ವತ್ತಿನಕಟ್ಟೆಯಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಂಪನ್ನ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ದೇವಸ್ಥಾನದಲ್ಲಿ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು.

Call us

Click Here

ನಾಕಟ್ಟೆಯಿಂದ ಯಡ್ತರೆ ಜಕ್ಷನ್ ಮೂಲಕ ಹೊರಟ ಶ್ರೀನಿವಾಸ ಪದ್ಮಾವತಿಯರ ಮದುವೆ ದಿಬ್ಬಣ ವತ್ತಿನಕಟ್ಟೆ ಕಲಾಣ್ಯೋತ್ಸವ ಸ್ಥಳಕ್ಕೆ ಆಗಮಿಸಿದ ಬಳಿಕ ಕಲ್ಯಾಣೋತ್ಸವದ ಪ್ರಕ್ರಿಯೆಗಳು ಆರಂಭಗೊಂಡವು. ಆರಂಭದಲ್ಲಿ ದೀಪಿಕಾ ಪಾಂಡುರಂಗಿ ಅವರ ದಾಸರ ಪದಗಳ ಗಾಯನ ಜರುಗಿತು. ತಿರುಪತಿ ಆಚಾರ್ಯರು, ದಾಸ ಶೈಲಿಯಲ್ಲಿ ಬೆಂಗಳೂರಿನ ಶ್ರೀ ವಾರಿ ಫೌಂಡೇಶನ್ ನಿರೂಪಣೆಯಲ್ಲಿ ಕಲ್ಯಾಣೋತ್ಸವವನ್ನು ನಡೆಸಿದರು.

ಸಂಪೂರ್ಣ ಕಾರ್ಯಕ್ರಮದ ವೀಡಿಯೋ ನೋಡಿ

ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸೇವಾ ಸಮಿತಿಯ ಅರ್ಚಕ ಬಿ. ಕೃಷ್ಣಮೂರ್ತಿ ನಾವಡ, ಗೌರವಾಧ್ಯಕ್ಷ ಎಸ್. ರಾಜು ಪೂಜಾರಿ, ಅಧ್ಯಕ್ಷ ಎನ್. ನಾಗರಾಜ ಶೆಟ್ಟಿ, ಕಾರ್ಯದರ್ಶಿ ಎಸ್. ಶಿವರಾಮ ಪೂಜಾರಿ, ಸದಸ್ಯರುಗಳಾದ ಶ್ರೀನಿವಾಸ ಕುಮಾರ್, ಶಂಕರ ಮೊಗವೀರ, ಸತ್ಯಪ್ರಸನ್ನ, ಅಣ್ಣಪ್ಪ ಪೂಜಾರಿ, ದೊಟ್ಟಯ್ಯ ಪೂಜಾರಿ, ನಾಗರಾಜ ಗಾಣಿಗ ಬಂಕೇಶ್ವರ, ಕೃಷ್ಣಯ್ಯ ಮದ್ದೋಡಿ, ರವೀಂದ್ರ ಶ್ಯಾನುಭಾಗ್, ಉದಯ ಆಚಾರ್ಯ ಮೊದಲಾದವರುಗಳು ಕಲ್ಯಾಣೋತ್ಸವದ ವಿದಿವಿಧಾನಗಳಲ್ಲಿ ಪಾಲ್ಗೊಂಡರು. ಕಲ್ಯಾಣೊತ್ಸವದ ಬಳಿಕ ಮಂತ್ರಾಕ್ಷತೆ, ಪ್ರಸಾದ, ಲಡ್ಡು ವಿತರಿಸಲಾಯಿತು.

Click here

Click here

Click here

Click Here

Call us

Call us

ಬೈಂದೂರು ಶಾಸಕ ಬಿಎಂ ಸುಕುಮಾರ ಶೆಟ್ಟಿ, ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ದಾಸರಪದಗಳ ಪ್ರಾಯೋಜಕರಾದ ಎನ್.ವಿ ರಾಘವೇಂದ್ರ ರಾವ್, ದಿನೇಶ್ ನೆರಂಬಳ್ಳಿ ಸೇರಿದಂತೆ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

 

Leave a Reply