ಲಾರಿ ಡ್ರೈವರ್ ಆಗಬೇಕೆಂದು ಕನಸು ಕಂಡಿದ್ದೆ: ನುಡಿಸಿರಿ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ನಾಗತಿಹಳ್ಳಿ

Call us

Call us

Call us

ಅಪಾರ ಉಜಿರೆ | ಕುಂದಾಪ್ರ ಡಾಟ್ ಕಾಂ
ಶಾಲೆಯಲ್ಲಿ ದೊಡ್ಡವರಾದ ಮೇಲೆ ಏನಾಗುತ್ತೀರಿ ಎಂದು ಕೇಳಿದಾಗ ಲಾರಿ ಡ್ರೈವರ್ ಆಗುತ್ತೇನೆಂದು ಉತ್ತರಿಸಿದ್ದೆ; ಅಲ್ಲದೆ ಅದು ನನ್ನ ಕನಸೂ ಆಗಿತ್ತು ಎಂಬುದಾಗಿ ನಾಗತಿಹಳ್ಳಿ ಚಂದ್ರಶೇಖರ್ ತಮ್ಮ ನೆನಪುಗಳನ್ನು ತೆರೆದಿಟ್ಟರು. ಆಳ್ವಾಸ್ ನುಡಿಸಿರಿಯ ಎರಡನೆ ದಿನ ನಡೆದ ಸಮ್ಮೇಳನಾಧ್ಯಕ್ಷರೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು.

Call us

Click Here

ನಾಗತಿಹಳ್ಳಿಗೆ ಸೇರಿಕೊಂಡೇ ಹಾದುಹೋಗಿದ್ದ ಹೆದ್ದಾರಿಯಲ್ಲಿ ದಿನನಿತ್ಯವೂ ನೂರಾರು ಲಾರಿಗಳು ಸಂಚರಿಸುತ್ತಿದ್ದುದರಿಂದ ಚಾಲಕನಾದರೆ ಎಲ್ಲ ರಾಜ್ಯಗಳನ್ನು ನೋಡಬಹುದು ಎಂದು ಕನಸು ಕಂಡಿದ್ದೇ ಈ ಕನಸೇ ಮುಂದೆ ನನಗೆ ದೇಶ ವಿದೇಶಗಳನ್ನು ಪಚಿiಟನೆ ಮಾಡಲು ಬುನಾದಿಯಾಯಿತು. ಇದರ ಫಲವಾಗಿಯೇ ಭಾರತದ ಎಲ್ಲ ರಾಜ್ಯಗಳೂ ಸೇರಿದಂತೆ ವಿಶ್ವದ ೪೦ ದೇಶಗಳಿಗೆ ಸ್ವಂತ ಖರ್ಚಿನಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಮಾತ್ರವಲ್ಲದೆ ಮೂರು ಬಾಗಿ ಭೂಮಿಚಿiನ್ನು ಪಚಿiಟನೆ ಮಾಡಿದ್ದೇನೆ ಎಂದರು.

ಇಂದು ಮೊಬೈಲ್‌ಗಳ ಹಾವಳಿಗೆ ಮಕ್ಕಳು ಮಾತ್ರವಲ್ಲದೆ ಪೋಷಕರೂ ಬಲಿಯಾಗಿರುವುದರಿಂದ ಮಕ್ಕಳಲ್ಲಿ ಕುತೂಹಲ ಮೂಡಿಸುವಂತ ಅಂಶಗಳನ್ನು ರೂಢಿಸಿಕೊಳ್ಳುವಂತ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ, ಈ ಬೆಳವಣಿಗೆ ನಮ್ಮನ್ನು ಕೃತಕ ಯಂತ್ರಗಳನ್ನಾಗಿಸುತ್ತದೆ. ಮಕ್ಕಳನ್ನು ಬಂಧುಗಳ ಮನೆಗಳಿಗೆ, ಮದುವೆ, ಸಮಾರಂಭಗಳಿಗೆ ಕರೆದುಕೊಂಡು ಹೋಗುವುದರಿಂದ ಅವರಲ್ಲಿ ಒಂದು ರೀತಿಯ ಹೊಸ ಚೈತನ್ಯ ಮೂಡುವಂತೆ ಮಾಡಬಹುದು ಎಂದು ಸಲಹೆ ನೀಡಿದರು.

ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರ್ಕಾರ ನೆರವಾಗಬೇಕು ಎಂಬ ವಿಷಯ ಕುರಿತ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರ್ಕಾರಕ್ಕೆ ಅದರದ್ದೇ ಆದ ಅಜೆಂಡಾಗಳಿರುತ್ತವೆ. ಮತ್ತು ಈ ವ್ಯವಸ್ಥೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡಿಸಿಕೊಳ್ಳುವುದು ಕಷ್ಟದ ಕೆಲಸ ಎಂದು ಉತ್ತರಿಸಿದರು.

 

Click here

Click here

Click here

Click Here

Call us

Call us

Leave a Reply