Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಆಳ್ವಾಸ್‌ನಲ್ಲಿ ’ಅಡ್ವಾನ್ಸ್‌ಸ್ ಇನ್ ರಿಸರ್ಚ ಆಂಡ್ ಡೆವಲಪ್ಮೆಂಟ್-19’ ವಿಚಾರ ಸಂಕಿರಣ
    alvas nudisiri

    ಆಳ್ವಾಸ್‌ನಲ್ಲಿ ’ಅಡ್ವಾನ್ಸ್‌ಸ್ ಇನ್ ರಿಸರ್ಚ ಆಂಡ್ ಡೆವಲಪ್ಮೆಂಟ್-19’ ವಿಚಾರ ಸಂಕಿರಣ

    Updated:25/07/2019No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಮೂಡುಬಿದಿರೆ: ’ಆಯುರ್ವೇದದಲ್ಲಿ ಸಂಶೋಧನೆಯ ಕಲ್ಪನೆಯೇ ಒಂದು ಸಂತಸದ ವಿಷಯ. ಆಧುನಿಕ ವಿಜ್ಞಾನಕ್ಕೆ ಹೋಲಿಸಿದಾಗ, ಆಯುರ್ವೇದದಲ್ಲಿನ ಸಂಶೋಧನೆ ಬಹಳ ಕಷ್ಟದ ಸಂಗತಿ. ಆದರೂ ಈ ವಿಷಯದಲ್ಲಿ ಹೆಚ್ಚಿನ ಸಂಶೋಧನೆಗಳು ಏರ್ಪಟ್ಟು ಮನುಕುಲಕ್ಕೆ ಅನುಕೂಲವಾಗುವಂತಾಗಬೇಕು ಎಂದು ಕರ್ನಾಟಕ ಸರ್ಕಾರದ ಆಯುಷ್ ವೈದ್ಯಕೀಯ ವಿಜ್ಞಾನದ ಸಹ ನಿರ್ದೇಶಕರಾದ ಡಾ. ಬಿ ಎಸ್ ಶ್ರೀಧರ ತಿಳಿಸಿದರು.

    Click Here

    Call us

    Click Here

    ಅವರು ಗುರುವಾರ ವಿದ್ಯಾಗಿರಿಯ ಡಾ ವಿ.ಎಸ್ ಆಚಾರ‍್ಯ ಸಭಾಂಗಣದಲ್ಲಿ ಆಳ್ವಾಸ್ ಆಯುರ್ವೇದ ಕಾಲೇಜಿನ ವತಿಯಿಂದ ನಡೆದ ’ಅಡ್ವಾನ್ಸ್‌ಸ್ ಇನ್ ರಿಸರ್ಚ ಆಂಡ್ ಡೆವಲಪ್ಮೆಂಟ್-೨೦೧೯’ ಒಂದು ದಿನದ ವಿಚಾರ ಸಂಕಿರಣ ಹಾಗೂ ’ಆತ್ಮ’ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.

    ಕೇರಳ ರಾಜ್ಯವು ಆಯುರ್ವೇದದ ಔಷಧಕ್ಕೆ ದೇಶದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಅದಕ್ಕೆ ಕಾರಣ ಇಲ್ಲಿನ ಜನರಲ್ಲಿ ಆಯುರ್ವೇದದ ಬಗೆಗಿನ ಜಾಗೃತಿ ಹಾಗೂ ಏಕರೀತಿಯ ಚಿಕಿತ್ಸಾ ವ್ಯವಸ್ಥೆ. ಆದರೆ ಬೇರೆ ರಾಜ್ಯಗಳಲ್ಲಿ ಚಿಕಿತ್ಸೆಯ ವ್ಯವಸ್ಥೆ ವಿಭಿನ್ನವಾದ್ದರಿಂದ ಅಷ್ಟೊಂದು ಸಾಫಲ್ಯತೆಯನ್ನು ಪಡೆದಿಲ್ಲ ಎಂದರು.

