ಚಿನ್ನದ ಹುಡುಗ ವಿಶ್ವನಾಥ್‌ಗೆ ಒಲಿದ ರಾಜ್ಯೋತ್ಸವ ಪ್ರಶಸ್ತಿ

Click Here

Call us

Call us

Call us

ಸುನಿಲ್ ಹೆಚ್. ಜಿ. | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ವೆಯ್ಟ್ ಲಿಫ್ಟಿಂಗ್ ಹಾಗೂ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ತೋರಿದ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಇತ್ತಿಚಿಗಷ್ಟೇ ಚಿನ್ನ ಗೆದ್ದು ಭಾರತದ ಕೀರ್ತಿ ಪತಾಕೆ ಹಾರಿಸಿದ್ದ ವಿಶ್ವನಾಥ ಭಾಸ್ಕರ ಗಾಣಿಗ ಅವರಿಗೆ ರಾಜ್ಯ ಸರಕಾರ 2019ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

Call us

Click Here

ಕುಂದಾಪುರ ತಾಲೂಕಿನ ದೇವಲ್ಕುಂದ ಗ್ರಾಮದ ಬಾಳಿಕೆರೆಯ ಭಾಸ್ಕರ ಗಾಣಿಗ ಹಾಗೂ ಪದ್ಮಾವತಿ ದಂಪತಿಗಳ ಪುತ್ರರಾದ ವಿಶ್ವನಾಥ ಗಾಣಿಗ ಅವರು ಸತತ ಪರಿಶ್ರಮದಿಂದ ಸಾಧನೆಯ ಮೆಟ್ಟಿಲೇರಿದವರು. ಪ್ರಾಥಮಿಕ ಶಿಕ್ಷಣವನ್ನು ಬಳ್ಳಾರಿಯಲ್ಲಿ, ಬಳಿಕ ಕಾಲೇಜು ವರೆಗಿನ ಶಿಕ್ಷಣವನ್ನು ನೆಂಪುವಿನಲ್ಲಿ, ಬಿಸಿಎ ಪದವಿಯನ್ನು ಕುಂದಾಪುರದ ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ಮುಗಿಸಿ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಎಂಎಸ್ ಇನ್ ಐಟಿ ಮಾಡಿ ಬಳಿಕ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿರುವ ವಿಶ್ವನಾಥ್ ಅವರು ಈವರೆಗೆ ಹತ್ತು ಹಲವು ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಸ್ವರ್ಧೆಗಳಲ್ಲಿ ಭಾಗವಹಿಸಿ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಸಾಧನೆಗಳು:
1.2019 ಕೆನಡಾ ದಲ್ಲಿ ಸೆಪ್ಟೆಂಬರ್ 15 ರಿಂದ 22 ರ ವರೆಗೆ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 1 ಚಿನ್ನ ಪದಕ ಪಡೆದಿರುತ್ತಾರೆ.
2.2019 ಕೆನಡಾ ದಲ್ಲಿ ಸೆಪ್ಟೆಂಬರ್ 15 ರಿಂದ 22 ರ ವರೆಗೆ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 327.5kg ಭಾರ ಎತ್ತುವ ಮೂಲಕ ವರ್ಷದ ಹಳೆ ದಾಖಲೆ ಭಾರತದ ಹೆಸರಿಗೆ ಮಾಡಿರುತ್ತಾರೆ
3 .2017 ಸೌತ್ ಆಫ್ರಿಕಾ ದಲ್ಲಿ 09 ರಿಂದ 17 ರ ವರೆಗೆ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ 1 ಚಿನ್ನ ಪದಕ ಪಡೆದಿರುತ್ತಾರೆ.
4.2017 ಸೌತ್ ಆಫ್ರಿಕಾ ದಲ್ಲಿ 09 ರಿಂದ 17 ರ ವರೆಗೆ ನಡೆದ ಕಾಮನ್ವೆಲ್ತ್ ಪವರ್ ಲಿಫ್ಟಿಂಗ್ ಬೆಂಚ್ ಪ್ರೆಸ್ ಚಾಂಪಿಯನ್ ಶಿಪ್ ನಲ್ಲಿ 1 ಬೆಳ್ಳಿಯ ಪದಕ ಪಡೆದಿರುತ್ತಾರೆ.
