Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ಎಸ್ಎಫ್ಐ ಆಗ್ರಹ
    ಕುಂದಾಪ್ರದ್ ಸುದ್ಧಿ

    ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ಎಸ್ಎಫ್ಐ ಆಗ್ರಹ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪುರ: ಈ ವರ್ಷದ ಶೈಕ್ಷಣಿ ಅವಧಿಯಿಂದ ಶಾಲಾ, ಕಾಲೇಜು, ಮತ್ತು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸಬೇಕೆಂದು ಭಾತರ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕುಂದಾಪುರ ತಾಲೂಕು ಸಮಿತಿಯು ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ. ವಿದ್ಯಾರ್ಥಿ ಸಂಘದ ಚುನಾವಣೆಯ ಅಗತ್ಯತೆಯ ಕುರಿತು ಕಾಲೇಜು ಮತ್ತು ವಿ.ವಿಗಳಲ್ಲಿ ಮುಂಬರುವ ದಿನಗಳಲ್ಲಿ ಅಭಿಯಾನ ನಡೆಸಲು ಎಸ್.ಎಫ್.ಐ ಚಿಂತನೆ ನಡೆಸುತ್ತಿದೆ. ಈ ಬಗ್ಗೆ ಎಸ್.ಎಫ್.ಐ ಮಾಧ್ಯಮಗಳಿಗೆ ಪ್ರಕಟಣೆಯಲ್ಲಿ ತಿಳಿಸಿದೆ.

    Click Here

    Call us

    Click Here

    ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿ ಪ್ರಾತಿನಿಧ್ಯವನ್ನು ತೆಗೆದು ಹಾಕಲು ಕೇಂದ್ರದಲ್ಲಿ ಎನ್.ಡಿ.ಎ ತೋರಿದ ಆಸಕ್ತಿಯನ್ನು ರಾಜ್ಯದಲ್ಲಿ ಜಾರಿ ಮಾಡಲು ಎಸ್.ಎಮ್ ಕೃಷ್ಣರವರ ಕಾಂಗ್ರೆಸ್ ಸರ್ಕಾರ 2002 ರಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಿಲ್ಲಿಸಿತು. ಅದರ ಮೂಲಕ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ದಮನ ಮಾಡುವ ಕೆಲಸ ರಾಜ್ಯದಲ್ಲಿಯೂ ಆರಂಭವಾಯಿತು. ಕಾಂಗ್ರೇಸ್ ಬಿಜೆಪಿಗಳ ವಿದ್ಯಾರ್ಥಿ ಸಮುದಾಯಕ್ಕೆ ಮಾಡಿದ ದ್ರೋಹದಿಂದಾಗಿ  ವಿದ್ಯಾರ್ಥಿ ಪ್ರಾತಿನಿಧ್ಯ ಸಿಗದೆ ಇರುವ ಪರಿಣಾಮವಾಗಿ ವಿವಿಗಳಲ್ಲಿ ಶುಲ್ಕ ಏರಿಕೆ ವ್ಯಾಪಕ ಭ್ರಷ್ಟಚಾರ ನಡೆದು ದಿವಾಳಿ ಅಂಚಿನಲ್ಲಿವೆ.

