ಪಶ್ಚಿಮ ಘಟ್ಟ ಉಳಿಸಿ ಪೋಷಿಸುವುದು ನಮ್ಮ ಜವಾಬ್ದಾರಿ : ದಿನೇಶ್ ಹೊಳ್ಳ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಅಸಂಖ್ಯಾತ ಜೀವಸಂಕುಲಗಳಲ್ಲಿ ಮನುಷ್ಯ ಬುದ್ಧಿ ವಿವೇಕ ಮತ್ತು ಜಾಗ್ರತಿಯನ್ನು ಪಡೆದುಕೊಂಡಿದ್ದಾನೆ. ಕೇವಲ ತಾನು ಬದುಕುದಷ್ಟೆಯಲ್ಲ, ಉಳಿದ ಜೀವಸಂಕುಲಗಳನ್ನು ಉಳಿಸುವ ಗುರುತರವಾದ ಹೊಣೆ ಆತನ ಮೇಲಿದೆ. ಪರಿಸರದ ಎಲ್ಲಾ ವಸ್ತುಗಳೊಂದಿಗೆ ಪ್ರತ್ಯೇಕ್ಷ ಮತ್ತು ಪರೋಕ್ಷವಾದ ಸಂಬಂಧವನ್ನು ಮನುಷ್ಯ ಹೊಂದಿದ್ದಾನೆ. ಮಾನವನ ಅತಿಯಾಸೆ ಉಳಿದ ಜೀವಸಂಕುಲಗಳಿಗೆ ತೊಂದರೆಯಾಗಬಾರದು ಎನ್ನುವುದು ಪ್ರತಿಯೊಬ್ಬ ಮನುಷ್ಯನ ಪರಮ ಧ್ಯೇಯವಾಗಬೇಕು ಎಂದು ಖ್ಯಾತ ರೇಖಾಚಿತ್ರ ಕಲಾವಿದ, ಪರಿಸರ ಪ್ರೇಮಿ ದಿನೇಶ ಹೊಳ್ಳ ಹೇಳಿದರು.

Call us

Click Here

ಗುರುಕುಲ ವಿದ್ಯಾಸಂಸ್ಥೆಯ ಆಯೋಜಿಸಿದ ಪರಿಸರ ಜಾಗ್ರತಿ ಅಭಿಯಾನದಲ್ಲಿ ಅವರು ಮಾತನಾಡಿ ಪಶ್ಚಿಮಘಟ್ಟಗಳು ಅನೇಕ ನದಿಗಳಿಗೆ ತವರೂರು. ಆದರೆ ಇಂದು ಮಾನವನ ಮನರಂಜನೆಗಾಗಿ ಇಲ್ಲಿಯ ನಿಸಗ ಸೌಂದರ್ಯ ಕಲುಷಿತವಾಗುತ್ತಿದೆ. ಆಸರೆಯಾಗಬೇಕಾದ ಪಶ್ಚಿಮ ಘಟ್ಟಗಳು ಭಯಾನಕತೆಯನ್ನು ಸೃಷ್ಠಿಸುತ್ತಿವೆ. ಅಲ್ಲದೇ ಇಲ್ಲಿ ಜೀವಿಸುವ ಪ್ರಾಣಿ ವರ್ಗ ನಗರ ಪ್ರದೇಶಕ್ಕೆ ಧಾಳಿಯಿಕ್ಕುತ್ತಿವೆ. ಇದಕ್ಕೆಲ್ಲ ಕಾರಣ ಮಾನವ ಪಶ್ಚಿಮ ಘಟ್ಟದ ಮೇಲಿನ ಅತೀಯಾದ ಆಕ್ರಮಣ. ನದಿಗಳು ನಮ್ಮ ಜೀವನಾಡಿಗಳು. ಇದನ್ನು ರಕ್ಷಿಸುವ ಮತ್ತು ಶುದ್ಧವಾಗಿ ಇಟ್ಟುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಮೇಲಿದೆ ಎಂದರು.

ಪ್ರಕೃತಿ ಎಂದರೆ ತಾಯಿ, ತಾಯಿಯೆಂದರೆ ದೇವರು ಎನ್ನುವ ನಾಲ್ನುಡಿಯಂತೆ ನಾವು ಬದುಕಬೇಕು. ಹಾಗೂ ಉಳಿದ ಜೀವಿಗಳೂ ಬದುಕುವಂತೆ ಸ್ವತಂತ್ರ ಅವಕಾಶವನ್ನು ಕಲ್ಪಿಸಿಕೊಡಬೇಕು. ಇದು ಕೇವಲ ಕಾರ್ಯಕ್ರಮಗಳಿಂದ ಆಗುವ ಮಾತಲ್ಲ ಆದರೆ ಪ್ರತಿಯೊಬ್ಬರು ಸ್ವ-ಇಚ್ಚೆಯಿಂದ ಪ್ರಯತ್ನ ಮಾಡಿದರೆ ನಮ್ಮ ಪರಿಸರವನ್ನು ಶುಚಿಯಾಗಿ ಹಾಗೂ ಕಲುಷಿತರಹಿತವಾಗಿ ಕಾಪಾಡಿಕೊಳ್ಳಲು ಸಾದ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಅನುಪಮ ಎಸ್. ಶೆಟ್ಟಿ, ಗುರುಕುಲ ಪದವಿಪೂರ್ವ ಹಾಗೂ ಪಬ್ಲಿಕ್ ಶಾಲೆ ಪ್ರಾಂಶುಪಾಲರುಗ ಅರುಣ್ ಡಿಸಿಲ್ವಾ ಮತ್ತು ಅರವಿಂದ ವಿ. ಮರಳಿ ಉಪಸ್ಥಿತರಿದ್ದರು.

Leave a Reply