‘ಕುಂದಾಪುರಿಯನ್ಸ್ – ಹ್ವಾಯ್ ನಾವ್ ಮರ್ರೆ’ ಸಂಘಟನೆ ಲೋಕಾರ್ಪಣೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕುಂದಾಪುರಿಗರ ಸಂಖ್ಯೆ ಬಹಳ ದೊಡ್ಡದಿದೆ. ತಮ್ಮ ವಿಶಿಷ್ಟ ಶೈಲಿಯ ಕನ್ನಡ ಮಾತಿನಿಂದಲೇ ಗಮನ ಸೆಳೆಯುವ ಇವರ ‘ಆಡು ನುಡಿ’ ಕೇಳೋಂದೆ ಚೆಂದ. ಕುಂದಾಪುರದ ಕನ್ನಡ ಅಂತಲೇ ಖ್ಯಾತಿ ಗಳಿಸಿರುವ ಈ ಭಾಗದ ಜನರ ಪ್ರೀತಿಯೂ ದೊಡ್ಡದು. ಹೊಟೇಲ್, ಬೇಕರಿ, ಬ್ಯಾಂಕಿಂಗ್ ಉದ್ಯೋಗ, ಪತ್ರಿಕೋದ್ಯಮ, ಸಿನೆಮಾ ಹೀಗೆ ಇವರು ಕೈಯಾಡಿಸದ ಕ್ಷೇತ್ರಗಳೇ ಇಲ್ಲ. ಹೀಗೆ ಉದರ ನಿಮಿತ್ಯಂ ಉದ್ಯೋಗ ಅನ್ನೋ ಹಾಗೆ ಬೆಂಗಳೂರು ಸೇರಿರೋ ಕುಂದಾಪುರದ ಕೆಲ ಯುವ ಮನಸ್ಸುಗಳು ಇದೀಗ ತಮ್ಮದೇ ಒಂದು ಸಮಾನ ಮನಸ್ಕರ ತಂಡ ಕಟ್ಟಿಕೊಂಡಿವೆ.

Call us

Click Here

‘ಕುಂದಾಪುರಿಯನ್ಸ್ – ಹ್ವಾಯ್ ನಾವ್ ಮರ್ರೆ’ ಎಂಬ ಚೆಂದದ ಹೆಸರಿಟ್ಟುಕೊಂಡಿರೋ ಈ ಯುವ ಸಂಘಟನೆ ಲೋಕಾರ್ಪಣೆಗೊಂಡಿತು. ನಾಗರಬಾವಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ತಂಡದ ಲೋಗೋ ಹಾಗೂ ಟೀ ಶರ್ಟ್ ಅನಾವರಣಗೊಳಿಸಲಾಯ್ತು. ಕೆಜಿಎಫ್ ಖ್ಯಾತಿಯ ಹೆಸರಾಂತ ಸಂಗೀತ ನಿರ್ದೇಶಕ, ಕುಂದಾಪುರದವರೇ ಆದ ರವಿ ಬಸ್ರೂರು, ತಂಡದ ಲೋಗೋವನ್ನು ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ತಂಡದ ಸದಸ್ಯರಾದ ಬಿಟಿವಿ ವಾಹಿನಿಯ ಸುದ್ದಿ ನಿರೂಪಕ, ರಂಜೀತ್ ಶಿರಿಯಾರ್, ಯುವ ಪತ್ರಕರ್ತ ರೂಪೇಶ್ ಪೂಜಾರಿ ಬೈಂದೂರು, ಶ್ರೀಕಾಂತ್, ನವೀನ್ ಆಚಾರ್ಯ ಸೇರಿದಂತೆ ಸರ್ವ ಸದಸ್ಯರು ಭಾಗಿಯಾಗಿದ್ದರು.

ಬೆಂಗಳೂರು ಮಹಾ ಸಾಗರವಿದ್ದಂತೆ. ಜಗತ್ತಿನ ಯಾವುದೇ ಮೂಲೆಯಿಂದ ಬಂದರೂ ಈ ಮಹಾನಗರಿ ಎಲ್ಲರನ್ನ ತನ್ನ ಒಡಲೊಳಗೆ ಸೇರಿಸಿಕೊಳ್ಳುತೆ. ಇಲ್ಲೊಮ್ಮೆ ಬಂದು ಸೇರಿದರೆ ಸಾಕು ನಾವೆಲ್ಲರೂ ಬೆಂಗಳೂರಿಗರಾಗಿ ಬಿಡ್ತಿವೆ.. ಈ ಊರಿನ ಪ್ರೀತಿ, ಋಣ ಎರಡೂ ದೊಡ್ಡದು.. ಹುಟ್ಟಿದೂರಿನದ್ದು. ಹೂ-ಬಳ್ಳಿಯಂತ ಕರುಳ ಸಂಬಂಧವಾದರೆ.. ಮೆಟ್ಟಿದೂರಿನದ್ದು, ಮಮತೆಯ ಬಂಧ.. ಹೀಗಾಗಿ ಸಿಲಿಕಾನ್ ಸಿಟಿಯ ವಾಸ ಒಂದು ರೀತಿಯಲ್ಲಿ ಬಿಡಿಸಿಕೊಳ್ಳಲಾಗದ ಅನುರಾಗದ ಬಂಧನ.

