ಕಮಲತನಯನ ಷಟ್ಪದಿ ಕವನ ಸಂಕಲನ ಬಿಡುಗಡೆ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಛಂದೋಬದ್ಧವಾಗಿ ಬರೆಯುವವರೆ ವಿರಳರಾದ ಈ ಕಾಲಘಟ್ಟದಲ್ಲಿ ನೀತಿಬೋಧೆಯಂತಿರುವ ಸುಮಾರು 250 ಕುಸುಮ ಷಟ್ಪದಿಯ ಪದ್ಯಗಳನ್ನು ಒಳಗೊಂಡ ಪುಸ್ತಕವನ್ನು ಬರೆದಿರುವುದು ನಿಜಕ್ಕೂ ಶ್ಲಾಘನೀಯ ಎಂದು ಡಾ.ಟಿ.ಎಂ.ಎ.ಪೈ ಶಿಕ್ಷಣ ಮಹಾವಿದ್ಯಾಲಯದ ಸಂಯೋಜಕರಾದ ಡಾ. ಮಹಾಬಲೇಶ್ವರ ರಾವ್ ಹೇಳಿದರು.

Call us

Click Here

ಅವರು ಗುಜ್ಜಾಡಿ ಗ್ರಾಮದ ಕಂಚುಗೋಡಿನ ನಾಗರಾಜ ಖಾರ್ವಿ ಅವರು ಬರೆದ ಕಮಲತನಯನ ಷಟ್ಪದಿ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಬೈಂದೂರಿನ ಕ್ಷೇತ್ರ ಸಮನ್ವಯಾಧಿಕಾರಿ ಅಬ್ದುಲ್ ರವೂಫ್ ಪುಸ್ತಕದ ಪರಿಚಯ ಮಾಡಿದರು. ಶಿಕ್ಷಕ, ಯಕ್ಷಗಾನ ಪ್ರಸಂಗಕರ್ತ ಪಿ.ವಿ.ಆನಂದ ಸಾಲಿಗ್ರಾಮ ಆಯ್ದ ಕುಸುಮ ಷಟ್ಪದಿಯ ಪದ್ಯಗಳನ್ನು ಗಮಕ ಮತ್ತು ಯಕ್ಷಗಾನ ಶೈಲಿಯಲ್ಲಿ ಹಾಡಿದರು. ಅನ್ನಪೂರ್ಣ ಬಿ.ಎಂ. ಕವಿ ಪರಿಚಯ ಮಾಡಿದರು. ವಿದ್ಯಾರ್ಥಿನಿ ಅಶ್ವಿನಿ ಶಾಸ್ತ್ರಿ ಸ್ವಾಗತಿಸಿ, ನಾಗರಾಜ ಖಾರ್ವಿ ವಂದಿಸಿದರು. ಅನುಷ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

Leave a Reply