ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಇಲ್ಲಿನ ರೋಜರಿ ಮಾತಾ ಇಗರ್ಜಿಯಲ್ಲಿ ಕಥೊಲಿಕ್ ಸಭಾ ಘಟಕ ದಿನಾಚರಣೆ ಪ್ರಯುಕ್ತ ಖಾದ್ಯ ತಿಂಡಿಗಳ ಹಬ್ಬ (ಫುಡ್ ಫೆಸ್ತ್) ಸಹಾಯಕ ಧರ್ಮಗುರು ವಂ.ಜೆರಾಲ್ಡ್ ಸಂದೀಪ್ ಡಿಮೆಲ್ಲೊ ನೇತೃತ್ವದಲ್ಲಿ ಪವಿತ್ರ ಬಲಿದಾನ ಅರ್ಪಿಸಿದರು.
ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜಾ ಶುಭಾಷಯ ಕೋರಿದರು. ನಂತರ ಫುಡ್ ಪೆಸ್ಟ್‌ನಲ್ಲಿ ಕಥೊಲಿಕ್ ಸಭಾ ಸದಸ್ಯರೆ ಸಿದ್ದ ಪದಿಸಿದ ವಿವಿಧ ರೀತಿಯ ಮಾಂಸಹಾರಿ ಖಾದ್ಯಗಳು, ಜೊತೆಗೆಇಡ್ಲಿ, ಶಾವಿಗೆ ಖಾದ್ಯ ತಿಂಡಿಗಳ ಪ್ರದರ್ಶನಕ್ಕೆ ಇಡಲಾಯಿತು.
ಕಥೊಲಿಕ್ ಸಭಾ ಅಧ್ಯಕ್ಷೆ ಶೈಲಾ ಡಿಆಲ್ಮೇಡಾ, ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್, ನಿಕಟ ಪೂರ್ವ ಅಧ್ಯಕ್ಷ ಜೇಕಬ್ ಡಿಸೋಜಾ, ನಿಯೋಜಿತ ಅಧ್ಯಕ್ಷ ವಾಲ್ಟರ್ ಡಿಸೋಜಾ, ಉಪಾಧ್ಯಕ್ಷ ಬರ್ನಾಡ್ ಜೆ. ಡಿಕೋಸ್ತಾ, ಸಹ ಕಾರ್ಯದರ್ಶಿ ನಿರ್ಮಲಾ ಡಿಸೋಜಾ, ಸಹಾಯಕ ಖಚಾಂಚಿ ವಿಲ್ಸನ್ ಡಿಆಲ್ಮೇಡಾ, ಆಮ್ಚೊ ಸಂದೇಶ್ ಪ್ರತಿನಿಧಿ ವಿನ್ಸೆಂಟ್ ಡಿಸೋಜಾ, ರಾಜಕೀಯ ಸಂಚಾಲಕ ಜೋನ್ಸನ್ ಡಿಆಲ್ಮೇಡಾ, ಸರ್ಕಾರಿ ಸವಲತ್ತು ಸಂಚಾಲಕ ವಿನೋದ್ ಕ್ರಾಸ್ಟೊ, ಲೆಕ್ಕ ಪರಿಸೋಧಕ ವಿಲ್ಸನ್ ಒಲಿವೇರಾ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಲೋನಾ ಲುವಿಸ್, ಮೈಕಲ್ ಗೊನ್ಸಾಲ್ವಿಸ್ ಜೆಮ್ಸ್ ಡಿಸೋಜಾ ಇದ್ದರು.