5. 2017 ರ ಡಿಸೆಂಬರ್ 4 ರಿಂದ 9 ರ ವರೆಗೆ ಕೇರಳದಲ್ಲಿ ನಡೆದ ಏಶಿಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ ಸೀನಿಯರ್ ವಿಭಾದಲ್ಲಿ ಡೆಡ್ ಲಿಫ್ಟ್ ನಲ್ಲಿ ಚಿನ್ನ ಹಾಗು ಪವರ್ ಲಿಫ್ಟಿಂಗ್ ನಲ್ಲಿ ಬೆಳ್ಳಿಯ ಪದಕ ಪಡೆದಿರುತ್ತಾರೆ
6 . 2016 ಡಿಸೆಂಬರ್ 24 ರಿಂದ 27 ರವರೆಗೆ ಜಮಶೇಡ್ಪುರ ದಲ್ಲಿ ನಡೆದ ಸುಬ್ರತಾ ಕ್ಲಾಸಿಕ್ ಇಂಟರ್ನ್ಯಾಷನಲ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಹಾಗು ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ನಲ್ಲಿ ಬಲಿಷ್ಠ ಪುರುಷ 2016 ಪ್ರಶಸ್ತಿ ಪಡೆದಿರುತ್ತಾರೆ .
7 . 2016 ಡಿಸೆಂಬರ್ 24 ರಿಂದ 27 ರವರೆಗೆ ಜಮಶೇಡ್ಪುರ ದಲ್ಲಿ ನಡೆದ ಸುಬ್ರತಾ ಕ್ಲಾಸಿಕ್ ಇಂಟರ್ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ಲಿಫ್ಟ್ ನಲ್ಲಿ 1 ಚಿನ್ನದ ಪದಕ ಹಾಗು ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಡೆಡ್ನ ಲಿಫ್ಟ್ ನಲ್ಲಿ ಬಲಿಷ್ಠ ಪುರುಷ 2016 ಪ್ರಶಸ್ತಿ ಪಡೆದಿರುತ್ತಾರೆ.
8 . 2012 ರ ಡಿಸೆಂಬರ್ 10 ರಿಂದ 14 ರ ವರೆಗೆ ತಮಿಳುನಾಡಿನಲ್ಲಿ ನಡೆದ ಏಶಿಯನ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ ಕಂಚಿನ ಪದಕ ಪಡೆದಿರುತ್ತಾರೆ .
9 .ಜೆರಾಯ್ ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ 2016 ಪ್ರಶಸ್ತಿ ವಿಜೇತ.
10 .ಜೆರಾಯ್ ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ 2017 ಪ್ರಶಸ್ತಿ ವಿಜೇತ
11. 2019 ಆಗಸ್ಟ್ 22 ರಿಂದ 25 ರ ವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ನ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ.
12. 2019 ಆಗಸ್ಟ್ 22 ರಿಂದ 25 ರ ವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಇಂಟೆರ್ ಸ್ಟೇಟ್ ಪವರ್ ಲಿಫ್ಟಿಂಗ್ ನಲ್ಲಿ 1 ಕಂಚಿನ ಪದಕ ಪಡೆದಿರುತ್ತಾರೆ
13.2018 ರ ಸಪ್ಟೆಂಬರ್ 26 ರಿಂದ 30 ರ ವರೆಗೆ ಲಕ್ನೋ ದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ
14.ಇವರು 2017 ಜಮ್ಮುವಿನಲ್ಲಿ ಮಾರ್ಚ್ 22 ರಿಂದ 27 ರ ವರೆಗೆ ನಡೆದ ಫೆಡರೇಷನ್ ಕಪ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನ ಹಾಗು ಬಲಿಷ್ಠ ಪುರುಷ ದ್ವಿತೀಯ ಸ್ಥಾನ ಪಡೆದಿರುತ್ತಾರೆ .
