ಮನು ಹಂದಾಡಿ ಅವರಿಗೆ ಕುಂದಕನ್ನಡ ಶ್ರೀ ಪುರಸ್ಕಾರ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಡಾ| ಶಿವರಾಮ ಕಾರಂತ ಪ್ರತಿಷ್ಠಾನ(ರಿ.)ಕೋಟ, ಡಾ|| ಶಿವರಾಮ ಕಾರಂತ ಟ್ರಸ್ಟ್(ರಿ.)ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ಕುಂದಗನ್ನಡ ಕಟ್ಟುವಲ್ಲಿ ಪ್ರಧಾನ ಭೂಮಿಕೆ ವಹಿಸಿದ ದಿ. ತೆಕ್ಕಟ್ಟೆ ಸುರೇಂದ್ರ ಶೆಟ್ಟಿ ಸ್ಮಾರಕ ಪುರಸ್ಕಾರಕ್ಕೆ ಕುಂದಕನ್ನಡಕ್ಕೆ ಹೊಸ ಭಾಷ್ಯ ಬರೆದ, ಕರ್ನಾಟಕದ ಮೂಲೆ ಮೂಲೆಗೂ ಕುಂದಕನ್ನಡ ಕಂಪನ್ನು ಪಸರಿಸಿದ, ಮಾತಿನಮೋಡಿಯ ಮೂಲಕ ಎಲ್ಲರನ್ನು ನಗುವಿನ ಲೋಕಕ್ಕೆ ಕರೆದೊಯ್ಯಬಲ್ಲ, ಕುಂದಕನ್ನಡ ಸಾಂಸ್ಕೃತಿಕ ರಾಯಭಾರಿ ಮನು ಹಂದಾಡಿ ಅವರು ಆಯ್ಕೆಯಾಗಿದ್ದಾರೆ.

Call us

Click Here

ಕಾರಂತ ಥೀಮ್ ಪಾರ್ಕ್‌ನಲ್ಲಿ ಜುಲೈ ೧೪ರಂದು ರಂದು ಅಪರಾಹ್ನ ೨ ಗಂಟೆಗೆ ನಡೆಯುವ ತಿಂಗಳ ಸಡಗರ -ತಿಂಗಳ ಪುರಸ್ಕಾರ ತೊಳ್ಸಂಬಟ್ಟೆ-೨೦೧೯ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಮನು ಹಂದಾಡಿ ಅವರ ವಿಶೇಷ ಉಪನ್ಯಾಸ ಹಾಗೂ ಅಮೃತ ಉಪಾಧ್ಯ ಅವರ ಸಾರಥ್ಯದಲ್ಲಿ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಅಧ್ಯಕ್ಷ ರಘು ತಿಂಗಳಾಯ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply