ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ವಸ್ತು ಸಂಗ್ರಹಾಲಯದ ನೇತೃತ್ವದಲ್ಲಿ ವಿಶೇಷ ಸಂಚಾರಿ ಬಸ್ಸಿನಲ್ಲಿ ʼಮ್ಯೂಸಿಯಂ ಆನ್ ವ್ಹೀಲ್ʼ ಅಪರೂಪದ ವಸ್ತು ಸಂಗ್ರಹಾಲಯದ ಪ್ರದರ್ಶನ ವೀಕ್ಷಣೆಗೆ ಕರ್ನಾಟಕದ ಕರಾವಳಿಯ ಆಯ್ದ ಶಾಲೆಗಳ ಮಕ್ಕಳಿಗೆ ಜೂನ್ 12 ಮತ್ತು 13ರಂದು ಅವಕಾಶ ಮಾಡಿಕೊಡಲಾಗಿದ್ದು, ಬೈಂದೂರು ವಲಯದ 20 ಶಾಲೆಗಳ ವಿದ್ಯಾರ್ಥಿಗಳಿಗೆ ಈ ಪ್ರದರ್ಶನ ನಡೆಯಲಿದೆ.
ಜೂನ್ 12ರ ಬೆಳಿಗ್ಗೆ 10 ಗಂಟಗೆ ಬೈಂದೂರು ಮಾದರಿ ಶಾಲೆಯ ಆರಂಭದ ಪ್ರದರ್ಶನ ಇರಲಿದ್ದು, ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರಿಗೂ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಈ ಕಾರ್ಯಕ್ರಮದ ನಿರ್ವಹಣೆಯನ್ನು ಕುಂದ ಅಧ್ಯಯನ ಕೇಂದ್ರ ಉಪ್ಪುಂದದ ಸಂಚಾಲಕರಾದ ಗಣಪತಿ ಹೋಬಳಿದಾರ್ ಮಾಡಲಿದ್ದು, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಶಿಕ್ಷಣ ಸಂಯೋಜಕ, ಸಿ.ಆರ್.ಸಿಗಳು ಸಹಕಾರ ನೀಡಲಿದ್ದಾರೆ.