ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: 2019ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗೊಂಡಿದ್ದು, ಕುಂದಾಪುರ ಹಾಗೂ ಬೈಂದೂರು ತಾಲೂಕಿನ ಎಂಟು ಮಂದಿ ಸಾಧಕರು ಸೇರಿದಂತೆ ಜಿಲ್ಲೆಯ 32 ಸಾಧಕರಿಗೆ ಪ್ರಶಸ್ತಿ ಘೋಷಣೆಯಾಗಿದೆ.
ಯಕ್ಷಗಾನ ಕ್ಷೇತ್ರದಲ್ಲಿ ಹಕ್ಲಾಡಿಯ ಆನಂದ ಶೆಟ್ಟಿ, ಶಿಲ್ಪಕಲೆ ಕ್ಷೇತ್ರದಲ್ಲಿ ಅರಾಟೆಯ ಎಸ್. ಸುಬ್ರಹ್ಮಣ್ಯ ಆಚಾರ್ಯ, ಕರಕುಶಲ ಕಲೆ ಕ್ಷೇತ್ರದಲ್ಲಿ ಕೊರವಡಿಯ ಲಲಿತಾ ಕೊರವಡಿ, ಛಾಯಾಗ್ರಹಣ ಕ್ಷೇತ್ರದಲ್ಲಿ ಕುಂದಾಪುರದ ಸಂತೋಷ ಕುಂದೇಶ್ವರ, ವೈದ್ಯಕೀಯ ಕ್ಷೇತ್ರದಲ್ಲಿ ಬೇಳೂರಿನ ಡಾ. ಕುಸುಮಾಕರ ಶೆಟ್ಟಿ, ಯೋಗ, ನೃತ್ಯ ಕ್ಷೇತ್ರದಲ್ಲಿ ಮರವಂತೆಯ ಧನ್ವಿ ಪೂಜಾರಿ, ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ಶಂಕರನಾರಾಯಣದ ದಯಾನಂದ ರಾವ್, ಸಮಾಜ ಸೇವೆ ಕ್ಷೇತ್ರದಲ್ಲಿ ಕೋಟೇಶ್ವರದ ಡೇವಿಡ್ ಸಿಕ್ವೇರಾ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ.
2019ರ ಪ್ರಶಸ್ತಿ ಪುರಸ್ಕೃತ ಜಿಲ್ಲೆಯ ಸಾಧಕರು:
ಯಕ್ಷಗಾನ: ಪುಂಡರೀಕಾಕ್ಷ ಉಪಾಧ್ಯಾಯ, ಆನಂದ್ ಶೆಟ್ಟಿ, ಬಡಾನಿಡಿಯೂರು ಕೇಶವರಾವ್
ದೈವಾರಾಧನೆ: ನಾರಾಯಣ ನಲಿಕೆ, ಕೋಟಿ ಪೂಜಾರಿ, ಸಾಧು ಪಾಣರ
ರಂಗಭೂಮಿ: ವಿಜಯ್ ನಾಯಕ್, ದಿನೇಶ್ ಪ್ರಭು ಕಲ್ಲೊಟ್ಟೆ
ಪತ್ರಿಕೋದ್ಯಮ: ಎಸ್.ಜಿ.ಕುರ್ಯ
ಸಂಗೀತ: ಭೋಜರಾಜ್ ರಾಮ್ ಕಿದಿಯೂರು, ರಾಘವೇಂದ್ರ ಭಟ್, ಸುಧಾಕರ ಶೇರಿಗಾರ್
ಸಾಹಿತ್ಯ: ಉಪೇಂದ್ರ ಸೋಮಯಾಜಿ,
ಸಾಹಿತ್ಯ/ಶಿಕ್ಷಣ: ಮುನಿರಾಜ ರೆಂಜಾಳ
ಕ್ರೀಡೆ: ಅಶೋಕ್ ಪಣಿಯಾಡಿ, ಪ್ರಕಾಶ್ ಶೆಟ್ಟಿ ಹೆಜಮಾಡಿ
ಚಿತ್ರಕಲೆ: ದಾಮೋಧರ್ ಭಟ್
ಶಿಲ್ಪಕಲೆ: ಎಸ್.ಸುಬ್ರಹ್ಮಣ್ಯ ಆಚಾರ್ಯ, ಸೋಮಪ್ಪ ಮೇಸ್ತ್ರಿ
ಕಲೆ: ಲಲಿತಾ ಕೊರವಡಿ
ಛಾಯಾಗ್ರಹಣ: ಸಂತೋಷ್ ಕುಂದೇಶ್ವರ,
ವೈದ್ಯಕೀಯ: ಡಾ.ಕುಸುಮಾಕರ ಶೆಟ್ಟಿ
ಯೋಗ ನೃತ್ಯ: ಧನ್ವಿ,
ಕೃಷಿ ಹೈನುಗಾರಿಕೆ: ದಯಾನಂದ ರಾವ್
ನೃತ್ಯ: ಲಕ್ಷ್ಮಿ ಗುರುರಾಜ್,
ಸಂಕೀರ್ಣ: ರಮಣ ನಾಯಕ್, ಕರುಣಾಕರ ಶೆಟ್ಟಿ,
ಪೌರ ಕಾರ್ಮಿಕ: ಶ್ರೀಕೃಷ್ಣ,
ಸಮಾಜಸೇವೆ: ಅಂನತ್ರಾಯ್ ಶೆಣೈ, ಡೇವಿಡ್ ಸಿಕ್ವೆರಾ
ಸಂಘ ಸಂಸ್ಥೆ: ಕರಾವಳಿ ಯುವಕ ಯುವತಿ ವೃಂದ, ಹೆಜಮಾಡಿ, ನವಚೇತನ ಯುವತಿ ಮಂಡಲ, ಕುತ್ಪಾಡಿ















