ತನ್ನ ಬಳಕೆದಾರರಿಗೆ ವಾಟ್ಸಾಪ್ ನೀಡಿರುವ ಕರೆ ಸೌಲಭ್ಯ ಉಚಿತವೆಂದು ಭಾವಿಸಿದ್ದ ಮಂದಿಗೆ ಭಾರಿ ಬೇಸರದ ಸುದ್ದಿ. ವಾಟ್ಸಾಪ್ ನಲ್ಲಿ ಮಾಡುವ ಕರೆಯ ಮೂಲಕ ನೀವು ಕಡಿಮೆ ಬೆಲೆಯಲ್ಲಿ ಸ್ನೇಹಿತರ ಜೊತೆ ಮಾತನಾಡಬಹುದು ಎನ್ನುವ ಕಲ್ಪನೆ ಸುಳ್ಳು ಎಂಬುದನ್ನು ವರದಿಯೊಂದು ತಿಳಿಸಿದೆ.
ಲಂಡನ್ ಮೂಲದ ಆಪ್ ಸಂಶೋಧನ ಸಂಸ್ಥೆ ಆಂಡ್ರಾಯ್ಡ್ ಪಿಟ್ ವಾಟ್ಸಾಪ್ ಕರೆಗೆ ಖರ್ಚಾಗುತ್ತಿರುವ ಡೇಟಾ ಪ್ರಮಾಣವನ್ನು ಅಧ್ಯಯನ ಮಾಡಿದ್ದು, ಸಿಮ್ ಮೂಲಕ ಮಾಡುತ್ತಿರುವ ಮಾಮೂಲಿ ಕರೆಗಿಂತಲೂ, ವಾಟ್ಸಾಪ್ ಕರೆಯಲ್ಲಿ ಹೆಚ್ಚು ಹಣ ಎಂದು ಖರ್ಚಾಗುತ್ತದೆ ಎಂದು ಹೇಳಿದೆ.
ಒಂದು ನಿಮಿಷದ ವಾಟ್ಸಾಪ್ ಕರೆಗೆ 1.3 ಎಂಬಿ ಡೇಟಾ ಖರ್ಚಾಗುತ್ತದೆ. ಒಂದು ವೇಳೆ ತಿಂಗಳಿಗೆ 500 ಎಂಬಿ ಡೇಟಾ ಪ್ಲ್ಯಾನ್ ನಿಮ್ಮಲ್ಲಿದ್ದರೆ, ಕೇವಲ 6 ಗಂಟೆಯಲ್ಲಿ 500 ಎಂಬಿ ಡೇಟಾ ಖಾಲಿಯಾಗಲಿದೆ ಎಂದು ಆಂಡ್ರಾಯ್ಡ್‍ಪಿಟ್ ತನ್ನ ವರದಿಯಲ್ಲಿ ತಿಳಿಸಿದೆ.