ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹುಲಿಕುಣಿತದ ಮೂಲಕ ಮನೆಮಾತಾಗಿ ಹುಲಿ ನಾಗೇಶ್ ಅಣ್ಣ ಎಂದೇ ಖ್ಯಾತರಾದ ನಾಗೇಶ್ (75) ಅಸೌಖ್ಯದಿಂದ ಕುಂದಾಪುರ ಸ್ವಗೃಹದಲ್ಲಿ ನಿಧನರಾದರು.
ಚಾಲಕ ವೃತ್ತಿಮಾಡಿಕೊಂಡಿದ್ದ ಅವರು ಹವ್ಯಾಸವಾಗಿ ನವರಾತ್ರಿ ಸಮಯದಲ್ಲಿ ಹುಲಿ ಕುಣಿತ ನಡೆಸುತ್ತಿದ್ದರು. ಕುಂದಾಪುರ ಶ್ರೀ ಕುಂದೇಶ್ವರ ದೇವಸ್ಥಾನ ಎದುರು ಮುಖ್ಯರಸ್ತೆ ಪಕ್ಕದಲ್ಲಿ ಕಳೆದ ಮೂರು ದಶಕಕ್ಕೂ ಮಿಕ್ಕ ನವರಾತ್ರಿಯಲ್ಲಿ ಶಾರದಾಮೂರ್ತಿ ಕೂರಿಸಿ ಪೂಜೆ ನೆರವೇರಿಸಿಕೊಂಡು ಬರುತ್ತಿದ್ದರು. ಇವರ ಹುಲಿ ವೇಷಕ್ಕೆ ವಿಶೇಷ ಆಕರ್ಷಣೆಯಿದ್ದು, ಕಳೆದ ನವರಾತ್ರಿ ಸಮಯದಲ್ಲಿ ಕಲಾಕ್ಷೇತ್ರ ಕುಂದಾಪುರ ವೇಷರಹಿತ ಹುಲಿ ಕುಣಿತ ನಡೆಸಿ ಸನ್ಮಾನಿಸಿದ್ದರು.ಮೃತರು ಪತ್ನಿ, ಮೂವರು ಗಂಡು ಹಾಗೂ ನಾಲ್ವರು ಹೆಣ್ಣು ಮಕ್ಕಳ ಅಗಲಿದ್ದಾರೆ.