ಸಂಘ ಸಂಸ್ಥೆಗಳು ಸಂಕಷ್ಟದಲ್ಲಿದ್ದವರನ್ನು ಸ್ಪಂದಿಸಬೇಕು : ಶೆಟ್ಟಿಗಾರ್

Call us

Call us

Call us

ಕುಂದಾಪುರ: ಕೇವಲ ಸಂಘಗಳನ್ನು ಸ್ಥಾಪನೆ ಮಾಡಿದರೆ ಸಾಲದು ಬದಲಾಗಿ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಸಂಕಷ್ಟದಲ್ಲಿದ್ದವರನ್ನು ಸ್ಪಂದಿಸಬೇಕು. ಇಂತಹ ಸಂಕಷ್ಟಪರಿಹಾರ ನಿಧಿಗಾಗಿ ಆರಂಭಿಕ ದೇಣಿಗೆಯಾಗಿ ವಾಸ್ತುತಜ್ಞ ಬಸವರಾಜ್ ಶೆಟ್ಟಿಗಾರ್‌ರವರು ತಮ್ಮ ತಂದೆಯವರ ಸ್ಮರಣಾರ್ಥ  ದೇಣಿಗೆ ನೀಡಿರುವುದು ಶ್ಲಾಘನೀಯ ಎಂದು ತ್ರಾಸಿ ವಲಯ ಶೆಟ್ಟಿಗಾರರ ನೂತನ ಸಂಘವನ್ನು ಉದ್ಘಾಟನೆ ಮಾಡಿದ ಸಾಲಿಕೇರಿ ದೇವಸ್ಥಾನದ ಆಡಳಿತ ಮುಕ್ತೇಸರರಾದ ಸದಾಶಿವ ಶೆಟ್ಟಿಗಾರರು ಹೇಳಿದರು.

Call us

Click Here

ದಕ್ಷಿಣಕನ್ನಡ ಪದ್ಮಶಾಲಿ ಮಹಾಸಭಾದ ಉಪಾಧ್ಯಕ್ಷರಾದ ಜಯರಾಮ್ ಶೆಟ್ಟಿಗಾರ್‌ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಜ್ಯೋತಿಷಿ ಹಾಗೂ ಪ್ರಸಂಗಕರ್ತ ಬಸವರಾಜ್ ಶೆಟ್ಟಿಗಾರ್‌ರವರು ಮಾತನಾಡುತ್ತಾ – ಸಂಘ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ನಾವು ಸಂಘಕ್ಕೆ ಏನು ಕೊಟಿದ್ದೇವೆ ಎಂಬುದು ಮುಖ್ಯ ಹಾಗಾಗಿ ಯಾವುದೇ ಸಂಘಟನೆ ಬಲಗೊಳ್ಳಬೇಕಾದರೆ ಪ್ರತಿಯೊಬ್ಬರು ನಿಷ್ಟೆಯಿಂದ, ಶ್ರದ್ಧೆಯಿಂದ, ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಸಾಧ್ಯ. ಈ ಸಂಘಟನೆ ನೂರ‍್ಕಾಲ ಬಾಳಿ ಬೆಳಗಲಿ ಎಂದು ಶುಭ ಹಾರೈಸಿದರು.
ರಾಜಕೀಯ ಮುಖಂಡ ರಾಜುದೇವಾಡಿಗ, ಸಾಲಿಕೇರಿ ದೇವಸ್ಥಾನದ ಟ್ರಸ್ಟಿ ಬಾಲಕೃಷ್ಣ ಶೆಟ್ಟಿಗಾರ್, ಉದ್ಯಮಿ ಗಣಪತಿ ಶೆಟ್ಟಿಗಾರ್, ಮಹಾಲಿಂಗ ಶೆಟ್ಟಿಗಾರ್, ಗುರಿಕಾರ ಕೇಶವ ಶೆಟ್ಟಿಗಾರ್‌ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ನೂತನ ಅಧ್ಯಕ್ಷರಾಗಿ ರವೀಂದ್ರ ಶೆಟ್ಟಿಗಾರ್ ಕೊಳ್ಕೇರೆ, ಉಪಾಧ್ಯಕ್ಷರಾಗಿ ಚಂದ್ರಶೆಟ್ಟಿಗಾರ್ ಕಮ್ಮಾರ್‌ಕೊಡ್ಲು, ಕಾರ್ಯದರ್ಶಿ ಉದಯಶೆಟ್ಟಿಗಾರ್ ಕೊಳ್ಕೇರೆಯವರನ್ನು ಆಯ್ಕೆ ಮಾಡಲಾಯಿತು. ರಾಜೇಂದ್ರ ಶೆಟ್ಟಿಗಾರ್ ಸ್ವಾಗತಿಸಿ ವಂದಿಸಿದರು.

Leave a Reply