ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಪತಂಜಲಿ ಯೋಗ ಪೀಠ ಹರಿದ್ವಾರ, ಪತಂಜಲಿ ಯೋಗ ಸಮಿತಿ ಶಿರೂರು, ಉಡುಪಿ, ಜೆಸಿಐ ಶಿರೂರು ಸಹಭಾಗಿತ್ವದಲ್ಲಿ ರಥ ಸಪ್ತಮಿ ಪ್ರಯುಕ್ತ ಶಿರೂರು ವೆಂಕಟ್ರಮಣ ಸಭಾಭವನದಲ್ಲಿ 108 ಸೂರ್ಯ ನಮಸ್ಕಾರ ನಡೆಯಿತು.
ದೀಪ ಪ್ರಜ್ವಲಿಸಿದ ಯೋಗ ಸಹ ಶಿಕ್ಷಕರಾದ ಶ್ರೀನಿವಾಸ್ ಶೆಣೈ ಮಾತನಾಡಿ ಸಕಲ ಜೀವ ರಾಶಿಗಳಿಗೆ ಚೈತನ್ಯವನ್ನು ತುಂಬಿದ ಸೂರ್ಯ ಜಯಂತಿಯನ್ನು ನಾವು ನಿರೋಗಿಗಳಾಗಿ ಬಾಳುವಂತಾಗಲಿ ಎಂದು ಹಾರೈಸಿದರು. ಯೋಗದಿಂದ ಏಕಾಗ್ರತೆ, ಜೊತೆಗೆ ನಮ್ಮಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರಘುರಾಮ್ ಮೆಸ್ತ, ಸಂಚಾಲಕ ಮೋಹನ್ ರೇವಂಕರ್, ಜೆಸಿಐ ಅಧ್ಯಕ್ಷ ನಾಗೇಶ್ ಕೆ, ಪತ್ರಕರ್ತ ಅರುಣಕುಮಾರ್ ಶಿರೂರು ಉಪಸ್ಥಿತರಿದ್ದರು.