    ಪ್ರಪಂಚದ ಪ್ರತಿಷ್ಟಿತ ನೊಬೆಲ್ ಪ್ರಶಸ್ತಿಯು ಕಳೆದ ೨೦೧೬, ೨೦೧೭ ಹಾಗೂ ೨೦೧೮ರ ಸಾಲಿನಲ್ಲಿ ವೈದ್ಯಕೀಯ ಶಾಸ್ತ್ರಕ್ಕೆ ನೀಡಿದ ಪ್ರಶಸ್ತಿಯು ಆಯುರ್ವೇದ ಶಾಸ್ತ್ರವನ್ನು ಅವಲಂಬಿಸಿರುವುದು ಉಲ್ಲೇಖನೀಯ ಎಂದರು.

    ಕೇಂದ್ರ ಸರ್ಕಾರ, ಆಯುಷ್ ಸಚಿವಾಲಯ ಹಾಗೂ ರಾಜೀವ್ ಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಆಯುರ್ವೇದದ ಬಗೆಗಿನ ಸಂಶೋಧನಗೆ ಸಾಕಷ್ಟು ಹಣವನ್ನು ಬಿಡುಗಡೆಗೊಳಿಸಿದರೂ, ಸಂಶೋಧನೆ ನಡೆಸುವವರ ಸಂಖ್ಯೆ ವಿರಳವಾಗಿದ್ದು, ಅದರಲ್ಲೂ ಸಲ್ಲಿಸಿದ ಅರ್ಜಿಗಳ ಗುಣಮಟ್ಟವು ಕಳಪೆಯಾಗಿರುತ್ತದೆ ಎಂದರು.

    Click here

    Click here

    Click here

    Call us

    Call us

    ಮುಖ್ಯ ಅತಿಥಿಯಾಗಿ ಆಗಮಿಸಿದ್ದ, ಮೆಲುಕೋಟೆಯ ಅಕಾಡೆಮಿ ಆಫ್ ಸಂಸ್ಕೃತ ರಿಸರ್ಚನ ಮಾಜಿ ನಿರ್ದೇಶಕ ಎಮ್.ಎ. ಲಕ್ಷ್ಮಿ ಆಚಾರ್ ಮಾತನಾಡಿ, ಸಾಹಿತ್ಯಿಕ ಸಂಶೋಧನೆ ಆಯುರ್ವೇದ ವಿಷಯದಲ್ಲಿ ಬಹಳ ವಿರಳವಿದ್ದು, ಈ ಕ್ಷೇತ್ರದಲ್ಲಿ ಸಂಶೋಧನೆಗೆ ವಿಫುಲ ಅವಕಾಶವಿದೆ. ಆಯುರ್ವೇದದ ವಿಷಯಕ್ಕೆ ಸಂಬಂದಪಟ್ಟಂತೆ ೩೦ ಮಿಲಿಯನ್‌ಗೂ ಅಧಿಕ ಹಸ್ತಪ್ರತಿಗಳಿದ್ದು, ಇದರಲ್ಲಿ ಶೇಕಡಾ ೧೦ ರಷ್ಟೂ ಜನರಿಗೆ ಈ ಬಗ್ಗೆ ಮಾಹಿತಿ ಇಲ್ಲ ಎಂದರು. ಇತ್ತೀಚಿನ ದಿನಗಳಲ್ಲಿ ನಾವು ಆಯುರ್ವೇದ ಡಾಕ್ಟರ್‌ನ್ನು ನೋಡಬಹುದೆ ಹೊರತು ಆಯುರ್ವೇದ ವಿದ್ವಾಂಸರನ್ನಲ್ಲ. ಆ ಹಿನ್ನಲೆಯಲ್ಲಿ ಡಾ. ಮೋಹನ್ ಆಳ್ವ ಭಾರತೀಯ ಆಯುರ್ವೇದ ಶಾಸ್ತ್ರವನ್ನು ಬಲಪಡಿಸುವ ಭಾರತೀಯ ವಿಜ್ಞಾನ ವಿಕಾಸ ಪರಿಷತ್ ಎಂಬ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸುವ ಮನಸ್ಸು ಮಾಡಬೇಕು. ಆ ಮೂಲಕ ಭಾರತೀಯ, ಪರಿಸರ ಸ್ನೇಹಿ, ಕಡಿಮೆ ಖರ್ಚಿನ, ಸರಳತೆಯ, ಸುಸ್ಥಿರ ವಿಜ್ಞಾನ ತಂತ್ರಜ್ಞಾನದ ಸಂಶೋಧನೆಗಳಾಗಬೇಕು ಎಂದರು.

