Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಭಾಷೆ ಆಪ್ತವಾದಾಗ ಪರಂಪರೆ ಸಂಸ್ಕೃತಿ ಆಳವಾಗಿ ತಿಳಿದುಕೊಳ್ಳಬಹುದು: ಬಿ. ಜಯಶ್ರೀ
    alvas nudisiri

    ಭಾಷೆ ಆಪ್ತವಾದಾಗ ಪರಂಪರೆ ಸಂಸ್ಕೃತಿ ಆಳವಾಗಿ ತಿಳಿದುಕೊಳ್ಳಬಹುದು: ಬಿ. ಜಯಶ್ರೀ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಮೂಡಬಿದಿರೆ: ನಮ್ಮ ಸಂಸ್ಕೃತಿ ನಮಗೆ ಅರ್ಥವಾಗಬೇಕಾದರೆ ನಮ್ಮ ಭಾಷೆಯಲ್ಲಿ ನೆಲೆನಿಲ್ಲಬೇಕು. ಆಗ ಮಾತ್ರ ನಮ್ಮ ಪರಂಪರೆ ಸಂಸ್ಕೃತಿಯನ್ನು ನಾವು ಆಳವಾಗಿ ತಿಳಿದುಕೊಳ್ಳಲು ಸಾಧ್ಯ ಎಂದು ನಟಿ ಪದ್ಮಶ್ರೀ ಪುರಸ್ಕೃತೆ ಬಿ. ಜಯಶ್ರೀ ಹೇಳಿದರು.

    Click Here

    Call us

    Click Here

    ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಿಜಾರು ಎಐಇಟಿ ಆವರಣದಲ್ಲಿ ನಡೆದ ಟ್ರಡಿಶ್‌ನಲ್ ಡೇ-೨೦೧೯’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ವೈವಿಧ್ಯತೆಯನ್ನು ನಾವು ಈ ಕಾಲೇಜಿನಲ್ಲಿ ಜೀವಂತವಾಗಿ ನೋಡಬಹುದು. ಈ ರೀತಿ ವಿವಿಧ ಸಂಸ್ಕೃತಿಗಳ ಆನಾವರಣದಿಂದ ಸಂಸ್ಕೃತಿ ಮತ್ತು ಪರಂಪರೆಯ ಕೊಡುಕೊಳ್ಳುವಿಕೆಯಾಗಿ ನಮ್ಮ ಭವ್ಯ ಪರಂಪರೆ ನೂರ್ಕಾಲ ಮುಂದುವರೆಯಲು ಸಾಧ್ಯ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ ಎಂ ಮೋಹನ್ ಆಳ್ವ ಮಾತನಾಡಿ ನಮ್ಮ ಪೂರ್ವಜರು ನಮಗೆ ನೀಡಿರುವ ಸಂಸ್ಕೃತಿಯನ್ನು ನಾವು ಜಾಗರೂಕತೆಯಿಂದ ಮುದುವರೆಸಿಕೊಂಡು ಹೋಗುವುದು ನಮ್ಮೆಲ್ಲರ ಮೂಲ ಕರ್ತವ್ಯ ಎಂದು ಹೇಳಿದರು.

    ಯುವಜನತೆ ಮೂಡನಂಬಿಕೆ ಮತ್ತು ನಂಬಿಕೆಯ ನಡುವೆ ಇರುವ ವ್ಯತ್ಯಾಸವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಮೂಡನಂಬಿಕೆಯನ್ನು ಹೋಗಲಾಡಿಸಿ ನಂಬಿಕೆಗಳನ್ನು ಹೆಚ್ಚು ಪ್ರೋತ್ಸಾಹಿಸಿ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ಸಂಸ್ಕೃತಿ ಪರಂಪರೆಯುನ್ನು ’ಫ್ಯಾಶನ್’ ಆಗಿ ನೊಡದೇ ’ಪ್ಯಾಶನ್’ ಆಗಿ ತಮ್ಮ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಕ್ರೀಡಾ ರತ್ನ ಪ್ರಶಸ್ತಿ ವಿಜೇತ ಮೂಡಬಿದಿರೆಯ ಕಂಬಳದ ಓಟಗಾರ ಶ್ರೀನಿವಾಸ ಗೌಡ ಅವರನ್ನು ಗೌರವಿಸಲಾಯಿತು. ಆಳ್ವಾಸ್‌ನ ಬಿವಿಎ ವಿದ್ಯಾರ್ಥಿ ಪ್ರದೀಶ್ ಮ್ಯಾಜಿಕ್ ಆರ್ಟ್ ಮೂಲಕ ನಿರ್ಮಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಹೊಸ ಲೋಗೋವನ್ನು ಅತಿಥಿಗಳು ಬಿಡುಗಡೆ ಮಾಡಿದರು.

