪ್ರತಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಬೈಂದೂರು ತಾಲೂಕಿನ ಪ್ರಾಕೃತಿಕ ವೈಶಿಷ್ಟ್ಯವನ್ನು ಜಗತ್ತಿಗೆ ತೆರೆದಿಡಬೇಕೆಂಬ ನಮ್ಮ ಹಂಬಲವನ್ನು ಕಾರ್ಯಗತಗೊಳಿಸುವ ಸಲುವಾಗಿ ಸಮಾನ ಮನಸ್ಕರೊಡಗೂಡಿ ’ಬೆಸುಗೆ ಫೌಂಡೇಶನ್ ರಿ. ಬೈಂದೂರು’ ಎಂಬ ಸಂಸ್ಥೆಯನ್ನು ಹುಟ್ಟುಹಾಕಲಾಗಿದೆ. ತಾಲೂಕಿನ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಯೊಂದನ್ನೇ ಮೂಲ ಧ್ಯೇಯವನ್ನಾಗಿರಿಕೊಂಡು ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು ಈ ಮೂಲಕ ತಾಲೂಕಿನ ಪ್ರವಾಸಿ ಕೇಂದ್ರಗಳ ಬಗೆಗೆ ಮಾಹಿತಿ ಹಾಗೂ ಸರಕಾರದ ಮೂಲಕ ಆಗಬಹುದಾದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಪೂರಕವಾಗಿ ಶ್ರಮಿಸುವ ಮಹತ್ವಾಕಾಂಕ್ಷೆ ನಮ್ಮ ಮುಂದಿದೆ ಎಂದು ವಿವರಿಸಿದರು.

ಬೈಂದೂರು ಬೀಚ್ ಉತ್ಸವ 2017:
ಪ್ರವಾಸೋದ್ಯಮದ ಅರಿವು ಮೂಡಿಸಬೇಕೆಂಬ ಉದ್ದೇಶದೊಂದಿಗೆ ಬೆಸುಗೆ ಫೌಂಡೇಶನ್‌ನ ಮೊದಲ ಕಾರ್ಯಕ್ರಮವಾಗಿ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ’ಬೈಂದೂರು ಬೀಚ್ ಉತ್ಸವ’ವನ್ನು ಹಮ್ಮಿಕೊಂಡಿದೆ. ಪಡುವರಿ ಗ್ರಾಮ ಪಂಚಾಯತ್ ಆತಿಥ್ಯದೊಂದಿಗೆ, ವಿವಿಧ ಸಂಘ ಸಂಸ್ಥೆಗಳ ನೆರವಿನೊಂದಿಗೆ ದಿನಾಂಕ ೨೮-೧೨-೨೦೧೭ರಿಂದ ೦೧-೦೧-೨೦೧೮ ತನಕ ೫ ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ಪ್ರವಾಸಿ ತಾಣಗಳ ಅರಿವು ಮೂಡಿಸುವ ಜೊತೆ ಜೊತೆಗೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಡಿ. 28ರಂದು ಉತ್ಸವ ಆರಂಭಗೊಳ್ಳಿದ್ದು, ಖ್ಯಾತ ಸಿನೆಮಾ ಹಿನ್ನೆಲೆ ಗಾಯಕರಾದ ಸುನೀತಾ, ಫರೀದ್ ಜೋಸ್ನಾ, ಯಶವಂತ್ ಮೊದಲಾದವರು ಸಾರಥ್ಯದಲ್ಲಿ ಸಂಗೀತ ನೃತ್ಯ ಮಾಯಾಲೋಕ ಕಾರ್ಯಕ್ರಮ, ಡಿ. 29ರಂದು ಉಡುಪಿಯ ಭಾರ್ಗವಿ ನೃತ್ಯ ತಂಡ ಹಾಗೂ ಸ್ಥಳೀಯ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜೊತೆಗೆ ಮರಳು ಶಿಲ್ಪ, ಗಾಳಿಪಟ ಹಾರಾಟ ಸ್ವರ್ಧೆ, ಪುರುಷರಿಗೆ ಹಗ್ಗ ಜಗ್ಗಾಟ ಹಾಗೂ ಕಬ್ಬಡ್ಡಿ ಸ್ಪರ್ಧೆ, ಮಹಿಳೆಯರಿಗೆ ತ್ರೋಬಾಲ್ ಹಾಗೂ ಹಗ್ಗಜಗ್ಗಾಟ ಸ್ವರ್ಧೆ, ನಿಸರ್ಗ ಚಿತ್ರಕಲಾ ಸ್ವರ್ಧೆ ನಡೆಯಲಿದೆ. ಐದು ದಿನವೂ ಅಳಿವೆಕೋಡಿಗೆ ದೋಣಿ ವಿಹಾರ, ಮಕ್ಕಳಿಗೆ ಪ್ಯಾಂಟಸಿ ಪಾಕ್ ಸೇರಿದಂತೆ ವಿವಿಧ ವಿನೋದಾವಳಿಗಳು ಇರಲಿದ್ದು, ತಾಲೂಕಿನ ನಾಗರಿಕರು ಭಾಗವಹಿಸವಂತೆ ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಡುವರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸದಾಶಿವ ಡಿ. ಪಡುವರಿ, ಬೆಸುಗೆ ಫೌಂಡೇಶನ್‌ನ ಕೋಶಾಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಗಣಪತಿ ಹೋಬಳಿದಾರ್, ಕಾರ್ಯಕಾರಿ ಮಂಡಳಿ ಸದಸ್ಯರಾದ ಜಯಾನಂದ ಹೋಬಳಿದಾರ್, ಭೀಮೇಶ್ ಕುಮಾರ್ ಹಾಗೂ ಪಡುವರಿ ಗ್ರಾಪಂ ಸದಸ್ಯ ಮಾಣಿಕ್ಯ ಹೋಬಳಿದಾರ್ ಉಪಸ್ಥಿತರಿದ್ದರು.

