ಹೆರಂಜಾಲು: ಜನತಾ ಕಾಲೋನಿಗೆ ಕೊನೆಗೂ ಬಂತು ಟ್ಯಾಂಕರ್ ನೀರು

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಕಂಬದಕೋಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರಂಜಾಲು ಜನತಾ ಕಾಲೋನಿ ನೀರಿನ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ದೊರೆತಿದ್ದು, ಈ ಹಿಂದಿನಂತೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲು ಗ್ರಾಪಂ ಪಿಡಿಓ ಒಪ್ಪಿಗೆ ಸೂಚಿಸಿದ್ದಾರೆ.

Call us

Click Here

ಸೋಮವಾರ ಬೆಳಗ್ಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ, ಕಂಬದಕೋಣೆ ತಾಲೂಕು ಪಂಚಾಯಿತಿ ಸದಸ್ಯ ಮಹೇಂದ್ರ ಪೂಜಾರಿ ತಾಪಂ ಇಒ ಕಿರಣ್ ಫೆಡ್ನೇಕರ್ ಜನತಾ ಕಾಲೋನಿಗೆ ಭೇಟಿ ನೀಡಿ, ಕಾಲನಿ ವಾಸಿಗಳಿಗೆ ನೀರು ಪೂರೈಕೆ ಮಾಡುವಂತೆ ಗ್ರಾಪಂ ಪಿಡಿಒ ಪೂರ್ಣಿಮಾ ಅವರಿಗೆ ತಾಕೀತು ಮಾಡಿದ್ದು, ಸೋಮವಾರ ಸಂಜೆಯಿಂದ ಟ್ಯಾಂಕರ್ ಮೂಲಕ ಜನತಾ ಕಾಲನಿಗೆ ನೀರು ಪೂರೈಕೆ ಆಗಲಿದೆ. ಶಾಸಕರು ಭೇಟಿ ಸಂದರ್ಭದಲ್ಲಿ ಕಾಲನಿ ವಾಸಿಗಳು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಅವಲತ್ತುಕೊಂಡು ಚುನಾವಣೆ ನಂತರದ ದಿನದಿಂದ ನೀರು ಪೂರೈಕೆ ಮಾಡದೆ ಸತಾಯಿಸಿದ್ದು, ನೀರು ಕೊಡುವಂತೆ ಮನವಿ ಮಾಡಿದರೂ ನಿರಾಕರಿಸಲಾಗುತ್ತಿತ್ತು ಎಂದು ತಿಳಿಸಿದ್ದರು.

ಪಿಡಿಒ ಪೂರ್ಣಿಮಾ ಜತೆ ಜನತಾ ಕಾಲನಿಗೆ ಮೊದಲು ಭೇಟಿ ನೀಡಿದ ಮಹೇಂದ್ರ ಪೂಜಾರಿ ನೀರು ನಿಲ್ಲಿಸಿದ ಬಗ್ಗೆ ಪಿಡಿಒ ತರಾಟೆಗೆ ತೆಗೆದುಕೊಂಡು ನೀರಿನ ವಿಷಯದಲ್ಲಿ ರಾಜಕೀಯ ಮಾಡದಂತೆ ಎಚ್ಚರಿಸಿ, ಕಾಲನಿಗೆ ತಕ್ಷಣದಿಂದ ಟ್ಯಾಂಕರ್ ಮೂಲಕ ನೀರು ಪೂರೈಸುವಂತೆ ಸೂಚಿಸಿ, ಪೈಪ್ ಲೈನ್ ಕಾಮಗಾರಿ ಮುಗಿದು ಪೈಪ್‌ನಲ್ಲಿ ನೀರು ಹರಿಯುವ ತನಕ ಟ್ಯಾಂಕರ್ ನೀರು ಪೂರೈಕೆ ಮಾಡಲು ಸೂಚಿಸಿದರು.

ನೀರು ಪೂರೈಕೆ ಹಿನ್ನೆಲೆಯಲ್ಲಿ ಮಾಡಿದ ಪೈಪ್‌ಲೈನ್ ರಸ್ತೆ ಕಾಮಗಾರಿಯಿಂದ ಹಾಳಾಗಿದ್ದು, ದುರಸ್ತಿ ನಂತರ ನೀರು ಪೂರೈಕೆ ಮಾಡಲಾಗುತ್ತದೆ. ದುರಸ್ತಿಗೆ ಅನುಧಾನ ಲಭ್ಯತೆ ಇಲ್ಲದಿದ್ದರೆ ತಾಪಂ ಸದಸ್ಯರ ನಿಧಿಯಿಂದ ಅನುದಾನ ಒದಗಿಸಲಾಗುತ್ತದೆ. ತಕ್ಷಣ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು. ಮಂಗಳವಾರದಿಂದ ಪೈಪ್‌ಲೈನ್ ದುರಸ್ತಿ ಕಾಮಗಾರಿ ಆರಂಭವಾಗಲಿದೆ. ಪೈಪ್ ಲೈನ್ ಕೆಲಸ ಮುಗಿದು ನೀರು ಹರಿವ ತನಕ ಟ್ಯಾಂಕರ್ ಮೂಲಕ ಜನತಾ ಕಾಲನಿಗೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಇಒ ಕಿರಣ್ ಫೆಡ್ನೇಕರ್ ಕುಂದಾಪ್ರ ಡಾಟ್ ಕಾಂಗೆ ತಿಳಿಸಿದ್ದಾರೆ.