    ಕಾರ‍್ಯಕ್ರಮದಲ್ಲಿ ಅಮೇರಿಕಾದ ಮಿಸೌರಿ ವೈದ್ಯಕೀಯ ವಿಶ್ವವಿದ್ಯಾಲಯದ ಇನ್ಸ್‌ಟಿಟ್ಯೂಟ್ ಆಫ್ ಗ್ರೀನ್ ನ್ಯಾನೋ ಟೆಕ್ನಾಲಜಿ ವಿಭಾಗದ ನಿರ್ದೇಶಕ ಡಾ ಕಟ್ಟೇಶ್ ವಿ ಕಟ್ಟಿ, ಉಡುಪಿಯ ಎಸ್ ಡಿ ಎಮ್ ಆಯುರ್ವೇದ ಕಾಲೇಜಿನ ಪ್ರಾಚಾರ‍್ಯ ಡಾ. ಜಿ. ಶ್ರೀನಿವಾಸ ಆಚಾರ‍್ಯ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ ಎಂ. ಮೋಹನ್ ಆಳ್ವ, ಆಳ್ವಾಸ್ ಆಯುರ್ವೇದ ಕಾಲೇಜಿನ ಪ್ರಾಚಾರ‍್ಯ ಡಾ ಝೆನಿಕಾ ಡಿಸೋಜಾ, ಕಾರ‍್ಯಕ್ರಮದ ಸಂಯೋಜಕ ಡಾ ಸುಬ್ರಮಣ್ಯ ಪದ್ಯಾಣ ಉಪಸ್ಥಿತರಿದ್ದರು. ಕಾರ‍್ಯಕ್ರಮವನ್ನು ಡಾ ಗೀತಾ ನಿರೂಪಿಸಿದರು.

    Like this:

    Like Loading...

    Related

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ವೇಯ್ಟ್ ಲಿಫ್ಟಿಂಗ್ ಚಾಂಪಿಯನ್‌ಶಿಪ್: ಆಳ್ವಾಸ್ ಮಹಿಳಾ ತಂಡಕ್ಕೆ ಸಮಗ್ರ ಪ್ರಶಸ್ತಿ

    08/12/2025

    ಖೇಲೋ ಇಂಡಿಯಾ ಗೇಮ್ಸ್‌ನಲ್ಲಿ ಆಳ್ವಾಸ್ ಪುರುಷರ ತಂಡ ಮೂರನೇ ಬಾರಿ ಸಮಗ್ರ ಚಾಂಪಿಯನ್ಸ್‌

    06/12/2025

    ಟ್ರೈ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಸಂಸ್ಥೆ: ಸೋಮಶೇಖರ್ ವಿ.ಕೆ.

    03/12/2025

    Leave a ReplyCancel reply

    Call us

    Click Here

    Call us

    Call us

    Call us
    Highest Viewed Recently
    • ಸಿಎಸ್ ಪರೀಕ್ಷೆಯಲ್ಲಿ ಉತ್ಕೃಷ್ಟ ಸಾಧನೆಗೈದ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು
    • ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ: ನರ್ಸರಿ ವಿಭಾಗದ ವಾರ್ಷಿಕೋತ್ಸವ
    • ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆ: ಅರ್ಜಿ ಆಹ್ವಾನ
    • ಮೂಡ್ಲುಕಟ್ಟೆ: ‘ಅವೇಕೆನ್ ದಿ ಸೂಪರ್ ಹೀರೋ ಇನ್ ಯು’ ಕಾರ್ಯಗಾರ
    • ಅಭ್ಯುದಯ – 2025: ಮದರ್ ತೆರೇಸಾ ಪಿ.ಯು ಕಾಲೇಜು ವಾರ್ಷಿಕೋತ್ಸವ ಸಂಪನ್ನ

    © 2025 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.

    %d