ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ಪತ್ರಿಕೋದ್ಯಮ ವಿಭಾಗದಿಂದ ಪತ್ರಿಕಾ ದಿನಾಚರಣೆ ಮತ್ತು ವೆಬ್ ಮೀಡಿಯಾ ಡಿಸೈನ್ ಕುರಿತು ಕಾರ್ಯಾಗಾರ ನಡೆಯಿತು.
ಅತಿಥಿಗಳಾಗಿ ಆಗಮಿಸಿದ್ದ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಉಪನ್ಯಾಸಕರಾದ ಅಮರ್ ಸಿಕ್ವೆರಾ ಅವರು ವೆಬ್ ಮೀಡಿಯಾ ಡಿಸೈನ್ ಕುರಿತು ಮಾತನಾಡಿ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ವೆಬ್ ಮೀಡಿಯಾದಲ್ಲಿ ತಮ್ಮ ಕೌಶಲ್ಯವನ್ನು ತೋರಿಸಲು ಮತ್ತು ತಮ್ಮ ಪತ್ರಿಕೋದ್ಯಮದ ಪ್ರತಿಭೆಯನ್ನು ಚೆನ್ನಾಗಿ ಉಪಯೋಗಿಸಿಕೊಳ್ಳಲು ಹಲವು ಅವಕಾಶಗಳಿವೆ. ಸಾಕಷ್ಟು ಉಚಿತವಾಗಿ ದೊರಕುವ ವೆಬ್ ಸಾಪ್ಟವೇರ್‌ಗಳು ಲಭ್ಯವಿದೆ. ಅದರ ಕುರಿತು ಮಾಹಿತಿಯ ಜೊತೆಗೆ ಉಪಯೋಗಿಸುವುದನ್ನು ತಿಳಿದುಕೊಳ್ಳಬೇಕು. ಆಗ ನಿಮ್ಮ ಉತ್ತಮ ಪ್ರತಿಭೆಗೆ ವೇದಿಕೆ ಸಿಕ್ಕಂತಾಗುತ್ತದೆ ಎಂದು ಹೇಳಿದರು. ಅಲ್ಲದೇ ಕಾರ್ಯಾಗಾರದಲ್ಲಿ ವೆಬ್ ಮೀಡಿಯಾ ಡಿಸೈನ್ ಮಾಡುವಲ್ಲಿನ ಸುಲಭದ ಅವಕಾಶಗಳು ಮತ್ತು ಹೇಗೆ ಮಾಡಬಹುದು ಎಂಬುದನ್ನು ಕಾರ್ಯಾಗಾರದ ಮೂಲಕ ತಿಳಿಸಿಕೊಟ್ಟರು.
ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಸುಮಲತಾ ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸಂಯೋಜಕಿ ವಿದ್ಯಾರ್ಥಿನಿ ಪ್ರಿಯಾ ಎಂ.ಡಿ ಕಾರ್ಯಾಗಾರದ ಕುರಿತು ಅಭಿಪ್ರಾಯ ತಿಳಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಪ್ರಜ್ವಲ್ ಮಾರ್ಟಿಸ್ ಮತ್ತು ಸ್ಯಾಮ್ಯುಯೆಲ್ ಅವರಿಂದ ಲಘು ಮನರಂಜನಾ ಕಾರ್ಯಕ್ರಮ ನಡೆಯಿತು. ವಿದ್ಯಾರ್ಥಿನಿ ವಿನಿತಾ ಮೆಂಡೊನ್ಸಾ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಪ್ರಜ್ವಲ್ ಮಾರ್ಟಿಸ್ ಸ್ವಾಗತಿಸಿದರು. ವಿದ್ಯಾರ್ಥಿನಿ ಸಾಹಿತ್ಯ ದೇವರಾಜ್ ವಂದಿಸಿದರು.










