ಕುಂದಾಪುರ: ಯೋಗ ಚಾಂಪಿಯನ್‌ಶಿಪ್ ವಿಜೇತ ಧನ್ವಿಗೆ ಅದ್ದೂರಿ ಸ್ವಾಗತ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮಲೇಷ್ಯಾ ಎಸ್‌ಜಿಎಸ್ ಇನ್‌ಸ್ಟಿಟ್ಯೂಟ್ ಆಫ್ ಯೋಗ ಫೌಂಡೇಶನ್ ಕಾಲೇಜ್ &ರಿಸರ್ಚ್ ಸೆಂಟರ್‌ನಲ್ಲಿ ನಡೆದ ಟ್ರ್ಯಾಕ್ಸ್ ಇಂಟರ್‌ನ್ಯಾಶನಲ್ ಯೋಗದಲ್ಲಿ ಅಥ್ಲೆಟಿಕ್ ಯೋಗ ಚಾಂಪಿಯನ್‌ಶಿಪ್ ವಿಭಾಗದಲ್ಲಿ ಮೊದಲ ಸ್ಥಾನ ಹಾಗೂ ಚಿನ್ನದ ಪದಕ ಮತ್ತು ಆರ್ಟಿಸ್ಟಿಕ್ ಯೋಗ ಚಾಂಪಿಯನ್‌ಶಿಪ್‌ನಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದು ಮರಳಿದ ಮರವಂತೆ ಧನ್ವಿ ಪೂಜಾರಿಗೆ ಗುರುವಾರ ಕುಂದಾಪುರ ತಾಲೂಕು ಬಿಲ್ಲವ ಸಂಘ, ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಕುಂದಾಪುರ ಶಾಸ್ತ್ರೀ ವೃತ್ತದಲ್ಲಿ ಧನ್ವಿ ಪೂಜಾರಿಗೆ ಅದ್ದೂರಿ ಸ್ವಾಗತ ನೀಡಿ ತೆರದ ವಾಹನದಲ್ಲಿ ಮರವಂತೆಯವರೆಗೆ ಮೆರವಣಿಗೆ ಮೂಲಕ ಕರೆದೊಯ್ದರು.

Call us

Click Here

ಈ ಸಂದರ್ಭ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಎಸ್. ರಾಜು ಪೂಜಾರಿ, ಬಿಲ್ಲವ ಮುಖಂಡರಾದ ಮಂಜು ಬಿಲ್ಲವ, ಭಾಸ್ಕರ ಬಿಲ್ಲವ, ಮಹಿಳಾ ಸಾಂತ್ವಾನ ಕೇಂದ್ರದ ಅಧ್ಯಕ್ಷೆ ರಾಧಾದಾಸ್, ನಾರಾಯಣಗುರು ಯುವಕ ಮಂಡಲ, ಮೈಲಾರೇಶ್ವರ ಯುವಕ ಮಂಡಲ, ರಾಯಲ್ ಕ್ಲಬ್, ಕುಂದಾಪುರ ಜೆಸಿಐ, ಸಂಗಮ್ ಫ್ರೆಂಡ್ಸ್ ಕುಂದಾಪುರ, ಕುಂದಾಪುರ ಪುರಸಭೆಯ ಸದಸ್ಯರುಗಳು, ಮಿರಾಕಲ್ ಡಾನ್ಸ್ ಅಕಾಡೆಮಿ ಮುಖ್ಯಸ್ಥ ಪ್ರವೀಣ್ ಬಾಳಿಕೆರೆ, ಬೈಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ, ಪತ್ರಕರ್ತ ಭಾಸ್ಕರ ಶೆಟ್ಟಿ, ವಿವಿಧ ಸಂಘಟನೆಗಳ ಪ್ರಮುಖರಾದ ದಿವಾಕರ ಕಡ್ಗಿ, ಮನ್ಸೂರ್ ಮರವಂತೆ, ಹುಸೇನ್ ಹೈಕಾಡಿ, ಅಭಿನಂದಿಸಿ ಬರಮಾಡಿಕೊಂಡರು.

Leave a Reply