ಅಂತರರಾಷ್ಟ್ರೀಯ ಯೋಗೋತ್ಸವ ಸ್ಪರ್ಧೆಗೆ ಕುಶ ಪೂಜಾರಿ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನ ಎಸ್‌ಜಿಎಸ್ ಇಂಟರ್‌ನ್ಯಾಶನಲ್ ಯೋಗ ಫೌಂಡೇಶನ್ ಕಾಲೇಜು ಮತ್ತು ಸಂಶೋಧನಾ ಕೇಂದ್ರವು ಜ ೨೬ರಿಂದ ೨೮ರ ವರೆಗೆ ಮಲೇಷ್ಯಾದ ಕೌಲಾಲಂಪುರ್‌ನಲ್ಲಿ ನಡೆಸುವ ೬ನೆ ಅಂತರರಾಷ್ಟ್ರೀಯ ಯೋಗೋತ್ಸವ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿರುವ ಭಾರತದ ತಂಡದಲ್ಲಿ ಮರವಂತೆಯ ಯೋಗಪಟು ಕುಶ ಪೂಜಾರಿ ಸ್ಥಾನ ಪಡೆದಿದ್ದಾರೆ.

Call us

Click Here

ಬಾಲ್ಯದಿಂದಲೇ ಯೋಗ ತರಬೇತಿ ಪಡೆದು ಶಾಲೆ, ಕಾಲೇಜುಗಳಲ್ಲಿ ಕಲಿಯುತ್ತಿರುವಾಗ ನಡೆದ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗಳಲ್ಲಿ ಭಾಗವಹಿಸಿ, ಪ್ರಶಸ್ತಿಗಳನ್ನು ಪಡೆದ ಸಾಧನೆ ಕುಶ ಅವರದು. ಬಿ. ಕಾಂ ಪದವಿ ಮುಗಿಸಿರುವ ಅವರು ಪ್ರಸಕ್ತ ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಯೋಗವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಅಧ್ಯಯನ ನಡೆಸುತ್ತಿದ್ದಾರೆ.

ಕುಶ ಪೂಜಾರಿ ಮರವಂತೆ ಗುಳದಾಳಿಬೆಟ್ಟು ರಾಮಚಂದ್ರ ಪೂಜಾರಿ, ಲೀಲಾವತಿ ಪೂಜಾರಿ ದಂಪತಿಯ ಪುತ್ರ. ತನ್ನ ಸಾಧನೆಗೆ ಶಿಕ್ಷಕರಾದ ಎಂ. ವಿ. ಲಮಾಣಿ, ಡಾ. ಯಶೋದಾ ಕರನಿಂಗ, ರಂಜಿತ್ ಟಿ. ಎನ್, ಅವರು ನೀಡಿದ ತರಬೇತಿ, ಮಾರ್ಗದರ್ಶನ, ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಕಾಲೇಜಿನ ಪ್ರಾಂಶುಪಾಲ ದೋಮ ಚಂದ್ರಶೇಖರ್ ನೀಡಿದ ಪ್ರೋತ್ಸಾಹ ಕಾರಣ ಎನ್ನುತ್ತಾರೆ ಕುಶ ಪೂಜಾರಿ.

 

Leave a Reply