15.ಇವರು 2017 ಜಮ್ಮುವಿನಲ್ಲಿ ಮಾರ್ಚ್ 22 ರಿಂದ 27 ರ ವರೆಗೆ ನಡೆದ ಕ್ಲಾಸಿಕ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 1 ಚಿನ್ನ ಹಾಗು ಬಲಿಷ್ಠ ಪುರುಷ ಪ್ರಶಸ್ತಿ ಪಡೆದಿರುತ್ತಾರೆ .
16. ಇವರು 2017 ಜಮ್ಮುವಿನಲ್ಲಿ ಮಾರ್ಚ್ 22 ರಿಂದ 27 ರ ವರೆಗೆ ನಡೆದ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ 1 ಬೆಳ್ಳಿಯ ಪದಕ ಪಡೆದಿರುತ್ತಾರೆ.
17. ಇವರು 2016 ರ ಸಪ್ಟೆಂಬರ್ 7 ರಿಂದ 11 ರ ವರೆಗೆ ಜಮಶೇಡ್ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
18. 2016 ರ ಸಪ್ಟೆಂಬರ್ 7 ರಿಂದ 11 ರ ವರೆಗೆ ಜಮಶೇಡ್ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಇಂಟೆರ್ ಸ್ಟೇಟ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ
19. 2016 ರ ಸಪ್ಟೆಂಬರ್ 7 ರಿಂದ 11 ರ ವರೆಗೆ ಜಮಶೇಡ್ಪುರದಲ್ಲಿ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ನಲ್ಲಿ 1 ಬೆಳ್ಳಿಯ ಪದಕ ಪಡೆದಿರುತ್ತಾರೆ .
20. ಜಮಶೇಡ್ಪುರ್ ನಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆದ ಫೆಡರೇಷನ್ ಕಪ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನ ಹಾಗು ಬಲಿಷ್ಠ ಪುರುಷ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
21. ಜಮಶೇಡ್ಪುರ್ ನಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆದ ಸೀನಿಯರ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 1 ಚಿನ್ನ ಹಾಗು ಬಲಿಷ್ಠ ಪುರುಷ ಪ್ರಶಸ್ತಿ ಪಡೆದಿರುತ್ತಾರೆ .
22. ಕೇರಳದ ಅಲೀಪ್ಪಿ ನಲ್ಲಿ ಆಗಸ್ಟ್ 14 ರಿಂದ 19 ರ ವರೆಗೇನಡೆದ ಸೀನಿಯರ್ ನ್ಯಾಷನಲ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದಿರುತ್ತಾರೆ.
23.ಜಮಶೇಡ್ಪುರ್ ನಲ್ಲಿ ಮಾರ್ಚ್ 24 ರಿಂದ 27 ರ ವರೆಗೆ ನಡೆದ ಜೂನಿಯರ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
24. ಹಿಮಾಚಲ ಪ್ರದೇಶದಲ್ಲಿ ಜನವರಿ 4 ರಿಂದ 9 ರ ವರೆಗೆ ನಡೆದ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
