ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿರ್ಭೀತ ಮತದಾನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮೊದಲ ಹಂತದ ಚುನಾವಣೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ತಾಲೂಕು ವಾಪ್ತಿಯ ಮತಗಟ್ಟೆಗಳಲ್ಲಿ ಬಹುಪಾಲು ನಿರ್ಭೀತ ಮತದಾನ ಜರುಗಿತು.

Call us

Click Here

ಕೋಟ ಸಾಸ್ತಾನ ಪರಿಸರದಲ್ಲಿ ಮತಯಂತ್ರ ಕೈಕೊಟ್ಟಿದ್ದರಿಂದ ವಿಳಂಬವಾದ ಮತದಾನ, ಸರತಿಯಲ್ಲಿ ಕಾದು ಮತಯಂತ್ರ ದುರಸ್ತಿ ವಿಳಂಬಬಾಗಿದ್ದರಿಂದ ಮತದಾನ ಮಾಡದೆ ನಿರ್ಗಮಿಸಿದ ಮತದಾರರು, ವಿಧಾನ ಪರಿಷತ್ ಸಭಾಪತಿ ಪ್ರತಾಪಚಂದ್ರ ಶೆಟ್ಟಿ ಸ್ವಕ್ಷೇತ್ರದಲ್ಲಿ, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟತಟ್ಟು ಮತಗಟ್ಟೆಯಲ್ಲಿ ಶ್ರೀನಿವಾಸ ಪೂಜಾರಿ ಸರಿತಿ ಸಾಲಿನಲ್ಲಿ ನಿಂತು ಮತದಾನ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಲಾಡಿಯಲ್ಲಿ ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಬಸ್ರೂರಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಬೆಳಗ್ಗೆಯಿಂದಲೇ ಮತಗಟ್ಟೆಯಲ್ಲಿ ಹಿಂದೆದೂ ಕಂಡಿರದಷ್ಟು ಸರತಿ ಸಾಲಿದ್ದು, ಪೇಟೆ ಗ್ರಾಮಣ ಭಾಗದಲ್ಲಿ ಮತದಾನಕ್ಕೆ ಉತ್ತಮ ಪ್ರತಿಕ್ರಿಯೆ ಕಂಡುಬಂತು. ಗುರುವಾರ ಮದುವೆ ಇನ್ನತರ ಕಾರ‍್ಯಕ್ರಮಗಳು ಹೆಚ್ಚಿದ್ದರಿಂದ ಮತಗಟ್ಟೆಯಲ್ಲಿ ಮತದಾನ ಮಾಡಿ ತೆರಳವ ಧಾವಂತ ಕಂಡುಬಂತು.

ನಕ್ಸಲ್ ಬಾಧಿತ ಪ್ರದೇಶದಲ್ಲಿ ಬಿಗು ಪೊಲೀಸ್ ಬಂದೋಬಸ್ತಿನಲ್ಲಿ ಅಳುಕಿಲ್ಲದೆ ಮತದಾನ ಮಾಡಿದರು. ಮತಗಟ್ಟೆಗಳಲ್ಲಿ ಹಸೆಮಣೆ ಏರುವ ಮುನ್ನಾ ಸರತಿಯಲ್ಲಿ ಬಂದು ಮತದಾನ ಮಾಡಿದ ಯುವತಿ. ಅಂಬೂಲೆನ್ಸ್ ಮೂಲಕ ಬಂದು ಮತದಾನ ಮಾಡಿ ಸ್ಪೂರ್ತಿಯಾದ ಯುವಕ. ಸಖಿ ಮತಗಟ್ಟೆಯಲ್ಲಿ ಮಹಿಳೆಯರ ಪಾರಮ್ಯ. ಮತದಾನದಲ್ಲಿ ಪಾಲ್ಗೊಂಡ ಯುವ ಸಮುದಾಯ.. ವಿದ್ಯಾವಂತರ ನಿರಾಸಕ್ತಿಯೂ ಕಂಡುಬಂತು.

ಬೆಳಗ್ಗೆಯಿಂದಲೇ ಚುರುಕುಗೊಂಡ ಮತಾದಾನ ಹತ್ತು ಗಂಟೆ ಸುಮಾರಿಗೆ ಶೇ.೧೩ರಷ್ಟು ಮತದಾನ ವಾಗಿದ್ದು, ಹೆಚ್ಚಿನ ಎಲ್ಲಾ ಮತಗಟ್ಟೆಯಲ್ಲೂ ಸರತಿ ಸಾಲು ಕಂಡುಬಂತು. 11 ಗಂಟೆಗೆ ಮತದಾನ ಪ್ರಮಾಣ ಶೇ.32ರಷ್ಟಾಗಿದ್ದು, 1 ಗಂಟೆಗೆ ಮತದಾನ ಶೇ.50ಕ್ಕೆ ಏರಿದ್ದು, ಸಂಜೆ 4 ಗಂಟೆ ಮತದಾನ ಪ್ರಮಾಣ ಶೇ65ರಷ್ಟಾಗಿತ್ತು. ದಿನದ ಕೊನೆಯಲ್ಲಿ ಒಟ್ಟಿ ಶೇ.77.61 ರಷ್ಟು ಮತದಾನವಾಗಿದೆ

