ಕ್ರಾಂತಿಕಾರಿ ಬಳಗಕ್ಕೆ ನಕಲಿ ಹಿಂದುತ್ವವಾದಿಗಳಿಂದ ಸಮಸ್ಯೆ: ಧನಂಜಯ ಕುಂದಾಪುರ

Call us

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಒಂದೆ ಮಾತರಂ ಗೀತೆಯಿಂದ ಈ ದೇಶದಲ್ಲಿ ಒಗ್ಗಟ್ಟು ಪ್ರದರ್ಶಿಸಲು ಸಾಧ್ಯವಿದೆ ಎಂದು ಕೋಟದ ಹೋಟೆಲ್ ಉದ್ಯಮಿ ಕೆ ವೆಂಕಟೇಶ ಪ್ರಭು ಹೇಳಿದ್ದಾರೆ

Call us

Click Here

ಶುಕ್ರವಾರ ಕೋಟ ಹಿರೇಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೂತನವಾಗಿ ಪಾರಂಭಗೊಂಡ ಭಗತ್ ಸಿಂಗ್ ಕ್ರಾಂತಿಕಾರಿ ಬಳಗ ಕೋಟ ವಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು ನಮ್ಮ ದೇಶಕ್ಕೆ ನಮ್ಮವರಿಂದಲೆ ಸಮಸ್ಯೆ ಎದುರಿಸುತ್ತಿದ್ದೇವೆ ಅದು ನಮ್ಮ ಭಕ್ತಿಯ ಕೇಂದ್ರವಾದ ಶಬರಿಮಲೈ ದಿವ್ಯ ಜ್ಯೋತಿಯ ವಿಚಾರವಾಗಿ ಅನುಮಾನ ಹುಟ್ಟಿಸುವ ವಾತಾವರಣ ನಿರ್ಮಾಣಗೈಯುತ್ತಿರುವುದು ಅಲ್ಲದೆ ನಮ್ಮ ಬೇರೆ ಬೇರೆ ವಿಚಾರದಲ್ಲೂ ಇದೇ ರೀತಿಯ ಸಮಸ್ಯೆ ಸೃಷ್ಟಿಸುತ್ತಾರೆ ಇದಕ್ಕೆ ಆಸ್ಪದ ಕೊಡಬಾರದು ಇದರ ಬಗ್ಗೆ ಹಿಂದೂ ಧರ್ಮ ಜಾಗೃತರಾಗಬೇಕಿದೆ ಎಂದರು.

