ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಕೆಲವು ದಿನಗಳ ಹಿಂದೆ ರಕ್ತದ ಕ್ಯಾನ್ಸರ್’ನಿಂದಾಗಿ ಮೂಳೆ ಮಜ್ಜೆಯ ಕಸಿ ಚಿಕಿತ್ಸೆಗೆ ಒಳಗಾಗಿದ್ದ ಬೈಂದೂರು ತಾಲೂಕಿನ ಕಳವಾಡಿ ನಿವಾಸಿ ಸಂಜೀವ ದೇವಾಡಿಗರ ಪುತ್ರ ಸುಜನ್ ದೇವಾಡಿಗ (17) ಬೆಂಗಳೂರಿನ ಆಸ್ಪತ್ರೆಯಲ್ಲಿ ಭಾನುವಾರ ಚಿಕಿತ್ಸೆ ಫಲಿಸದೆ ನಿಧನರಾದರು.
ಬ್ಲಡ್ ಕ್ಯಾನ್ಸರ್’ಗೆ ತುತ್ತಾಗಿದ್ದ ಸುಜನ್ ದೇವಾಡಿಗ ಅವರನ್ನು ಉಳಿಸಿಕೊಳ್ಳುವ ಸಲುವಾಗಿ ಅವರ ಕುಟುಂಬ ಇನ್ನಿಲ್ಲದ ಪ್ರಯತ್ನ ನಡೆಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬಕ್ಕೆ ಉಂಟಾದ ಆರ್ಥಿಕ ಅಡಚಣೆಯ ಬಗ್ಗೆ ತಿಳಿದುಬಂದಾಗ ನೂರಾರು ಮಂದಿ ಸ್ಪಂದಿಸಿದ್ದರಲ್ಲದೇ, ಚಿಕಿತ್ಸೆಯನ್ನೂ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸುಜನ್ ದೇವಾಡಿಗ ಮೃತರಾಗಿದ್ದಾರೆ.
ಮೃತರು ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದು, ಅವರ ನೆರಳಕಟ್ಟೆಯ ಮನೆಯಲ್ಲಿ ಅಂತ್ಯಸಂಸ್ಕಾರ ನೆರವೇರಿತು.