Click here

Click here

Click here

Click Here

Call us

Call us

ಬೆಸುಗೆ ಫೌಂಡೇಶನ್ ಸ್ಥಾಪನೆಯ ಉದ್ದೇಶಗಳು:
* ಬೈಂದೂರು ತಾಲೂಕಿನ ಪ್ರವಾಸಿ ತಾಣಗಳಾದ ಸೋಮೇಶ್ವರ ಕಡಲತೀರ, ಕ್ಷಿತಿಜ ನೇಸರಧಾಮ, ಕೂಸಳ್ಳಿ ಜಲಪಾತ, ಮರವಂತೆ ಕಡಲತೀರ, ಆನೆಜರಿ ಬಟರ್‌ಪೈ ಕ್ಯಾಂಪ್, ಅರಶಿಣ ಗುಂಡಿ ಜಲಪಾತ, ಬೆಳ್ಕಲ್ ತೀರ್ಥ, ಐತಿಹಾಸಿಕ ದೇವಾಲಯಗಳಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ಬೈಂದೂರು ಸೇನೇಶ್ವರ, ಮೂಡುಗಲ್ಲು ಶ್ರೀ ಕೇಶವನಾಥ ಗುಹಾಂತರ ದೇವಾಲಯ ಸೇರಿದಂತೆ ಇತರೇ ಪ್ರದೇಶಗಳ ಅಭಿವೃದ್ಧಿಗೆ ಶ್ರಮಿಸಿವುದು.
* ಬೈಂದೂರು ತಾಲೂಕಿನ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆಯೊಂದಿಗೆ ನಿಟಕ ಸಂಪರ್ಕ ಹೊಂದಿ ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಈ ಭಾಗಕ್ಕೆ ತರುವಲ್ಲಿ ಶ್ರಮಿಸುವುದು.
* ಜನಪ್ರತಿನಿಧಿಗಳಿಗೆ ಪ್ರವಾಸೋದ್ಯಮ ಅಭಿವೃದ್ಧಿಯ ಬಗೆಗೆ ನಿರಂತರವಾಗಿ ಮನವರಿಕೆ ಮಾಡುವುದು ಮತ್ತು ಜನಸಾಮಾನ್ಯರಿಗೆ ಪ್ರವಾಸಿ ತಾಣದ ಅಗತ್ಯತೆಯನ್ನು ಮನವರಿಕೆ ಮಾಡಿಕೊಡುವುದು.
* ಒಂದೇ ಪ್ರದೇಶದ ಭೇಟಿಗಾಗಿ ಆಗಮಿಸುವ ಪ್ರವಾಸಿಗರಿಗೆ ತಾಲೂಕಿನ ಇತರೇ ಪ್ರವಾಸಿ ತಾಣಗಳ ಬಗೆಗೆ ಮಾಹಿತಿ ನೀಡುವ ವ್ಯವಸ್ಥೆ ಕಲ್ಪಿಸುವುದು.
* ವಾಹನ ಚಾಲಕರು, ಹೋಟೆಲ್ ಮಾಲಕರು ಹಾಗೂ ಪ್ರವಾಸಿಗರಿಗೆ ಕೊಂಡಿಯಾಗಿರುವ ವ್ಯಕ್ತಿಗಳಿಗೆ ತರಬೇತಿ, ಮಾರ್ಗದರ್ಶಿ ನೀಡುವುದು.
* ಪ್ರತಿ ಪ್ರವಾಸಿ ತಾಣಗಳಲ್ಲಿಯೂ ಕಾರ್ಯಕ್ರಮಗಳನ್ನು ಆಯೋಜಿಸಿ ಇಲಾಖೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯುವುದು.
* ಪ್ರವಾಸಿಕೇಂದ್ರದ ಅಭಿವೃದ್ಧಿಗೆ ಪೂರಕವಾಗಿ ಹೂಡಿಕೆದಾರರನ್ನು ಹಾಗೂ ಇತರೆ ಉದ್ದಿಮೆದಾರರನ್ನು ಪ್ರೋತ್ಸಾಹಿಸುವುದು.
* ರಸ್ತೆ, ರೈಲು ಹಾಗೂ ವಿಮಾನಯಾನಕ್ಕೆ ಅನುಕೂಲವಾಗುವ ವ್ಯವಸ್ಥೆಗೆ ಪೂರಕವಾಗಿ ಸ್ಪಂದಿಸುವುದು.

 

Leave a Reply