ಶಾಸಕರ ಭೇಟಿ ವೇಳೆ ಕಂಬದಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷ ಆನಂದ ಪೂಜಾರಿ ಹಾಗೂ ಪಿಡಿಓ ಇದ್ದರು.

ಪೈಪ್‌ಲೈನ್ ದುರಸ್ತಿಗೆ ಜೆಸಿಬಿ ಮಾಲಿಕ ಹಿಂದೇಟು:
ಪೈಪ್ ಲೈನ್ ದುರಸ್ತಿ ಹಿನ್ನೆಲೆಯಲ್ಲಿ ಜಿಸಿಬಿ ಮಾಲೀಕರ ಜೆಸಿಬಿ ಕೊಡಲು ಹಿಂದೇಟು ಹಾಕುತ್ತಿದ್ದು, ಕುಡಿಯುವ ನೀರು ಪೂರೈಕೆಗೆ ಅಡ್ಡಗಾಲಿಕ್ಕಿದವರು ಜೆಸಿಬಿ ಮಾಲೀಕರಿಗೆ ಧಕ್ಮಿಹಾಕಿ ಜೆಸಿಬಿ ಕೊಡದಂತೆ ಒತ್ತಡ ಹಾಕುತ್ತಿರುವದರಿಂದ ಜೆಸಿಬಿ ಮಾಲೀಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿರುವುದು ಪೈಪ್ ಲೈನ್ ಕೆಲಸಕ್ಕೆ ಹಿನ್ನೆಡೆ ಆಗುವ ಸಂಭವವಿದೆ. ಕುಡಿಯುವ ನೀರು ಕೊಡಬೇಕಿದ್ದರೆ, ಮತ ಎಣೆಕೆಯಲ್ಲಿ ಕಾಂಗ್ರೆಸ್ ಪಕ್ಷ ಲೀಡ್ ಪಡೆಯಬೇಕು. ಲೀಡ್ ಪಡೆಯದಿದ್ದರೆ ನೀರು ಪೂರೈಕೆ ಮಾಡುವುದಿಲ್ಲ ಎಂದು ರಾಜಕೀಯ ಪುಡಾರಿ ಎಚ್ಚರಿಸಿದ್ದಾರೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಪತ್ರಿಕೆಯಲ್ಲಿ ಸುದ್ದಿ ಬಂದ ನಂತರ ಅಧಿಕಾರಿಗಳು ಜನಪತ್ರಿನಿಧಿಗಳು ಬಂದಿದ್ದು, ಅವರ ಎದುರು ನೀರು ಕೊಡುತ್ತೇವೆ ಎಂದು ಮತ್ತೆ ನೀರು ಕೊಡೋದಿಲ್ಲ. ಒಮ್ಮೆ ನೀರು ಕೊಟ್ಟರೂ ನೀರು ಬಿಡದಂತೆ ಒತ್ತಡ ಹಾಕುವುದಿಲ್ಲ ಎನ್ನಲಾಗದು. ಜೆಸಿಬಿ ಮಾಲೀಕರಿಗೆ ಧಮ್ಕಿ ಹಾಕಿದವರು ನಮಗೆ ಹೆದರಿಸೋದಿಲ್ಲ ಅನ್ನೊದಕ್ಕೆ ಏನು ಗ್ಯಾರೆಂಟಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.ಹೆರೆಂಜಾಲು ಜನತಾ ಕಾಲನಿ

ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಶನಿವಾರ ಕುಂದಾಪ್ರ ಡಾಟ್ ಕಾಂ ಹೆರಂಜಾಲು: ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿಗೂ ತಡೆ ಎಂಬ ತಲೆ ಬರಹದಲ್ಲಿ ವಿಸ್ಕೃತ ವರದಿ ಪ್ರಕಟಿಸಿತ್ತು.

ಇದನ್ನೂ ಓದಿ ► ಹೆರಂಜಾಲು: ಜನತಾ ಕಾಲೋನಿಯಲ್ಲಿ ಕುಡಿಯುವ ನೀರಿಗೂ ತಡೆ – https://kundapraa.com/?p=32147 .

