ಮನೋಭಾವ, ಯೋಚನೆ ಯಶಸ್ಸಿನ ಉತ್ತುಂಗಕ್ಕೇರಿಸುತ್ತವೆ: ಗೌರ್ ಗೋಪಾಲ್‌ದಾಸ್

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಯಶಸ್ಸು ಎನ್ನುವುದು ನಾವು ಏನನ್ನು ಹೊಂದಿರುತ್ತೇವೆ ಎನ್ನುವುದನ್ನು ಅವಲಂಬಿಸಿರುವುದಿಲ್ಲ ಬದಲಾಗಿ ನಾವು ಹೇಗೆ ಬದುಕುತ್ತೇವೆ ಎನ್ನುವುದನ್ನು ಅವಲಂಬಿಸಿರುತ್ತದೆ. ನಾವು ಜೀವನದಲ್ಲಿ ಏನನ್ನಾದರು ಪಡೆಯುವ ಪ್ರಯತ್ನದಲ್ಲಿ ಜೀವಿಸುವುದನ್ನು ಮರೆಯಬಾರದು’ ಎಂದು ಅಂತರಾಷ್ಟ್ರೀಯ ಖ್ಯಾತಿಯ ಜೀವನಕೌಶಲ್ಯ ಗುರು ಗೌರ್ ಗೋಪಾಲ್ ದಾಸ್ ಹೇಳಿದರು.

Call us

Click Here

ಆಳ್ವಾಸ್ ಕಾಲೇಜಿನ ರೋಸ್ಟ್ರಮ್ ಸ್ಪೀಕರ‍್ಸ್ ಕ್ಲಬ್-ವಿದ್ಯಾರ್ಥಿ ವೇದಿಕೆ ಆಯೋಜಿಸಿದ್ದ ಅತಿಥಿ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಯಶಸ್ಸಿನ ರಹಸ್ಯ’ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

ಯಶಸ್ಸಿನ ವ್ಯಾಖ್ಯಾನವು ಯಾವಾಗಲೂ ಬದಲಾಗುತ್ತಾ ಇರುತ್ತದೆ. ಒಂದು ಕ್ಷೇತ್ರದಿಂದ ಇನ್ನೊಂದು ಕ್ಷೇತ್ರಕ್ಕೆ ಯಶಸ್ಸಿನ ವ್ಯಾಖ್ಯಾನವು ವಿಭಿನ್ನವಾಗಿರುತ್ತದೆ. ನಮ್ಮ ಪ್ರತಿಭೆ, ಸಾಮರ್ಥ್ಯ, ಕೌಶಲ್ಯ, ವ್ಯಕ್ತಿತ್ವವು ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುವುದಿಲ್ಲ ಬದಲಾಗಿ ನಮ್ಮ ಮನೋಭಾವ, ಯೋಚನಾ ಲಹರಿಗಳು ನಮ್ಮನ್ನು ಯಶಸ್ಸಿನೆಡೆಗೆ ಮುನ್ನಡೆಸುತ್ತದೆ. ಒಬ್ಬ ವ್ಯಕ್ತಿ ತನ್ನ ಜೀವನದ ಸವಾಲುಗಳನ್ನು, ಸಮಸ್ಯೆಗಳನ್ನು ಹೇಗೆ ಪರಿಹರಿಸಿಕೊಳ್ಳುತ್ತಾನೆ ಎಂಬುದರ ಮೇಲೆ ಅವನ ಯಶಸ್ಸನ್ನು ನಿರ್ಧರಿಸಲಾಗುತ್ತದೆ.

ಇಂತಹ ವ್ಯಕ್ತಿಗಳು ಇತರರ ಜೀವನದ ಬಗ್ಗೆ ಕುತೂಹಲಿಗಳಾಗಿರುವುದಿಲ್ಲ, ಬದಲಾಗಿ ತಮ್ಮ ಜಿವನದಲ್ಲಿ ಯಾವ ಮಟ್ಟವನ್ನು ತಲುಪಬಹುದು ಎಂಬುದರ ಬಗ್ಗೆ ಯೋಚಿಸುತ್ತಿರುತ್ತಾರೆ. ಹೀಗಾಗಿ ಅವರು ಅದ್ಭುತ ಯಶಸ್ಸು ಸಾಧಿಸುತ್ತಾರೆ ಎಂದು ಹೇಳಿದರು.

