ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸೇನಾಪುರ ಗ್ರಾಮದ ಗುಡ್ಡಮ್ಮಾಡಿಯ ಸಾಲಾಡಿ ಎಂಬಲ್ಲಿ ಟ್ಯಾಟೂ ಹಾಕಿಸುವ ವಿಷಯಕ್ಕೆ ಸಂಬಂಧಿಸಿ ಜಗಳ ನಡೆದು ಎದೆಗೆ ಗುಂಡು ಹಾರಿಸಿದ ಘಟನೆ ನಡೆದಿದೆ.
ಮಣಿಪಾಲ ದಶರಥ ನಗರದ ವಿವೇಕ್ ಯು. ಹಚ್ಚೆ ಹಾಕುವ ಕೆಲಸ ಮಾಡಿಕೊಂಡಿದ್ದು, ಪರಿಚಯದ ಸಾಗರ್ ಗೆ ಮನೆಯಲ್ಲಿ ಅರ್ಧ ಹಚ್ಚೆ ಹಾಕಿಸಿ ನಂತರ ಟ್ಯಾಟೂವನ್ನು ಪೂರ್ತಿಗೊಳಿಸಲು ಸಾಗರನ ಬಾಡಿಗೆ ಮನೆಯಾದ ಗುಡ್ಡಮ್ಮಾಡಿಗೆ ಆಗಮಿಸಿದ್ದರು. ಅಲ್ಲಿ ಮಲಗಿದ್ದಾಗ ಸಾಗರ್ ಹಚ್ಚೆ ಸರಿಯಾಗಿಲ್ಲವೆಂದು ತಕರಾರು ತೆಗೆದು ಜಗಳ ಮಾಡಿದ್ದ. ಸುಮಂತ್ ಹಾಗೂ ಆದಿತ್ಯ ಎಂಬುವವರು ವಿವೇಕ್ ರನ್ನು ಹಗ್ಗದಿಂದ ಕಟ್ಟಿಹಾಕಿ ಕಿರುಕುಳ ನೀಡಿ ಹಲ್ಲೆ ಮಾಡಿದರು. ಬಳಿಕ ಸಾಗರ್ ಏರ್ ಗನ್ ತಂದು ವಿವೇಕ್ ನ ಎದೆಗೆ ಗುಂಡು ಹಾರಿಸಿದ್ದಾನೆ. ಗಾಯಾಳು ವಿವೇಕ್ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಪ್ರಕರಣ ದಾಖಲಾಗಿದೆ.