    Click here

    Click here

    Click here

    Call us

    Call us

    ಸಭಾ ಕಾರ್ಯಕ್ರಮದ ನಂತರ ಕಲ್ಲಡ್ಕ ಗೊಂಬೆ ಕುಣಿತ, ಮಹಾರಾಷ್ಟ್ರ ಮತ್ತು ಗುಜರಾತ್ ಭಾಗದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಲವಣಿ, ಕೋಯಿ, ಗರ್ಭ, ಗೋನ್ ದಂಡ ನೃತ್ಯ ನಡೆಯಿತು. ಕರಾವಳಿ ಸಾಂಸ್ಲೃತಿಕ ಕಾರ್ಯಕ್ರಮ ಜಾಗಂಟೆ, ಶಂಖ ವಾದನದೊಂದಿಗೆ ಪ್ರಾರಂಭವಾಗಿ ಬಲೀಂದ್ರ ಕರೆಯುವುದು, ಯಕ್ಷಗಾನ, ಆಟಿಕಳಂಜ, ಬ್ಯಾರಿ ದಫ್‌ಮುಟ್, ಕಂಬಳ, ಹುಲಿವೇಷದ ವಿಶೇಷತೆಗಳೊಂದಿಗೆ ಪ್ರದರ್ಶನಗೊಂಡಿತು. ನಂತರ ಕೇರಳದ ಕಲಾರಿ, ಮೋಹಿನಿಅಟ್ಟಂ, ಚೆಂಡೆ, ಕಥಕಳಿ, ಶೃಂಗಾರಿ ನೃತ್ಯದ ಮೂಲಕ ಕೇರಳದ ಪ್ರವಾಹದ ಚಿತ್ರಣವನ್ನು ಕಟ್ಟಿಕೊಡಲಾಯಿತು. ನಂತರ ಕುಡುಬಿ ನೃತ್ಯ, ಮಲ್ಲಕಂಬ, ಈಶಾನ್ಯ ರಾಜ್ಯಗಳ ನೃತ್ಯ, ಡ್ರಾಮ್‌ಜಾಮ್, ರೆಸ್ಟ್ ಆಫ್ ಇಂಡಿಯಾ, ಶ್ರೀಲಂಕಾದ ಸಂಸ್ಕೃತಿಕ ಕಾರ‍್ಯಕ್ರಮಗಳು ಅನಾವರಣಗೊಂಡವು.

    ಕಾರ್ಯಕ್ರಮದಲ್ಲಿ ರಾಜೀವಗಾಂಧಿ ವಿಶ್ವವಿದ್ಯಾಲಯಕ್ಕೆ ಸಂಬಂಧ ಪಟ್ಟ ಕಾಲೇಜುಗಳಲ್ಲಿ ನಡೆದ ವಿವಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಂಜಿಗ್ ಟ್ರಸ್ಟಿ ವಿವೇಕ್ ಆಳ್ವ ಮತ್ತು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಳ್ವಾಸ್ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ನಿರೂಪಿಸಿದರು. ಆರ್ಯವೇದ ವಿಭಾಗದ ಜಿತೇಂದ್ರ ಪೂಜಾರಿ ವಂದಿಸಿದರು.