    ಸಮಾಜದ ಪ್ರಗತಿಯಲ್ಲಿ ವಿದ್ಯಾರ್ಥಿ-ಯುವಜನರು ತೊಡಗದಂತೆ ತಡೆಹಿಡಿಯಲು ವಿವಿಧ ಪ್ರಯತ್ನಗಳು ನಡೆಯತ್ತಿವೆ. ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಳಕಳಿ, ಜನಪರ ರಾಜಕೀಯ ಚಿಂತನೆಗಳು ಬೆಳೆಯದಂತೆ  ಪಠ್ಯಕ್ರಮವನ್ನು ರೂಪಿಸಲಾಗುತ್ತಿದೆ. ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ನಿರಾಕರಿಸಲಾಗುತ್ತಿದೆ. ಅದಕ್ಕಾಗಿ ತ್ರೈಮಾಸಿಕ, ಸೆಮಿಸ್ಟರ್, ಕ್ರೆಡಿಟ್ ಕೋರ್ಸ್ ಇತ್ಯಾದಿ ಪದ್ದತಿಗಳ ಹೆಸರಿನಲ್ಲಿ ವಿದ್ಯಾರ್ಥಿಗಳು ನಿರಂತರವಾಗಿ ಪರಿಕ್ಷೆಗಳಲ್ಲೇ ಮುಳುಗಿರುವಂತೆ ಮಾಡಲಾಗುತ್ತಿದೆ. ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಿರಾಕರಿಸಿ, ಉದ್ದೇಶ ಪೂರ್ವಕವಾಗಿಯೇ ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಧಮನ ಮಾಡಲಾಗಿದೆ. ನ್ಯಾಯಮೂರ್ತಿ ಲಿಂಗ್ಡೋ ಕಮಿಟಿಯು ಎಲ್ಲ ಹಂತದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆ ನಡೆಸಬೇಕೆಂದು ನೀಡಿರುವ ಶಿಫಾರಸ್ಸು ಜಾರಿಗೆ ತರಲು ಮುಂದಾಗುತ್ತಿಲ್ಲ. ಶೈಕ್ಷಣಿಕ ಕ್ಷೇತ್ರದ ಪ್ರಗತಿಯಲ್ಲಿ ವಿದ್ಯಾರ್ಥಿ-ಶಿಕ್ಷಕ ಸಮುದಾಯದ ಪ್ರಾತಿನಿಧ್ಯವನ್ನು ಹತ್ತಿಕ್ಕಲಾಗುತ್ತಿದೆ.

