ಉಡುಪಿ: ಒಂದು ತಿಂಗಳ ತೋಟಗಾರಿಕೆಯಲ್ಲಿ ಕೌಶಲ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು (ಮೂರು ತರಬೇತಿಗಳು)ಜು. 2ರಿಂದ 31ರ ವರೆಗೆ, ಆ. 1ರಿಂದ 31ರ ವರೆಗೆ ಹಾಗೂ ಸೆ. 1ರಿಂದ 30ರ ವರೆಗೆ ಕೋಲಾರದ ತಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ. ಈ ತರಬೇತಿಗೆ ಅರ್ಹ ರೈತ ಮಕ್ಕಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಸಂಬಂಧಿಧಿಸಿದ ತಾಲೂಕಿನ ತೋಟಗಾರಿಕೆ ಇಲಾಖೆಯಿಂದ ಪಡೆದು ದಾಖಲೆಗಳೊಂದಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ), ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಬೆಂದೂರು ಕ್ರಾಸ್, ಮಂಗಳೂರು ಇಲ್ಲಿಗೆ ಜೂ. 27ರೊಳಗೆ ಸಲ್ಲಿಸಿ ಸಂರ್ದಶನಕ್ಕೆ ಹಾಜರಾಗಲು ತಿಳಿಸಿದೆ.
ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 2,000 ರೂ. ಶಿಷ್ಯ ವೇತನ ನೀಡಲಾಗುವುದು. ಅಭ್ಯರ್ಥಿಗಳು ಎಸೆಸೆಲ್ಸಿ ತೇರ್ಗಡೆಯಾಗಿದ್ದು, ಕನಿಷ್ಠ 18 ವರ್ಷ ವಯಸ್ಸಿನವರಾಗಿರಬೇಕು. ಪೋಷಕರು ಕಡ್ಡಾಯವಾಗಿ ಜಮೀನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ)/ಹಾರ್ಟಿ ಕ್ಲಿನಿಕ್, ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಬೆಂದೂರು ಕ್ರಾಸ್, ಮಂಗಳೂರು ಇಲ್ಲಿ ಸಂಪರ್ಕಿಸಬಹುದು.