    *ಸಭಾ ಕಾರ್ಯಕ್ರಮದ ಮೊದಲು ಭವ್ಯ ಮೆರವಣಿಗೆಯಲ್ಲಿ ಕಂಬಳದ ಕೋಣಗಳು, ಕುದುರೆ, ಕಲ್ಲಡ್ಕ ಗೊಂಬೆ, ಕೇರಳ ತಂಡ, ಮಹಾರಾಷ್ಟ್ರ-ಗುಜರಾತ್ ತಂಡ, ಕೇರಳ ತಂಡ, ಕರಾವಳಿ ತಂಡ, ಈಶಾನ್ಯ ರಾಜ್ಯಗಳ ತಂಡ, ಶ್ರೀಲಂಕಾ ತಂಡ, ರೆಸ್ಟ್ ಆಫ್ ಇಂಡಿಯಾದ ಸಾಂಸ್ಕೃತಿಕ ತಂಡಗಳು ಸಾಗಿಬಂದವು.
    *ವಿದ್ಯಾರ್ಥಿಗಳು ಕರಾವಳಿ, ಈಶಾನ್ಯ ರಾಜ್ಯಗಳ, ಕೇರಳ, ಉತ್ತರ ಕರ್ನಾಟಕ ಮತ್ತು ರೆಸ್ಟ್ ಆಫ್ ಇಂಡಿಯಾದ ಖಾದ್ಯಗಳನ್ನು ಸಿದ್ಧಪಡಿಸಿ ಪ್ರತ್ಯೇಕ ಸ್ಟಾಲ್‌ನಲ್ಲಿ ಮಾರಾಟ ಮಾಡಿದರು. *ವಿದ್ಯಾರ್ಥಿಗಳು ವಿವಿಧ ಶೈಲಿಯ ಆಹಾರವನ್ನು ಕಡಿಮೆ ದರದಲ್ಲಿ ಖರೀದಿ ಸಂಭ್ರಮಿಸಿದರು.
    *ವಿವಿಧ ಸಂಪ್ರಾದಾಯದ ಉಡುಗೆ ತೊಡುಗೆಯನ್ನು ಪ್ರದರ್ಶನಕ್ಕೆ ಇಡಲಾಗಿದ್ದು ಈಶಾನ್ಯದ ರಾಜ್ಯದ ಉಡುಗೆ, ಆಭರಣ, ಸಂಗೀತ ಸಂಬಂಧಿಸಿದ ಪರಿಕರಗಳು ಎಲ್ಲರ ಗಮನ ಸೆಳೆದವು.
    * ಲಕ್ಕಿ ಚೇರ್ ಸ್ಪರ್ಧೆಯನ್ನು ಏರ್ಪಡಿಸಿ ಕಾರ‍್ಯಕ್ರಮದಾದ್ಯಂತ ವಿಜೇತರಿಗೆ ಬಹುಮಾನ ನೀಡಲಾಯಿತು.

     

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಖೋ-ಖೋ ಟೂರ್ನಮೆಂಟ್: ಆಳ್ವಾಸ್ ಅವಳಿ ವಿಭಾಗಗಳಲ್ಲಿ ಸಮಗ್ರ ಚಾಂಪಿಯನ್ಸ್

    13/12/2025

    ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

    08/12/2025

    ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌

    06/12/2025
    Leave A Reply Cancel Reply

    Call us

    Click Here

    Call us

    Call us

    Call us
    Highest Viewed Recently
    • ಗಂಗೊಳ್ಳಿ: ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ
    • ಹಟ್ಟಿಅಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಗೆ ಇಟಿ ಟೆಕ್ ಎಕ್ಸ್ ಸ್ಕೂಲ್ ಎಕ್ಸಿಲೆನ್ಸ್ ಪ್ರಶಸ್ತಿ ಗೌರವ
    • ಮನೆಯಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಿ: ಶಿವಾನಂದ ಗಾಣಿಗ
    • ರಾಜ್ಯಮಟ್ಟದ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ: ನೇಹ ಸತ್ಯನಾರಾಯಣ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್‌
    • ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿ ರಚನೆ: ಅರ್ಜಿ ಆಹ್ವಾನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.