ಕುಂದಾಪುರ ಐಎಂಎ ಅಧ್ಯಕ್ಷರಾಗಿ ಡಾ. ಸತೀಶ್ ಪೂಜಾರಿ ಪದಗ್ರಹಣ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ವೈದ್ಯಕೀಯ ಸೇವೆ ಜಗತ್ತಿನಲ್ಲಿ ಅತ್ಯುನ್ನತವಾದ ಸೇವೆ ಎಂದು ಪರಿಗಣಿಸಲ್ಪಟ್ಟಿದೆ. ವೈದ್ಯರು ತಮ್ಮ ವೈಯಕ್ತಿಕ ಹಿತಾಸಕ್ತಿಯನ್ನು ಬದಿಗೊತ್ತಿ ಸಮಾಜದ ಒಳಿತಿಗೆ ಶ್ರಮಿಸುತ್ತಿದ್ದಾರೆ. ರಾಜ್ಯ ಸರಕಾರ ತರಲುದ್ದೇಶಿಸಿದ ವಿಧೇಯಕಗಳಲ್ಲಿ ಶುಲ್ಕ ಕಡಿತಗೊಳಿಸುವ ವಿಚಾರಗಳಷ್ಟೆ ಎಂದು ಜನ ಭಾವಿಸಿದ್ದರು ಆದರೆ ವೈದ್ಯ ಸಮೂಹಕ್ಕೆ ಭಾದಕವಾಗುವಂತ ಹಲವಾರು ಸಂಗತಿಗಳು ಅದರಲ್ಲಿ ಅಡಕವಾಗಿರುವುದನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ವೈದ್ಯಕೀಯ ಸಂಘ ಮಾಡಬೇಕಿತ್ತು ಎಂದು ಕೆಎಂಸಿ ಮಣಿಪಾಲದ ಇಎನ್‌ಟಿ ವಿಭಾಗದ ಪ್ರೋಫೆಸರ್ ಡಾ. ಬಾಲಕೃಷ್ಣನ್ ಹೇಳಿದರು.

Call us

Click Here

ಅವರು ಸಹನಾ ಕನ್‌ವೆನ್‌ಶನ್ ಹಾಲ್‌ನಲ್ಲಿ ಭಾರತೀಯ ವೈದ್ಯಕೀಯ ಸಂಘ ಕುಂದಾಪುರ ಘಟಕದ ನೂತನ ಸಾಲಿನ ಅಧ್ಯಕ್ಷರು, ಪದಾಧಿಕಾರಿಗಳ ಪದಪ್ರದಾನ ನೆರವೇರಿಸಿ ಮಾತನಾಡಿದರು.

ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯ ವ್ಯದ್ಯಕೀಯ ನಿರ್ದೇಶಕರಾದ ಡಾ. ಸತೀಶ ಪೂಜಾರಿ ಅವರು ನೂತನ ಅಧ್ಯಕ್ಷರಾಗಿ ಪದಪ್ರದಾನ ಸ್ವೀಕರಿಸಿ, ಪ್ರತಿಷ್ಠಿತ ಐಎಂಎ ಕುಂದಾಪುರದ ಸರ್ವಸದಸ್ಯರ ವಿಶ್ವಾಸಗಳಿಸಿ ಉತ್ತಮ ರೀತಿಯಲ್ಲಿ ಸಂಸ್ಥೆಯನ್ನು ಮುನ್ನಡೆಸುವುದಾಗಿ ತಿಳಿಸಿದರು.

ಐಎಂಎ ಸೆಂಟ್ರಲ್ ಕೌನ್ಸಿಲ್ ಸದಸ್ಯರಾದ ಡಾ. ಕೆ.ಎಸ್. ಕಾರಂತ್ ಉಪಸ್ಥಿತರಿದ್ದರು. ನಿರ್ಗಮನ ಅಧ್ಯಕ್ಷ ಡಾ. ನಿಖಿಲ್ ರೈ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಡಾ. ಶ್ರೀಕಾಂತ ಶೆಟ್ಟಿ ವರದಿ ವಾಚಿಸಿದರು. ನಿರ್ಗಮನ ಕೋಶಾಧಿಕಾರಿ ಡಾ. ಸಂದೀಪ ನಾವಡ ಲೆಕ್ಕಪತ್ರ ಮಂಡಿಸಿದರು. ನೂತನ ಕಾರ್ಯದರ್ಶಿ ಡಾ. ನಿತಿನ್ ಶೆಟ್ಟಿ ವಂದಿಸಿದರು. ಡಾ. ಸಂಧ್ಯಾ ಅಡಿಗ ಪ್ರಾರ್ಥಿಸಿದರು.

 

Click here

Click here

Click here

Click Here

Call us

Call us

Leave a Reply