ಅಹಿಂಸೆ, ಪ್ರೀತಿ, ಕರುಣೆಯಿಂದ ದೇವರ ಸಾಕ್ಷಾತ್ಕಾರ: ಶೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮನೆಗಳಲ್ಲಿ, ಗುಡಿಗಳಲ್ಲಿ ನಡೆಸುವ ಅಲ್ಪಕಾಲದ ಆರಾಧನೆ ಸಾಂಕೇತಿಕ. ಉಳಿದ ಅವಧಿಯಲ್ಲಿ ಸಮಾಜದ ಎಲ್ಲರಲ್ಲಿರುವ ದೇವರ ಆರಾಧನೆ ನಡೆಸಬೇಕು. ದೇವರನ್ನು ಪುಷ್ಪಗಳಿಂದ ಪೂಜಿಸುವ ನಾವು ಸಹಜೀವಿಗಳನ್ನು ಅಹಿಂಸೆ, ಪ್ರೀತಿ, ದಯೆ, ಕರುಣೆಗಳೆಂಬ ಭಾವಪುಷ್ಪಗಳಿಂದ ಪೂಜಿಸಬೇಕು ಎಂದು ಉಡುಪಿ ಪೇಜಾವರ ಮಠದ ಶೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

Call us

Click Here

ಉಳ್ಳೂರು ಗ್ರಾಮದ ಮೇಕೋಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪುನರಷ್ಟಬಂಧ ಪ್ರತಿಷ್ಠಾ ಮಹೋತ್ಸವ ಪ್ರಯುಕ್ತ  ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನಗೈದರು. ಗುಡಿಗೋಪುರಗಳಲ್ಲಿ ಮಾಡುವ ದೇವತಾರಾಧನೆಯಿಂದ ಪೂರ್ಣ ಫಲ ದೊರೆಯದು. ಎಲ್ಲ ಜೀವಿಗಳ ಹೃದಯದಲ್ಲಿ ದೇವರು ಇದ್ದಾನೆ ಎಂದು ಭಗವಂತನೇ ಭಗವದ್ಗೀತೆಯಲ್ಲಿ ಸಾರಿದ್ದಾನೆ. ಎಲ್ಲರಿಗೂ ಸುಖ, ಸಂತಸ ಬೇಕು. ಕಷ್ಟ, ದು:ಖ ಬೇಡ. ಆದರೆ ಒಬ್ಬ ತನ್ನ ಸುಖ, ಸಂತೋಷದ ಗಳಿಕೆಗಾಗಿ ನಡೆಸುವ ಕೃತ್ಯಗಳಿಂದ ಬೇರೆಯವರಿಗೆ ಕಷ್ಟ, ದು:ಖ ಆಗಬಾರದು. ಅದನ್ನು ಭಗವಂತ ಮೆಚ್ಚುವುದಿಲ್ಲ ಎಂಬ ಎಚ್ಚರವೂ ಎಲ್ಲರಿಗಿರಬೇಕು ಎಂದರು.

ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅಪ್ಪಣ್ಣ ಹೆಗ್ಡೆ, ಕಮಲಶಿಲೆ ಬ್ರಾಹ್ಮೀ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಆಡಳಿತ ಧರ್ಮದರ್ಶಿ ಎಸ್. ಸಚ್ಚಿದಾನಂದ ಚಾತ್ರ, ದೇವಾಲಯದ ಮುಂದಿನ ಅಭಿವೃದ್ಧಿ ಕುರಿತು ತಮ್ಮ ಅನುಭವಗಳನ್ನು ಮುಂದಿರಿಸಿ ಆಡಳಿತ ಮಂಡಳಿ ಮತ್ತು ಜನರಿಗೆ ಮಾರ್ಗದರ್ಶನ ನೀಡಿದರು.

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವೈ. ಜಯಶೀಲ ಶೆಟ್ಟಿ, ಅಧ್ಯಕ್ಷ ಸತೀಶಕುಮಾರ ಶೆಟ್ಟಿ ಇದ್ದರು. ದೇವಳ ಆಡಳಿತ ಧರ್ಮದರ್ಶಿ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಸ್ವಾಗತಿಸಿ, ದೇವಾಲಯದ ಪೂರ್ವಾಪರಗಳನ್ನು ವಿವರಿಸಿದರು. ವಿಶ್ವನಾಥ ಶೆಟ್ಟಿ ನಿರೂಪಿಸಿ, ಉಮೇಶ ಶೆಟ್ಟಿ ವಂದಿಸಿದರು.

 

Click here

Click here

Click here

Click Here

Call us

Call us

Leave a Reply