    ಹಿಂದೆ ರಾಜ್ಯದ ಶಾಲೆ ಕಾಲೇಜಗಳಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆಯುತ್ತಿದ್ದವು  ಸಂಘದ ಪದಾಧಿಕಾರಿಗಳು ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗುತ್ತಿದ್ದರು ಸಂಘದ ಸಭೆ ಸಮಾರಂಭಗಳಲ್ಲಿ ತೊಡಗಿಕೊಂಡಾಗ ವಿದ್ಯಾರ್ಥಿಗಳಲ್ಲಿ ನಾಯಕತ್ವ ಪಕ್ವಗೂಳ್ಳುತ್ತಿತ್ತು. ಅಲ್ಲದೇ ವಿವಿಗಳ ಸೀಂಡಿಕೇಟ, ಸೆನೆಟಗೆ ವಿದ್ಯಾರ್ಥಿ ಸಂಘದ ಚುನಾವಣೆ ಮೂಲಕ ಪ್ರಾತಿನಿದ್ಯ ನೀಡಲಾಗುತ್ತಿತ್ತು. ವಿವಿಗಳು ಅಪಾಯಕಾರಿ ನೀತಿಗಳ ಜಾರಿಗೂಳಿಸಲು ಪ್ರಯತ್ನಿಸಿದಾಗ ವಿದ್ಯಾರ್ಥಿ ಪ್ರತಿನಿಧಿಗಳು ವಿರೋಧ ವ್ಯಕ್ತಪಡಿಸುತ್ತಿದ್ದರು ಶುಲ್ಕ  ಏರಿಕೆ ಕಿರಿಕುಳಗಳ ವಿರೋದ ಹಿಂದೆ ಬಲವಾದ ಹೋರಾಟಗಳು  ನಡೆದಿವೆ ಸೃಜನಶೀಲತೆ, ನಾಯಕತ್ವ ಪ್ರಜಾಪ್ರಭುತ್ವದಲ್ಲಿ ವಿದ್ಯಾರ್ಥಿ ನಾಯಕತ್ವ ರೂಪಗೂಳ್ಳಲು ವಿಧ್ಯಾರ್ಥಿ ಸಂಘದ ಚುನಾವಣೆಗಳು ವೇದಿಕೆಯಾಗಿದ್ದವು. ಇವುಗಳನ್ನು ಮತ್ತಷ್ಟು ಪ್ರಜಾಸತ್ತಾತ್ಮಕಗೂಳಿಸಲು ಕ್ರಮ ಕೈಗೊಳ್ಳುವು ಬದಲಾಗಿ 2002 ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೇಸ ಸರ್ಕಾರದ ಅವದಿಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ರದ್ದುಗೊಳಿಸಿತ್ತು.  90ರ ದಶಕದಲ್ಲಿ ಪ್ರಾರಂಭವಾದ ಜಾಗತೀಕರಣದ  ನೀತಿಗಳು ಶಿಕ್ಷಣ ಕ್ಷೇತ್ರವನ್ನು ಖಾಸಗಿಕರಿಸುವ ಭರಾಟೆಯಲ್ಲಿ ವಿದ್ಯಾರ್ಥಿ ಸಂಘ ಬೋಧಕರ ಸಂಘಗಳನ್ನು ಬಲಹೀನಗೂಳಿಸಲು ಉದ್ದೇಶಿಸಿದ್ದವು. ಅದನ್ನು ರಾಜ್ಯದಲ್ಲಿ ನಯವಾಗಿ ಜಾರಿಗೊಳಿಸಿ ವಿದ್ಯಾರ್ಥಿಗಳಿಗೆ ರಾಜಕೀಯ ಬೇಕಾಗಿಲ್ಲಾ ಎನ್ನುವ ದಿವಾಳಿಕೋರ ಹೇಳಿಕೆಗಳನ್ನು ಹರಿಬಿಡಲಾಯಿತು. ಆದರೆ  ವಿದ್ಯಾರ್ಥಿ ಸಂಘದ ಚುನಾವಣೆ ಉಳಿಕೆಗಾಗಿ ಎಸ್.ಎಫ್.ಐ ದೇಶವ್ಯಾಪಿ ಹೋರಾಟಗಳನ್ನು ಸಂಘಟಿಸುತ್ತ ಬರುತ್ತಿದೆ. ಇದಕ್ಕೆ  ಪೂರಕವಾಗಿ ನ್ಯಾಯದೀಶ ಲಿಂಗ್ಡೋ ಸಮಿತಿಯು ಎಲ್ಲಾ  ಅಂತರ ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆಯಬೇಕು ರಕ್ಷಣಾ ಸಂಸ್ಥೆಗಳಲ್ಲಿ ವಿದ್ಯಾರ್ಥಿ ಪ್ರಾತಿನಿದ್ಯ ಇರಬೇಕು. ಈ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ನೀಡಿತ್ತು.  ಇದನ್ನು ಅನುಸರಿಸಿ ಪಕ್ಕದ ಕೇರಳ ರಾಜ್ಯದಲ್ಲಿ ಎಲ್ಲಾ ಹಂತದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ಉಳಿಸಿಕೋಂಡು ಬರಲಾಗಿದೆ ಹಾಗೇಯೆ ಅನೇಕ ರಾಜ್ಯದಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆಯುತ್ತಿವೆ. ಅದರೆ ರಾಜ್ಯದಲ್ಲಿ ಇನ್ನು ಸಾದ್ಯವಾಗಿಲ್ಲ. ಜನರ ಪಾಲ್ಗೋಳ್ಳುವಿಕೆ ಇಲ್ಲದೆ ಪ್ರಜಾಪ್ರಭುತ್ವ ಬಲಗೊಳುವಿದಿಲ್ಲ. ಹಾಗೆಯೇ ವಿದ್ಯಾರ್ಥಿಗಳನ್ನು ಒಳಗೊಳ್ಳದೆ ಜನಪರ ಶಿಕ್ಷಣ ನೀತಿಗಳನ್ನು ರೂಪಿಸಲು ಸಾದ್ಯವಿಲ್ಲ. ಶಿಕ್ಷಣ ಸಂಪೂರ್ಣ ವ್ಯಾಪಾರಾದ ಸರಕಾಗುತ್ತಿರುವ ಇಂದಿನ ಸಂದರ್ಭದಲ್ಲಿ ಇದಕ್ಕೆ ಪ್ರತಿರೋಧ ಒಡ್ಡಲು ವಿದ್ಯಾರ್ಥಿ ಸಂಘಗಳು ಬಲಗೊಳ್ಳಬೇಕಿದೆ. ಹೀಗಾಗಿ ಎಲ್ಲಾ ಹಂತದ ವಿದ್ಯಾರ್ಥಿ ಸಂಘದ ಚುನಾವಣೆಗಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್.ಎಫ್.ಐ) ಕುಂದಾಪುರ ತಾಲೂಕು ಸಮಿತಿಯು ಒತ್ತಾಯಿಸುತ್ತಿದೆ ಎಂದು ಎಸ್.ಎಫ್.ಐ ತಾಲೂಕು ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ ತಿಳಿಸಿದ್ದಾರೆ.

