Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ರಂಗ ಚಟುವಟಿಕೆ ಮೂಲಕ ಸಾಮಾಜಿಕ ಬದಲಾವಣೆಯ ಗುರಿ: ಬಾಸುಮ ಕೊಡಗು
    ಊರ್ಮನೆ ಸಮಾಚಾರ

    ರಂಗ ಚಟುವಟಿಕೆ ಮೂಲಕ ಸಾಮಾಜಿಕ ಬದಲಾವಣೆಯ ಗುರಿ: ಬಾಸುಮ ಕೊಡಗು

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್ ಕಾಂ ಸುದ್ದಿ.
    ಬೈಂದೂರು: ರಂಗಭೂಮಿ ಧರ್ಮ, ಜಾತಿ, ಸ್ಥಳ ಮೀರಿದ ಪ್ರಕ್ರಿಯೆ. ಅದು ತನ್ನ ಚಟುವಟಿಕೆಗಳ ಮೂಲಕ ಸಾಮಾಜಿಕ ಬದಲಾವಣೆಯ ಗುರಿ ಹೊಂದಿದೆ ಎಂದು ಹಿರಿಯ ರಂಗಕರ್ಮಿ ಬಾಸುಮ ಕೊಡಗು ಹೇಳಿದರು.

    Click Here

    Call us

    Click Here

    ಇಲ್ಲಿನ ಸುರಭಿ ಸಂಸ್ಥೆ ನಡೆಸುತ್ತಿರುವ 7 ದಿನಗಳ ಶಿಶಿರ ನಾಟಕೋತ್ಸವದ ಅಂಗವಾಗಿ ಶನಿವಾರ ಸುರಭಿ ಕಲಾ ಗ್ರಾಮದಲ್ಲಿ ಆಯೋಜಿಸಿದ್ದ ’ರಂಗಭೂಮಿಯಲ್ಲಿ ಸಂಘಟನೆಯ ಪಾತ್ರ’ ಕುರಿತು ರಂಗಸಂವಾದ ಕಾರ್ಯಕ್ರಮದಲ್ಲಿ ಅವರು ತಮ್ಮ ವಿಚಾರ ಮಂಡಿಸಿದರು.

    ರಂಗಭೂಮಿಯ ಯಶಸ್ಸಿನಲ್ಲಿ ಅದರ ಹಿಂದಿರುವ ಸಂಘಟನೆಯ ಪಾತ್ರ ನಿರ್ಣಾಯಕವಾದುದು. ಅದರ ಸದಸ್ಯರಿಗೆ ರಂಗಚಟುವಟಿಕೆಯಲ್ಲಿ ಇರುವ ಬದ್ಧತೆಯೇ ಅದರ ಬಲ. ಅದರ ಎಲ್ಲ ಸದಸ್ಯರಿಗೆ ತಮ್ಮನ್ನು ಜನ ಗುರುತಿಸಬೇಕು ಎಂಬ ಹಂಬಲ ಇರುತ್ತದೆ. ಆಗ ಪರಸ್ಪರ ಅಸೂಯೆಯೂ ಇರುತ್ತದೆ. ಎಲ್ಲರಿಗೆ ಆಯ್ಕೆಯ ಸ್ವಾತಂತ್ರ್ಯ ಮತ್ತು ಅವಕಾಶ ನೀಡುವ ಮೂಲಕ ಅದನ್ನು ಮೀರಬಹುದು. ಅದರಲ್ಲಿ ಹೊಣೆಗಳ ವಿಭಜನೆ ಆಗಬೇಕು. ಸಂಘಟನೆಯ ಪರಿಣಾಮಕಾರಿ ನಿರ್ವಹಣೆಯೂ ಅದಕ್ಕೆ ಯಶಸ್ಸು ತಂದುಕೊಡುತ್ತದೆ. ಅದು ಶುದ್ಧ ಚಾರಿತ್ರ್ಯ ಹೊಂದಿರಬೇಕು ಎಂದು ಅವರು ಹೇಳಿದರು.

