ಕುಂದಾಪುರ: ಮಹಾವಿಷ್ಣು ಯುವಕ ಮಂಡಲಕ್ಕೆ ಎನ್‌ವೈಕೆ ಯುವ ತಂಡ ಭೇಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹರೆಗೋಡು ಮಹಾವಿಷ್ಣು ಯುವಕ ಮಂಡಲ ರಿ. ಹಾಗೂ ಮಾನಸ ಯುವತಿ ಮಂಡಲದ ಕಛೇರಿಗೆ ನೆಹರು ಯುವ ಕೇಂದ್ರ ಉಡುಪಿಯಲ್ಲಿ ತರಬೇತಿ ಪಡೆಯುತ್ತಿರುವ 7 ಜಿಲ್ಲೆಗಳ ಯುವ ಸ್ವಯಂಸೇವಕರುಗಳು ಅಧ್ಯಯನ ಪ್ರವಾಸದ ಭಾಗವಾಗಿ ಸೋಮವಾರ ಭೇಟಿ ನೀಡಿ ಯುವ ಮಂಡಲಗಳ ಕಾರ್ಯವೈಖರಿಯ ಬಗ್ಗೆ ಚರ್ಚಿಸಿದರು.

Call us

Click Here

ಯುವಕ ಮಂಡಲ ಸ್ಥಾಪನೆ, ಕಾರ್ಯಕ್ರಮಗಳ ಆಯೋಜನೆ, ಆರ್ಥಿಕ ಮೂಲಗಳ ಸಂಯೋಜನೆ, ಸಂಘಟನೆ, ಸಮುದಾಯಕ್ಕೆ ಅರಿವು ಮೂಡಿಸುವ ಪ್ರಕ್ರಿಯೆ ಮುಂತಾದ ವಿಚಾರಗಳ ಬಗೆಗೆ ಯುವ ಸ್ವಯಂಸೇವಕರುಗಳು ಯುವ ಮಂಡಲದ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.

ಈ ಸಂದರ್ಭ ಉಡುಪಿ ನೆಹರು ಯುವ ಕೇಂದ್ರದ ಯುವ ಸಮನ್ವಯಾಧಿಕಾರಿ ವಿಲ್‌ಫ್ರೆಡ್ ಡಿಸೋಜಾ, ಲೆಕ್ಕಾಧಿಕಾರಿ ವಿಷ್ಣುಮೂರ್ತಿ, ಜಿ. ಎಸ್. ಹಿರೇಮಠ್, ಲಿಂಗರಾಜ್ ನಿಡುವಾನಿ, ಮಹಾವಿಷ್ಣು ಯುವಕ ಮಂಡಲದ ಅಧ್ಯಕ್ಷ ಬಸವ ದೊಡ್ಡಹಿತ್ಲು, ಮಾನಸ ಯುವತಿ ಮಂಡಲದ ಶ್ಯಾಮಲಾ, ಅನ್ನಪೂರ್ಣ, ಕಸ್ತೂರಿ, ಯುವಕ ಮಂಡಲದ ನರಸಿಂಹ ಗಾಣಿಗ ಉಪಸ್ಥಿತರಿದ್ದರು.

ಯುವಕ ಮಂಡಲದ ಕಿಶೋರ್ ಆಚಾರ್ಯ ಸ್ವಾಗತಿಸಿ, ಶರತ್ ಆಚಾರ್ಯ ವಂದಿಸಿದರು. ಸಾವಿತ್ರಿ ಕಾರ್ಯಕ್ರಮ ನಿರೂಪಿಸಿದರು.

Click here

Click here

Click here

Click Here

Call us

Call us

 

Leave a Reply