ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅನಿಷ್ಟ ಪದ್ದತಿಯನ್ನು ಮೌನ ಹಾಗೂ ರಕ್ತ ರಹಿತಿ ಕ್ರಾಂತಿ ಮೂಲಕ ತೊಡದು ಹಾಕಿದ ಹಿರಿಮೆ ಡಾ. ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಮೇಲು, ಕೇಳು, ಜಾತಿ ವ್ಯವಸ್ಥೆ ತೊಡೆದು ಹಾಕಲು ಶಿಕ್ಷಣದಿಂದ ಮಾತ್ರ ಸಾಧ್ಯ ಎನ್ನೋದು ಅಂಬೇಡ್ಕರ್ ನಂಬಿಕೆಯಾಗಿದ್ದು, ಅದಕ್ಕಾಗಿ ಸಂಘಟನೆ ಮೂಲಕ ಸಂಘರ್ಷವಿಲ್ಲದೆ ಸಾಧಿಸಬೇಕಾಗಿದೆ ಎಂದು ಕುಂದಾಪುರ ಸಹಾಯಕ ಆಯುಕ್ತ ಡಾ. ಎಸ್. ಎಸ್. ಮಧುಕೇಶ್ವರ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಕಂದಾಯ ಇಲಾಖೆ, ಕುಂದಾಪುರ ಪುರಸಭೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಘಟನೆಗಳ ಆಶ್ರಯದಲ್ಲಿ ಕುಂದಾಪುರ ತಾಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಭಾನುವಾರ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಡಾ.ಆಂಬೇಡ್ಕರ್ ಪಡೆದಷ್ಟು ಪದವಿ, ಪಿಹೆಚ್‌ಡಿ ಬೇರಾರು ಪಡೆದಿಲ್ಲ ಎಂದ ಅವರು, ಬ್ರಿಟಿಷ್ ಸರ್ಕಾರದ ವಿರೋಧ ಕಟ್ಟಿಕೊಳ್ಳದೆ ಅವರೊಟ್ಟಿಗೆ ಇದ್ದು ಸಮಾಜಿಕ ನ್ಯಾಯ ಕೊಡಿಸುವಲ್ಲಿ ಅಂಬೇಡ್ಕರ್ ಸಫಲರಾದರು. ಸಮಾಜದ ದೀನ,ದಲಿತರ ಏಳಿಗೆಯ ಹಿನ್ನೆಲೆಯಲ್ಲಿ ಪ್ರತ್ಯೇಕ ದೇಶದ ಬೇಡಿಕೆ ಕೂಡಾ ಇಟ್ಟಿದ್ದ ಅಂಬೇಡ್ಕರ್ ದಲಿತರ ಹಕ್ಕುಗಳ ಹಂತ ಹಂತವಾಗಿ ಪಡೆಯುವಲ್ಲಿ ಯಶಸ್ವಿಯಾದರು ಎಂದು ಹೇಳಿದರು.
ಕುಂದಾಪುರ ತಹಸೀಲ್ದಾರ್ ವೀರೇಂದ್ರ ಬಾಡ್ಕರ್ ಅಧ್ಯಕ್ಷತೆ ವಹಿಸಿದ್ದರು. ಕುಂದಾಪುರ ಡಾ.ಬಿ.ಬಿ.ಹೆಗ್ಡೆ ಪ್ರಥಮ ದರ್ಜೆ ಕಾಲೇಜ್ ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರವೀಣ್ ಮೊಗವೀರ ಗಂಗೊಳ್ಳಿ ಉಪನ್ಯಾಸ ಮಾಡಿದರು.
ಕುಂದಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ಕೆ.ಕಿರಣ್ ಫೆಡ್ನೇಕರ್, ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಇಂದು ಎಮ್. ಇದ್ದರು.
ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್.ವೆರ್ಣೇಕರ್ ಸ್ವಾಗತಿಸಿದರು. ಬಿಸಿಎಂ ಹಾಸ್ಟೆಲ್ ಮೆನೇಜರ್ ರಮೇಶ್ ಕುಲಾಲ್ ನಿರೂಪಿಸಿದರು.