ಬೆಂಗಳೂರಿಗೆ ನಾವೆಲ್ಲ ಕೆಲಸ ಅರಿಸುತ್ತಲೂ, ಮತ್ತೊಂದು, ಮಗದೊಂದು ಕಾರಣ ಇಟ್ಟು ಇಲ್ಲಿ ಹೆಜ್ಜೆ ಇಡ್ತಿವೆ. ಮೊದಲಿಗೆ ಅಪರಿಚತರಂತೆ ಗುಮ್ಮನಾಗಿ ಕಾಡೋ ಈ ನಗರ ದಿನ ಕಳೆದಂತೆ ಆಪ್ತತೆ ಬೆಳೆಸಿ ನಮ್ಮೊಳಗೆ ಇಳಿದು ಬೀಡುತ್ತೆ. ವಿಜಯನಗರದ ಸುಂದರ ರಸ್ತೆ, ಲಾಲ್‌ಬಾಗ್‌ನ ಮನಮೋಹಕ ಸೆಳೆತ, ಕಬ್ಬನ್ ಪಾರ್ಕ್ನ ಕಚಗುಳಿ ಇಡೋ ವಾತಾವರಣ, ಜಿಕೆವಿಕೆ ಆವರಣದ ಪ್ರಶಾಂತತೆ, ಕೆ,ಆರ್,ಮಾರ್ಕೆಟ್‌ನ ಟಿಪಿಕಲ್ ಸಂತೆಯ ವಾತಾವರಣ ಹೀಗೆ ಆಪ್ತತೆ ತೋರುವ ತಾಣಗಳ ಸಂಖ್ಯೆಯನ್ನ ಎಣಿಸಲಾಗದು.

Click here

Click here

Click here

Click Here

Call us

Call us

ಆದರೆ ಇಷ್ಟೇಲ್ಲಾ ಪ್ರೀತಿಯ ನಡುವೆಯೂ ನಮಗೆ ಹುಟ್ಟೂರಿನ ಸಂತಸ, ತವರು ಜಿಲ್ಲೆಯ ಗೆಳೆಯರ ಒಡನಾಟವನ್ನು ಮಿಸ್ ಮಾಡಿಕೊಳ್ತಿವಿ ಅಂತ ಅನ್ನಿಸದೇ ಇರಲ್ಲ. ನಾವು ಹೋಗುವ ರಸ್ತೆಗಳಲ್ಲಿ ನಮ್ಮೂರಿನ ಹುಡುಗ, ನಮ್ಮ ಜಿಲ್ಲೆಯ ವ್ಯಕ್ತಿಗಳೇನೇದರೂ ಸಿಕ್ಕರೆ ಅದಕ್ಕಿಂತ ಸಂತಸ, ಸಂಭ್ರಮ ಮತ್ತೊಂದಿಲ್ಲ. ಹಾಗೆ ತಮ್ಮದೇ ಊರಿನ, ತಮ್ಮದೇ ತಾಲೂಕು, ಜಿಲ್ಲೆಯ ಜನರು ಒಂದೆಡೆ ಸೇರಿದ್ರೆ ಅದರ ಖುಷಿ ಹೇಳಬೇಕಾ. ಅದನ್ನ ಪದಗಳಲ್ಲಿ ಹೇಳಲಾಗದು. ಅದರಲ್ಲೂ ಹೆಚ್ಚು ಕಡಿಮೆ ಒಂದೇ ವಯೋಮಾನದ, ಸಮಾನ ಮನಸ್ಕ ಗೆಳೆಯರು ಸೇರಿದರಂತೂ ಅದು ಹಾಲಿಗೆ ಸಕ್ಕರೆ ಬೆರಿಸಿದಂತೆ!

ಕೆಲಸದ ಒತ್ತಡದ ನಡುವೆಯೂ ಸೇರಿಕೊಂಡಿರೋ ಈ ಯುವ ಮನಸ್ಸುಗಳು ಸಮಾಜಮುಖಿ ಕಾರ್ಯಕ್ಕೆ ಕೈ ಜೋಡಿಸುತ್ತೆವೆ. ಶಿಸ್ತು, ಸಂಯಮದ ಜೊತೆಗೆ ಬದ್ಧತೆ ಬೆಳಸಿಕೊಂಡಿರೋ ಈ ಯುವ ಮಿತ್ರರು ಒಂದಿಷ್ಟು ಒಳ್ಳೆಯ ಕಾರ್ಯ ಮಾಡಲು ಮುನ್ನುಗ್ಗುತ್ತಿದ್ದಾರೆ.

 

One thought on “‘ಕುಂದಾಪುರಿಯನ್ಸ್ – ಹ್ವಾಯ್ ನಾವ್ ಮರ್ರೆ’ ಸಂಘಟನೆ ಲೋಕಾರ್ಪಣೆ

Leave a Reply