ನಮ್ಮ ಯಶಸ್ಸಿನ ಗುಟ್ಟು ಚೂಸ್, ಚೇಂಜ್,ಕನೆಕ್ಟ್ ಎಂಬ ಮೂರು ‘ಸಿ’ಗಳಲ್ಲಿ ಅಡಗಿದೆ. ನಾವು ಇತರರನ್ನು ಅನುಕರಿಸದೇ ನಮ್ಮ ಜೀವನದ ಉತ್ತಮ ಆವೃತ್ತಿಯಾಗಿ ಹೊರಹೊಮ್ಮಬೇಕು. ನಾವು ಎಂತಹ ಸಂದರ್ಭದಲ್ಲೂ ಅವಕಾಶಗಳನ್ನು ಬಿಟ್ಟುಕೊಡಬಾರದು. ಇಂತಹ ಗುಣಗಳಿಂದ ಮಾತ್ರ ನಾವು ಉನ್ನತ ಸ್ಥಾನಕ್ಕೇರಬಹುದು. ಜೊತೆಗೆ ಕಾಲಕ್ಕೆ ತಕ್ಕಂತೆ ಬದಲಾಗುವುದು, ನಿರಂತರವಾಗಿ ಅಪ್‌ಡೇಟ್ ಆಗುವುದು ಕೂಡ ನಮ್ಮನ್ನು ಯಶಸ್ಸಿನೆಡೆಗೆ ಕೊಂಡೊಯ್ಯುತ್ತದೆ. ಒಂದು ವೇಳೆ ನಾವು ಬದಲಾಗದಿದ್ದರೆ ನಾವು ಏನನ್ನೂ ಸಾಧಿಸಲು ಸಾಧ್ಯವಿಲ್ಲ. ನಮಗೆ ಭಾವನಾತ್ಮಕವಾದ ಅಥವಾ ಆಧ್ಯಾತ್ಮಿಕವಾದ ಬೆಂಬಲ ಇರಬೇಕಾದುದು ಕೂಡ ಮುಖ್ಯವಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ‘ಲೈಫ್’ಸ್ ಅಮೇಜಿಂಗ್ ಸೀಕ್ರೆಟ್’ ಎಂಬ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ, ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಮೂಡುಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಮಹಾಚಾರವರ್ಯ ಸ್ವಾಮೀಜಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತೃತೀಯ ಬಿ.ಎಸ್ಸಿ. ವಿಧ್ಯಾರ್ಥಿ ಆಯನಾ ಡಿ’ಸೋಜಾ ನಿರೂಪಿಸಿದರು.

Click here

Click here

Click here

Click Here

Call us

Call us

ಜೀವನದಲ್ಲಿ ಹಣ ಮುಖ್ಯವಲ್ಲ
ನಮ್ಮ ಜೀವನದಲ್ಲಿ ಆಸ್ತಿ, ಹಣ, ಅಂತಸ್ತು ಎಂದಿಗೂ ಮುಖ್ಯವಾಗುವುದಿಲ್ಲ. ಅಂತಸ್ತು ಹೆಚ್ಚಾಗಬಹುದಷ್ಟೇ ಆದರೆ ಜೀವನಕ್ಕೆ ಬೇಕಾದ ಮೂಲಭೂತ ಅವಶ್ಯಕತೆಗಳು ಎಂದಿಗೂ ಹಾಗೆಯೇ ಉಳಿದುಕೊಳ್ಳುತ್ತದೆ. ನಮ್ಮ ಆಲೋಚನೆಗಳು ಶ್ರೀಮಂತವಾಗಬೇಕು, ನಮ್ಮ ಮನೋಭಾವಗಳು ಉನ್ನತ ಮಟ್ಟದ್ದಾಗಿರಬೇಕು ಆಗ ಜೀವನ ಶ್ರೀಮಂತವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಗೋಪಾಲ್‌ದಾಸ್ ಮಾತಿಗೆ ಮರುಳಾದ ಮೂಡುಬಿದಿರೆ
ಆಳ್ವಾಸ್ ಕಾಲೇಜಿನ ವಿದ್ಯಾಗಿರಿ ಆವರಣದ ನುಡಿಸಿರಿ ವೇದಿಕೆಯಲ್ಲಿ ನಡೆದ ಗೋಪಾಲ್‌ದಾಸ್ ಕಾರ್ಯಕ್ರಮದಲ್ಲಿ ಮೂಡುಬಿದಿರೆಯ ಸುಮಾರು 3500 ಜನ ಭಾಗವಹಿಸಿದ್ದರು. ರಾಜಕೀಯ, ಉದ್ಯಮ, ಸಿನಿಮಾ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಗೋಪಾಲ್‌ದಾಸ್ ಮಾತುಗಳಿಗೆ ಸಾಕ್ಷಿಯಾದರು. ಜೊತೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Leave a Reply