ಕುಂದಾಪ್ರ ಡಾಟ್ ಕಾಂ ಸುದ್ದಿ.
ಕಿರಿಮಂಜೇಶ್ವರ : ಶುಭದಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯು ೨೦೧೮-೧೯ ನೇ ಸಾಲಿನಲ್ಲಿ ಅತ್ಯತ್ತಮ ಸರಾಸರಿ ಅಂಕಗಳೊಂದಿಗೆ ಬೈಂದೂರು ವಲಯದಲ್ಲಿ ಶೇಕಡಾ ೧೦೦ ಫಲಿತಾಂಶವನ್ನು ದಾಖಲಿಸಿರುತ್ತದೆ .ಈ ಸಂದರ್ಭದಲ್ಲಿ ಶುಭದಾ ಎಜ್ಯುಕೇಶನಲ್ ಟ್ರಸ್ಟಿನ ಸ್ಥಾಪಕ ಅಧ್ಯಕ್ಷರಾದ ಡಾ|| ಎನ್.ಕೆ. ಬಿಲ್ಲವ ಮತ್ತು ಸಲಹಾ ಸಮಿತಿಯ ಸದಸ್ಯರಾದ ರಾಜೀವ ಶೆಟ್ಟಿ ಇವರು ಶಾಲಾ ಮುಖ್ಯ ಶಿಕ್ಷಕರಾದ ರವಿದಾಸ ಶೆಟ್ಟಿ ಅವರಿಗೆ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು. ಶಾಲೆಯ ನಿರ್ದೇಶಕರಾದ ಕೆ.ಪುಂಡಲೀಕ್ ನಾಯಕ್, ಸಂಯೋಜಕಿ ಗೀತಾದೇವಿ ಅಡಿಗ, ಸಂಚಾಲಕ ಶಂಕರ ಪೂಜಾರಿ, ಉಪಸ್ಥಿತರಿದ್ದರು.