ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಿರಂತರ ಕೃಷಿ ಕಾಯಕದ ನಡುವೆ ಕೃಷಿಕರ ಜೀವಾಳ ಸಾಕು ಪ್ರಾಣಿಗಳು. ಅವುಗಳನ್ನು ಸಲಹಿ ಕ್ರೀಡೆಯಲ್ಲಿ ಭಾಗವಹಿಸುವಂತೆ ತರಬೇತಿ ನೀಡಿ ಊರಿನ ಜನರೆಲ್ಲಾ ಸಂಭ್ರಮಿಸುವ ಕಂಬಳೋತ್ಸವವು ನಿರಂತರವಾಗಿ ನಡೆಯುತ್ತಿರಲಿ ಎಂದು ಮಾಜಿ ಶಾಸಕ ಕೆ. ಲಕ್ಷ್ಮೀನಾರಾಯಣ ಹೇಳಿದರು.
ಅವರು ತಗ್ಗರ್ಸೆ ಹೆಗ್ಡೆಯವರ ಮನೆ ಕಂಬಳಗದ್ದೆಯಲ್ಲಿ ಭಾನುವಾರ ನಡೆದ ಸಾಂಪ್ರದಾಯಿಕ ಕಂಬಳೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಜಗನ್ನಾಥ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ಕೆ. ಬಾಬು ಶೆಟ್ಟಿ, ಕಂಬಳ ಸಮಿತಿ ಬೈಂದೂರು ತಾಲೂಕು ಅಧ್ಯಕ್ಷ ವೆಂಕಟ ಪೂಜಾರಿ ಸಸಿಹಿತ್ಲು ಉಪಸ್ಥಿತರಿದ್ದರು.
ತಗ್ಗರ್ಸೆ ಹೆಗ್ಡೆ ಕುಟುಂಬದ ಟಿ. ನಾರಾಯಣ ಹೆಗ್ಡೆ ತಗ್ಗರ್ಸೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಜನ್ಮನೆ ರತ್ನಾಕರ ಶೆಟ್ಟಿ ಅರೆಶಿರೂರು ಧನ್ಯವಾದ ಸಲ್ಲಿಸಿದರು. ಶಿಕ್ಷಕ ಗಣಪತಿ ಹೋಬಳಿದಾರ್ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ವರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಸ್ವರ್ಧೆಗಳ ವಿಜೇತರು:
ಕಂಬಳೋತ್ಸವ ಹಲಗೆ ವಿಭಾಗದಲ್ಲಿ ಆತ್ಮಜ & ನೀರಜ್ ಅವರ ಕೋಣ ಪ್ರಥಮ ಸ್ಥಾನ, ವೆಂಕಟ ಪೂಜಾರಿ ಸಸಿಹಿತ್ಲು ಅವರ ಕೋಣ ದ್ವೀತಿಯ ಸ್ಥಾನವನ್ನು, ಹಗ್ಗ ವಿಭಾಗ ಹಿರಿಯದಲ್ಲಿ ದಿಶಾ ಶ್ರೇಯಸ್ ನಾರಾಯಣ ದೇವಾಡಿಗ ಅವರ ಕೋಣ ಪ್ರಥಮ, ದಿ. ಕಾರಿಕಟ್ಟೆ ಮಹಾಬಲ ಶೆಟ್ಟಿ ಅವರ ಕೋಣ ದ್ವೀತಿಯ ಸ್ಥಾನವನ್ನು, ಹಗ್ಗ ವಿಭಾಗ ಕಿರಿಯ ಎನಲ್ಲಿ ಸುಧಾಕರ ಶೆಟ್ಟಿ ನೆಲ್ಯಾಡಿ ಅವರ ಕೋಣ ಪ್ರಥಮ, ಪನ್ನಗ ಹೆಬ್ಬಾರ್ ಭಟ್ಕಳ ಅವರ ಕೋಣ ದ್ವೀತಿಯ, ಹಗ್ಗ ವಿಭಾಗ ಕಿರಿಯ ಬಿನಲ್ಲಿ ಎಚ್. ಎನ್. ನಿವಾಸ್ ಪಿನ್ನುಪಾಲ್ ಭಟ್ಕಳ ಅವರ ಕೋಣ ಪ್ರಥಮ, ಸುಪ್ರಿತ್ ಸುಜಿತ್ ಗಂಗನಾಡು ಅವರ ಕೋಣ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿಜೇತ ಕೋಣಗಳನ್ನು ಓಡಿಸಿದ ಗೋಪಾಲ ನಾಯ್ಕ್, ಭಾಸ್ಕರ್, ವಿವೇಕ ಪೂಜಾರಿ, ಮಂಜುನಾಥ ಗೌಡ, ಶಂಕರ್ ನಾಯ್ಕ್ ಅವರಿಗೆ ನಗದು ಪುರಸ್ಕಾರ ನೀಡಲಾಯಿತು. ಆಕರ್ಷಕ ಶೋಭಾಯಾತ್ರೆಯೊಂದಿಗೆ ಪಾಲ್ಗೊಂಡ ವೆಂಕಟ ಪೂಜಾರಿ ಸಸಿಹಿತ್ಲು ಅವರಿಗೆ ಬಹುಮಾನ ವಿತರಿಸಲಾಯಿತು. ಕೆಸರುಗದ್ದೆ ಓಟದಲ್ಲಿ ಮಂಜುನಾಥ ಗೌಡ ಪ್ರಥಮ, ಹರೀಶ್ ಪೂಜಾರಿ ದ್ವಿತೀಯ, ಧನರಾಜ್ ತೃತೀಯ ಬಹುಮಾನ ಗಳಿಸಿಕೊಂಡಿದ್ದಾರೆ.
ಇದನ್ನೂ ಓದಿ:
► ಸಂಭ್ರಮದಿ ಜರುಗಿದ ಪ್ರಸಿದ್ಧ ತಗ್ಗರ್ಸೆ ಕಂಬಳೋತ್ಸವ – https://kundapraa.com/?p=34118 .