ಅಂತರ್ ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆ: ‘ಶಿಖರ’ ಸತತ ನಾಲ್ಕನೇ ಬಾರಿ ಪ್ರಥಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಂಗಳೂರು ವಿಶ್ವವಿದ್ಯಾನಿಲಯ ನಡೆಸಿದ 2017-18ನೇ ಸಾಲಿನ ಕಾಲೇಜು ವಾರ್ಷಿಕ ಸಂಚಿಕೆ ಸ್ಪರ್ಧೆ ವರ್ಗ-1 (500ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು)ರಲ್ಲಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಸಂಚಿಕೆ ಶಿಖರ ಸತತ ನಾಲ್ಕನೇ ಬಾರಿ ಪ್ರಥಮ ಸ್ಥಾನ ಗಳಿಸಿದೆ.

Call us

Click Here

ವಿ.ವಿ.ಯಲ್ಲಿ ನಡೆದ ಪ್ರಾಂಶುಪಾಲರ ಸಭೆಯಲ್ಲಿ ಪ್ರಭಾರ ಕುಲಪತಿ ಡಾ. ಕಿಶೋರಿ ನಾಯಕ್ ಕೆ. ಪ್ರಶಸ್ತಿಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಮತ್ತು ನಿರ್ವಾಹಕ ಸಂಪಾದಕ ಚೇತನ್ ಶೆಟ್ಟಿ ಕೋವಾಡಿ, ಉಪನ್ಯಾಸ ಸಂ ಸ್ಪೂರ್ತಿ ಎಸ್. ಫೆರ್ನಾಂಡಿಸ್, ಪ್ರವೀಣ್ ಮೊಗವೀರ ಗಂಗೊಳ್ಳಿ, ಡಾ. ದೀಪಾ ರೇಷ್ಮಾ ಶೆಟ್ಟಿ, ರಕ್ಷಿತ್ ರಾವ್ ಗುಜ್ಜಾಡಿ, ನೂತನ್ ಎಸ್. ರವರಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಮಂಗಳೂರು ವಿ.ವಿ.ಯ ಕುಲಸಚಿವ ಪ್ರೊ. ಎ. ಎಮ್. ಖಾನ್, ಪರೀಕ್ಷಾಂಗ ಕುಲಸಚಿವ ಡಾ. ವಿ. ರವೀಂದ್ರಾಚಾರಿ, ಹಣಕಾಸು ಅಧಿಕಾರಿ ಡಾ. ದಯಾನಂದ ನಾಯ್ಕ್ ಉಪಸ್ಥಿತರಿದ್ದರು.

 

Leave a Reply