25.ಹಿಮಾಚಲ ಪ್ರದೇಶದಲ್ಲಿ ಜನವರಿ 4 ರಿಂದ 9 ರ ವರೆಗೆ ನಡೆದ ಜೂನಿಯರ್ ಪವರ್ ಲಿಫ್ಟಿಂಗ್ ನಲ್ಲಿ 1 ಕಂಚಿನ ಪದಕ ಹಾಗು ಡೆಡ್ ಲಿಫ್ಟ್ ನಲ್ಲಿ 300 ಕೆ.ಜಿ ಭಾರ ಎತ್ತಿ ನೂತನ ದಾಖಲೆ ಮಾಡಿರುತ್ತಾರೆ .
26. ಅಮರಾವತಿಯಲ್ಲಿ 2013 ರ ಜನವರಿ 24 ರಿಂದ 30 ರ ವರೆಗೆ ನಡೆದ ಜೂನಿಯರ್ ನ್ಯಾಷನಲ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ.
27. ಅಮರಾವತಿಯಲ್ಲಿ 2013 ರ ಜನವರಿ 24 ರಿಂದ 30 ರ ವರೆಗೆ ನಡೆದ ಜೂನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟ್ ನಲ್ಲಿ 287.5 ಕೆ.ಜಿ ಭಾರ ಎತ್ತಿ ನೂತನ ದಾಖಲೆ ಮಾಡಿರುತ್ತಾರೆ .
28. 2013 ಮಂಗಳೂರಿನಲ್ಲಿ ಆಗಸ್ಟ್ 21 ರಿಂದ 26 ರ ವರೆಗೆ ನಡೆದ ಸೀನಿಯರ್ ನ್ಯಾಷನಲ್ ಕ್ಲಾಸಿಕ್ ಪವರ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ.
29.2013 ಮಂಗಳೂರಿನಲ್ಲಿ ಆಗಸ್ಟ್ 21 ರಿಂದ 26 ರ ವರೆಗೆ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ನ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ.
30. 2013 ಜಮಶೇಡ್ಪುರ್ ನಲ್ಲಿ ಏಪ್ರಿಲ್ 10 ರಿಂದ 14 ರ ವರೆಗೆ ನಡೆದ ಸೀನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
31. 2013 ಜಮಶೇಡ್ಪುರ್ ನಲ್ಲಿ ಏಪ್ರಿಲ್ 10 ರಿಂದ 14 ರ ವರೆಗೆ ನಡೆದ ಜೂನಿಯರ್ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
32. 2012 ಹಿಮಾಚಲ ಪ್ರದೇಶದಲ್ಲಿ ಮಾರ್ಚ್ 28 ರಿಂದ ಏಪ್ರಿಲ್ 1 ವರೆಗೆ ನಡೆದ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟಿಂಗ್ ನಲ್ಲಿ 1 ಚಿನ್ನದ ಪದಕ ಪಡೆದಿರುತ್ತಾರೆ .
33. 2011 ತಮಿಳ್ನಾಡಿನಲ್ಲಿ ಜನವರಿ 20 ರಿಂದ 23 ರ ವರೆಗೆ ನಡೆದ ನ್ಯಾಷನಲ್ ಪವರ್ ಲಿಫ್ಟಿಂಗ್ ಡೆಡ್ ಲಿಫ್ಟಿಂಗ್ ನಲ್ಲಿ 1 ಬೆಳ್ಳಿಯ ಪದಕ ಪಡೆದಿರುತ್ತಾರೆ .
34. ಇವರು ಒಟ್ಟು 5 ಚಿನ್ನದ ಪದಕ , 3 ಬೆಳ್ಳಿಯ ಪದಕ ಹಾಗು 3 ಕಂಚಿನ ಪದಕ ಅಂತಾರಾಷ್ತ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆ ಯಲ್ಲಿ, ಹಾಗೆಯೆ 18 ಚಿನ್ನದ ಪದಕ , 5 ಬೆಳ್ಳಿಯ ಪದಕ ಹಾಗು 3 ಕಂಚಿನ ಪದಕವನ್ನು ರಾಷ್ಟೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪಡೆದಿರುತ್ತಾರೆ.

ಇದನ್ನೂ ಓದಿ:
► ಕುಂದಾಪುರದ ಉದಯೋನ್ಮುಖ ಕ್ರೀಡಾಪಟು ವಿಶ್ವನಾಥ ಗಾಣಿಗ – https://kundapraa.com/?p=2249 .

Leave a Reply