ಸಮಾರಂಭದಲ್ಲಿ ದಿಕ್ಸೂಚಿ ಭಾಷಣಗೈದ ಭಗತ್ ಸಿಂಗ್ ಕ್ರಾಂತಿಕಾರಿ ಬಳಗದ ಧನಂಜಯ ಕುಂದಾಪುರ ಈ ದೇಶದಲ್ಲಿ ಮೂಲವಾಗಿ ಕಾಡುತ್ತಿರುವ ಭಯೋತ್ಪಾದನೆ ,ಮತ್ತಾಂತರ,ಲವ್ ಜಿಹಾದ್ ,ಲ್ಯಾಂಡ್ ಜಿಹಾದ್‌ನಿಂದ ಎದುರಾಗುತ್ತಿರುವ ಸಮಸ್ಯೆಗಳ ವಿರುದ್ಧ ಯಾವ ಸರಕಾರಗಳು ಧ್ವನಿ ಎತ್ತುವುದಿಲ್ಲ ಕ್ರಮಗಳು ಜರಗಿಸುವುದಿಲ್ಲ ಬರೆ ಓಟ್ ಬ್ಯಾಂಕ್ ರಾಜಕಾರಣದಲ್ಲಿ ತೋಡಗಿಕೊಂಡಿದ್ದಾರೆ ಹೀಗಿರುವಾಗ ಈ ರಾಜ್ಯದಲ್ಲಿ ಸಂಘ ಪರಿವಾರದ ಹಲವು ಮುಖಂಡರನ್ನು ಹತ್ಯೆಗೈಯುವ ಕೃತ್ಯಗಳು ರಾಜ್ಯಸರಕಾರ ಕುರುಡು ನೀತಿಯನ್ನು ಎತ್ತಿತೋರಿಸುತ್ತಿದೆ. ಹಿಂದೂ ಸಂಘಟನೆಗಳನ್ನು ಮಟ್ಟ ಹಾಕುವ ಶಡ್ಯಂತರ ನಿರಂತವಾಗಿ ನಡೆಯುತ್ತಿದೆ ಹೀಗಾದರೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತ್ರ ನೀಡುತ್ತೇವೆ ಅಲ್ಲದೆ ಕಳೆದ ಹಲವು ವರ್ಷಗಳಿಂದ ನಮ್ಮ ಸಂಘಟನೆಗೆ ನಮ್ಮವರಿಂದಲೆ ಸಮಸ್ಯೆ ಗಳಾಗುತ್ತಿದೆ ನಾವೆನು ದೇಶ ವಿರೋಧಿ ಸಂಘಟನೆಯೇ ಬರೇ ರಾಜಕಾರಣಕ್ಕೊಸರ ನಕಲಿ ಹಿಂದೂತ್ವ ಪ್ರತಿಪಾದಿಸುವ ರಾಜಕಾರಣಿಗಳಿಗೆ ಬಹಿರಂಗ ಸವಾಲು ಹಾಕುತ್ತಿದ್ದೇವೆ ತಾಕತ್ತು ಇದ್ದರೆ ಈ ದೇಶ ಸೇವಾ ಸಂಘಟನೆಯನ್ನು ತಡೆದು ನಿಲ್ಲಿಸಲು ನಮ್ಮಿಂದ ಸಾಧ್ಯವಿದೆಯೇ ನೋಡಿ ಇದು ನನ್ನ ಘೋಶವಲ್ಲ ಬದಲಾಗಿ ಭಗತ್ ಸಿಂಗ್ ಕ್ರಾಂತಿ ಕಾರಿ ಬಳಗದ ಯುವ ಹೋರಾಟಗಾರರ ರಕ್ತದ ಕೂಗು ಒಂದೆಡೆಯಾದರೆ ಇಲ್ಲಿಗೆ ನಿಲ್ಲಲ್ಲ ಬದಲಾಗಿ ಶತ್ರುಗಳ ಸಂವಾರಕ್ಕೆ ಸ್ವಪ್ನವಾಗಿ ಕಾಡುತ್ತಾರೆ ಈ ದೇಶದ ಸ್ವಾತಂತ್ರ್ಯ ಕ್ಕೆ ಭಗತ್ ಸಿಂಗ್ ತ್ಯಾಗ ಹೇಗೆ ಮಾಡಿದ್ದಾರೊ ಅದೇ ರೀತಿ ಈ ಯುವ ಬಳಗ ಕೂಡಾ ಅದೇ ರೀತಿ ತ್ಯಾಗ ಸಿದ್ಧರಾಗಿದಾರೆ ಎಂದು ಗುಡುಗಿದರಲ್ಲದೆ ಈ ಭರತ ಖಂಡದಲ್ಲಿ ಭಾರತ ಹೇಗಾಯಿತೊ ಅದೆ ಇತಿಹಾಸವನ್ನು ಮತ್ತೆ ಪುನರಾವರ್ತನೆಗೆ ಅವಕಾಶ ನೀಡಬೇಡಿ ಭಾರತ ಎಂದೆಂದಿಗೂ ಸಹಿಷ್ಣುತೆಗೆ ಹೆಸರುವಾಸಿ ರಾಷ್ಟ್ರವಾಗಿದೆ ಅಹಿಷ್ಣುತೆ ಇದ್ದರೆ ಇದೆ ಮುಸ್ಲಿಮ್‌ರಿಗೆ ಇಲ್ಲಿ ಇರಲು ಅವಕಾಶ ಸಿಗುತ್ತಿರಲಿಲ್ಲ ಬದಲಾಗಿ ಅವರು ಅವರ ಪಾಡಿಗೆ ಬದಕಲು ಬಿಟ್ಟಿದ್ದೇವೆ ಎಂದರು.

ಅಧ್ಯಕ್ಷತೆಯನ್ನು ಭಗತ್ ಸಿಂಗ್ ಕ್ರಾಂತಿಕಾರಿ ಬಳಗದ ಅಧ್ಯಕ್ಷ ಉಮೇಶ್ ಪೂಜಾರಿ,ಸಂಚಾಲಕ ಭರತ್ ಕೋಟ , ಮತ್ಸ್ಯೊದ್ಯಮಿ ಸಂದೀಪ್ ಕುಂದರ್ ಕೋಡಿ ಕನ್ಯಾನ,ಭಗತ್ ಸಿಂಗ್ ಕ್ರಾಂತಿಕಾರಿ ಬಳಗ ಕೋಟೇಶ್ವರ ಘಟಕದ ಕಿರಣ್ ಶೆಟ್ಟಿ ಉಪಸ್ಥಿತರಿದ್ದರು. ಕೋಟದ ಸಾಮಾಜಿಕ ಮುಖಂಡ ದಿನೇಶ ಗಾಣಿಗ ಪ್ರಾಸ್ತಾವನೆಗೈದರು.ಭಗತ್ ಸಿಂಗ್ ಯುವ ವೇದಿಕೆಯ ಅಧ್ಯಕ್ಷ ಪ್ರಸಾದ್ ಬಿಲ್ಲವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

eighteen + 15 =