Click here

Click here

Click here

Click Here

Call us

Call us

ಎಲ್ಲಾ ಮತಗಟ್ಟೆಯಲ್ಲಿ ಮಹಿಳಯರ ಸರತಿ ಸಾಲು ಹೆಚ್ಚಿದ್ದು, ಪುರುಚರಿಗಿಂತ ಮಹಿಳೆಯರೇ ಮತದಾನದಲ್ಲಿ ಮುಂಚೂಣಿಯಲ್ಲಿದ್ದಂತೆ ಕಂಡುಬಂತು. ಆದರೆ ವಿದ್ಯಾವಂತರ ಮತದಾನದಿಂದ ದೂರ ಉಳಿದಂತೆ ಕಂಡು ಬಂದಿದ್ದು, ಯುವ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಡಿದ್ದರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕುಂದಾಪುರದಲ್ಲಿ ಹಿಂದೆಂದೂ ಕಂಡು ಬಾರದ ದಾಖಲೆ ಮತದಾನ ನಡೆದಿರುವುದು ವಿಶೇಷ.

ಮತದಾನದ ಸುತ್ತ:
ಕುಂದಾಪುರ ವಿಧಾನಸಭೆ: ಒಟ್ಟು 203272 ಮತದಾರರು : 2141 ಅಂಗವಿಕಲ ಮತದಾರರು ಇಬ್ಬರು ತೃತೀಯ ಲಿಂಗಿಗಳು ಉಡುಪಿ ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಒಟ್ಟು 8ವಿಧಾನ ಸಭಾ ಕ್ಷೇತ್ರವಿದ್ದು, ಕುಂದಾಪುರ 119 ಕೇಂದ್ರದಲ್ಲಿ, 97689 ಪುರುಷ ಹಾಗೂ 105582 ಮಹಿಳೆ, 2 ತೃತೀಯ ಲಿಂಗ ಮತದಾರರು ಹಾಗೂ 2141 ಅಂಗವಿಕಲ ಮತದಾರರು ಸೇರಿ ಒಟ್ಟು 203273 ಮತದಾರಿರಿದ್ದಾರೆ.

222 ಮತಗಟ್ಟೆಗಳ ತೆರೆಯಲಾಗಿದ್ದು, ಕುಂದಾಪುರ ಹೋಬಳಿ 33, ಕೋಟ ಹೋಬಳಿ 89 ಮತಗಟ್ಟೆಗಳು ಇದೆ. ಇದರಲ್ಲಿ 64 ಸೂಕ್ಷ್ಮ ಮತಗಟ್ಟೆಗಳಾಗಿದ್ದು, 30ವಲ್ನರೇಬಲ್ ಮತಗಟ್ಟೆಗಳೆಂದು ಗುರುತಿಸಲಾಗಿದೆ. ನಾಲ್ಕು ಸಖಿ ಮತಗಟ್ಟೆ, 1 ಅಂಗವಿಕಲರ ಮತಗಟ್ಟೆ, ಕೊರಗ ಸಮಾಜ ಹೆಚ್ಚಿರುವ ಏತ್ನಿಕಲ್ ಮತಗಟ್ಟೆ.

*ಒಟ್ಟು ಅಧ್ಯಕ್ಷಾಧಿಕಾರಿಗಳು 238, ಸಹಾಯಕ ಅಧಿಕಾರಿ 328, ಪೋಲಿಂಗ್ ಅಫೀಸರ್ 546 ಸೇರಿ ಒಟ್ಟು 1022 ಚುನಾವಣೆ ಕರ್ತವ್ಯ, ಅರಣ್ಯ ಇಲಾಖೆ ರಕ್ಷಣಾ ತಂಡ ನಕ್ಸಲ್ ಬಾಧಿತ ಪ್ರದೇಶದಲ್ಲಿ ಅರೆಸೇನಾ ಭದ್ರತಾ ಪಡೆ ನಿಯೋಜನೆ .

► ಹೊಂಬಾಡಿ: ಸರಿತಿಯಲ್ಲಿ ನಿಂತು ಮತ ಚಲಾಯಿಸಿದ ಮದುಮಗಳು! – https://kundapraa.com/?p=31816 .

► ಅಂಬುಲೆನ್ಸ್‌ನಲ್ಲಿ ಬಂದು ಮತದಾನ ಮಾಡಿದ ಯುವಕ – https://kundapraa.com/?p=31819 .

► ಸಖಿ ಮತಗಟ್ಟೆ: ಉತ್ಸಾಹದಿಂದ ಮತ ಚಲಾಯಿಸಿದ ಮಹಿಳಾಮಣಿಯರು – https://kundapraa.com/?p=31823 .

Leave a Reply