    Share. Facebook Twitter Pinterest LinkedIn Tumblr Telegram Email
    Editor Desk
    • Website
    • Facebook
    • X (Twitter)

    Related Posts

    ಕುಂದಾಪುರವನ್ನು ಪ್ರವಾಸಿ ಕೇಂದ್ರವಾಗಿಸುವುದಕ್ಕೆ ಮೊದಲ ಆದ್ಯತೆ: ಕುಂದಾಪ್ರ ಕನ್ನಡ ಹಬ್ಬ ಸಮಾರೋಪದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಭರವಸೆ

    28/07/2025

    ಫೋರ್ತ್‌ಫೋಕಸ್‌ಗೆ ʼ2025ರ ಗಮನಾರ್ಹ ಸಂಸ್ಥೆʼ ಪ್ರಶಸ್ತಿ – ಬಿಸಿನೆಸ್ ಔಟ್‌ಲೈನ್‌ನ ಬಿಸಿನೆಸ್ ಎಲೈಟ್ ಅವಾರ್ಡ್‌ನಲ್ಲಿ ಗೌರವ

    18/06/2025

    ಸರ್ಕಾರಿ ಆಸ್ಪತ್ರೆಯ ಡಾಟಾ ಎಂಟ್ರಿ ಆಪರೇಟರ್ ಮುಂದುವರಿಕೆ: ಶಾಸಕ ಕೊಡ್ಗಿ ಮನವಿಗೆ ಸ್ಪಂದನೆ

    06/05/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ ಕೊಂಚಾಡಿ ರಾಧಾ ಶೆಣೈ ಸ.ಹಿ.ಪ್ರಾ ಶಾಲೆಯ ವಾರ್ಷಿಕ ಕ್ರೀಡಾಕೂಟ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ʼಸ್ಟಾರ್ ಎಜುಕೇಶನ್ ಅವಾರ್ಡ್ʼ ಗೌರವ
    • ಸೇವಾ ಮನೋಭಾವದಿಂದ ಮಾಡುವ ಕೆಲಸ ಮನಸ್ಸಿಗೆ ಸಂತೋಷ ನೀಡುತ್ತದೆ: ಅನುಪಮ ಎಸ್. ಶೆಟ್ಟಿ
    • ಸುಜ್ಞಾನ ಪಿಯು ವಿದ್ಯಾರ್ಥಿಗಳಿಂದ ಕೈಗಾರಿಕಾ ಅಧ್ಯಯನ ಪ್ರವಾಸ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಸಲ್ಲಿಕೆ-ಅವಧಿ ವಿಸ್ತರಣೆ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.