ಚುನಾವಣೆ ಆದನಂತರದ ದಿನದಿಂದ ಕುಡಿಯುವ ನೀರು ಕೊಟ್ಟಿಲ್ಲ ಎನ್ನುವುದು ತಿಳಿದು ಖೇದವಾಯಿತು. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಕಾಲನಿ ವಾಸಗಿಗಳಿಗೆ ಯಾವುದೇ ಆಶ್ವಾಸನೆ ನೀಡುವುದಿಲ್ಲ. ಮೇ.೨೩ರ ನಂತರ ಜನತಾ ಕಾಲನಿಗೆ ಶಾಶ್ವತ ಕುಡಿಯುವ ನೀರು ಪೂರೈಕೆ ಏನೆಲ್ಲಾ ಬೇಕೋ ಆ ಎಲ್ಲಾ ವ್ಯವಸ್ಥೆ ಮಾಡುತ್ತೇನೆ ಎಂದು ಗ್ರಾಪಂ ಅಧ್ಯಕ್ಷ ಹಾಗೂ ಪಿಡಿಒ ಎದುರಲ್ಲೇ ಹೇಳಿದ್ದೇನೆ. ಮಂಗಳವಾರ ಬೆಳಗ್ಗೆ ನೀರು ಕೊಡದಿದ್ದರೆ ಜನ ಬಂದು ಗ್ರಾಪಂಗೆ ಮುತ್ತಿಗೆ ಹಾಕಲಿದ್ದಾರೆ. – ಬಿ.ಎಂ.ಸುಕುಮಾರ್ ಶೆಟ್ಟಿ, ಶಾಸಕರು, ಬೈಂದೂರು.

ಬೇಸಿಗೆಯಲ್ಲಿ ನೀರು ಪೂರೈಕೆಗೆ ಯಾರು ತಡೆಯೊಡ್ಡಿದರೂ ಅದು ತಪ್ಪೇ. ಹೆರಂಜಾಲು ಜನತಾ ಕಾಲೋನಿಗೆ ಟ್ಯಾಂಕರ್ ನೀರು ಪೂರೈಕೆ ಮುಂದುವರಿಸುವಂತೆ ಚುನಾವಣೆ ಬಳಿಕ ಕಂಬದಕೋಣೆ ಗ್ರಾಮ ಪಂಚಾಯತ್ ಪಿಡಿಓ ಅವರ ಬಳಿ ಸಾಕಷ್ಟು ಭಾರಿ ಕೇಳಿಕೊಳ್ಳಲಾಗಿತ್ತು. ಆದಾಗ್ಯೂ ವಿವಿಧ ನೆಪ ಹೇಳಿಕೊಂಡು ಜನರಿಗೆ ನೀರು ಕೊಡುವುದನ್ನು ನಿಲ್ಲಿಸಿದ್ದರು. ಪತ್ರಿಕಾ ವರದಿಯ ಬಳಿಕ ಇದೀಗ ಟ್ಯಾಂಕರ್ ನೀರು ಪೂರೈಸುತ್ತೇನೆ ಎಂದಿದ್ದಾರೆ. ಅದು ಹಾಗೆಯೇ ಮುಂದುವರಿಸಬೇಕು. ಮತ್ತೆ ನೆಪವೊಡ್ಡಿ ನಿಲ್ಲಿಸಿದರೆ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ಜನರೊಂದಿಗೆ ಪ್ರತಿಭಟಿಸುತ್ತೇವೆ. – ಗೌರಿ ದೇವಾಡಿಗ, ಜಿ.ಪಂ ಸದಸ್ಯರು ಕಂಬದಕೋಣೆ

ಜನತಾ ಕಾಲನಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು ಎಂದು ಸೂಚಿಸಿದ್ದು, ಅದಕ್ಕೆ ಪಿಡಿಒ ಸಮ್ಮತಿ ಸೂಚಿಸಿದ್ದಾರೆ. ಸೋಮವಾರ ಸಂಜೆಯಿಂದ ಕುಡಿಯುವ ನೀರು ಕಾಲನಿಗೆ ಪೂರೈಕೆ ಮಾಡಬೇಕು. ನೀರು ಪೂರೈಕೆ ಮಾಡಿದ ಟ್ಯಾಂಕರ್ ಚಿತ್ರ ಸಹಿತ ವರದಿ ನೀಡುವಂತೆ ಸೂಸಿದ್ದು, ಪಿಡಿಒ ಒಪ್ಪಿಕೊಂಡಿದ್ದಾರೆ. ಪೈಪ್‌ಲೈನ್ ಕೆಲಸಕ್ಕೆ ಯಾವುದೇ ಅನುಧಾನ ಲಭ್ಯವಿಲ್ಲದಿದ್ದರೆ, ನನ್ನ ತಾಪಂ ಅನುದಾನ ನೀಡುತ್ತೇನೆ ಎಂದಿದ್ದು, ಕಾಮಗಾರಿ ನಡೆಸಲು ಜಿಸಿಬಿ ಎನ್ನಿತರ ಸಿದ್ದತೆಗೆ ಸೂಚಿಸಲಾಗಿದೆ. ಒಂದುವೇಳೆ ನೀರು ಕೊಡಲು ವಿಫಲರಾದರೆ, ಅಥವಾ ಒಂದು ದಿನ ಕೊಟ್ಟು ಮತ್ತೆ ನಿಲ್ಲಿಸಿದರೆ, ಸ್ಥಳೀಯರ ಜತೆ ಸೇರಿಸಿಕೊಂಡು ಗ್ರಾಪಂ ಮುಂದೆ ಧರಣಿ ನಡೆಸಲಾಗುತ್ತದೆ. – ಮಹೇಂದ್ರ ಪೂಜಾರಿ, ತಾ.ಪಂ ಸದಸ್ಯರು, ಕಂಬದಕೋಣೆ.

Leave a Reply