    ಗಣಪತಿ ಹೋಬಳಿದಾರ್ ಎತ್ತಿದ ಗುಣಮಟ್ಟದ ಹೆಸರಿನಲ್ಲಿ ಜನರಿಗೆ ಅರ್ಥವಾಗದ ನಾಟಕಗಳ ಪ್ರದರ್ಶನ ಕುರಿತಾದ ಅಂಶಕ್ಕೆ ಪ್ರತಿಕ್ರಿಯಿಸಿದ ಬಾಸುಮ ಅಂತಹ ನಾಟಕ ಪ್ರದರ್ಶಿಸಿದರೆ ಪ್ರೇಕ್ಷಕರು ಅದರಿಂದ ದೂರ ಸರಿಯುತ್ತಾರೆ. ನಾಟಕಗಳಲ್ಲಿ ಮನೋರಂಜನೆಯ ಅಂಶವೂ ಇರಬೇಕು ಎಂದರು. ಸಾಂಸ್ಕೃತಿಕ ಚಟುವಟಿಕೆಗಳಿಗೆ ಸರ್ಕಾರದ ಅನುದಾನದ ನೀತಿಯ ಕುರಿತು ಸುಧಾಕರ ಪಿ. ಮಾತನಾಡಿದರು. ಅಂತಹ ಚಟುವಟಿಕೆಗಳು ಅಧಿಕಾರಶಾಹಿಯ ತೀವ್ರತರ ನಿಯಂತ್ರಣಕ್ಕೆ ಸಿಲುಕಿದಾಗ ರಂಗಭೂಮಿಗೆ ಹಾನಿಯಾಗುತ್ತದೆ ಎಂದರು. ಎಸ್. ಜನಾರ್ದನ ಮರವಂತೆ ನಾಟಕ ಪ್ರದರ್ಶನಗಳನ್ನು ಶಿಸ್ತು, ಸಮಯಪ್ರಜ್ಞೆಯ ಚೌಕಟ್ಟಿಗೆ ಅಳವಡಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ಸುರಭಿ ಅಧ್ಯಕ್ಷ ಸತ್ಯನಾ ಕೊಡೇರಿ ರಂಗಭೂಮಿ ಒಂದು ಪ್ರಕ್ರಿಯೆ ಆಗಬೇಕೇ ಹೊರತು ಫಲ ಆಗಬಾರದು. ಅದು ತನ್ನ ಚಟುವಟಿಕೆಗಳನ್ನು ಚಿಂತನೆಯ ಕಿಡಿ ಹೊತ್ತಿಸುವುದಕ್ಕಷ್ಟೇ ಸೀಮಿತಗೊಳಿಸಬೇಕು ಎಂದು ಹೇಳಿದರು. ರಂಗಪರಿಣತ ಸದಾನಂದ ಬೈಂದೂರು ಸಂವಾದವನ್ನು ನಿರ್ವಹಿಸಿದರು.

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ನಾಡೋಜ ಡಾ. ಜಿ. ಶಂಕರ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ. ನವೆಂಬರ್ 06ರಂದು ಕೋಟದಲ್ಲಿ ಗೌರವ ಪ್ರದಾನ

    06/10/2026

    ಸರಕಾರದ ಯೋಜನೆಯ ಮೂಲಕ ಮಹಿಳೆ ಸ್ವಾವಲಂಬಿ ಬದುಕಿಗೆ ಮುನ್ನುಡಿ: ರವೀಂದ್ರ ರಾವ್

    06/10/2026

    ಕೋಟೇಶ್ವರ ಮೊಗವೀರ ಯುವ ಸಂಘಟನೆ- ನಾಡೋಜ ಡಾ. ಜಿ. ಶಂಕರ್ ಜನ್ಮ ದಿನಾಚರಣೆ ಪ್ರಯುಕ್ತ ಬೀಚ್ ಕ್ಲಿನಿಂಗ್

    06/10/2026
    Leave A Reply Cancel Reply

    six + fifteen =

    Call us

    Click Here

    Call us

    Call us

    Call us
    Highest Viewed Recently
    • ನಾಡೋಜ ಡಾ. ಜಿ. ಶಂಕರ್ ಅವರಿಗೆ ಪಂಚವರ್ಣ ರಾಜ್ಯೋತ್ಸವ ಗೌರವ. ನವೆಂಬರ್ 06ರಂದು ಕೋಟದಲ್ಲಿ ಗೌರವ ಪ್ರದಾನ
    • ಸರಕಾರದ ಯೋಜನೆಯ ಮೂಲಕ ಮಹಿಳೆ ಸ್ವಾವಲಂಬಿ ಬದುಕಿಗೆ ಮುನ್ನುಡಿ: ರವೀಂದ್ರ ರಾವ್
    • ಕೋಟೇಶ್ವರ ಮೊಗವೀರ ಯುವ ಸಂಘಟನೆ- ನಾಡೋಜ ಡಾ. ಜಿ. ಶಂಕರ್ ಜನ್ಮ ದಿನಾಚರಣೆ ಪ್ರಯುಕ್ತ ಬೀಚ್ ಕ್ಲಿನಿಂಗ್
    • ಗಂಗೊಳ್ಳಿ ಸೇವಾ ಸಂಗಮ ನಿವೇದಿತಾ ಶಿಶು ಮಂದಿರ: 2 ದಿನಗಳ ದಸರಾ ಶಿಬಿರದ ಸಮಾರೋಪ
    • ಮೊಗವೀರ ಯುವ ಸಂಘಟನೆ ಹಾಲಾಡಿ ಶಂಕರನಾರಾಯಣ ಘಟಕ – ಯುವ ಪ್ರೇರಣಾ ನಾಯಕತ್ವ ತರಬೇತಿ ಕಾರ್ಯಗಾರ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.