‘ಆಳ್ವಾಸ್ ಮೀಡಿಯಾ ಬಝ್ – 2020’ ಉದ್ಘಾಟನೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಮೂಡುಬಿದಿರೆ: ಪ್ರಕೃತಿಯು ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತಿದ್ದು, ಅದರ ರಕ್ಷಣೆ ನಮ್ಮ ಜವಬ್ದಾರಿ. ಮಾಧ್ಯಮಗಳು ಪರಿಸರದ ಪ್ರತಿಯೊಂದು ಸೂಕ್ಷ್ಮ ವಿಚಾರಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಕರ್ತವ್ಯವನ್ನು ನಿಭಾಯಿಸಬೇಕು ಎಂದು ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‌ನ ಆದಾಯತೆರಿಗೆಯ ಡೈರೆಕ್ಟರ್ ಜನರಲ್ ನರೋತ್ತಮ್ ಮಿಶ್ರ ಹೇಳಿದರು.

Call us

Click Here

ಅವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಹಾಗೂ ಪದವಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಎರಡು ದಿನಗಳ ಕಾಲ ನಡೆಯಲಿರುವ ‘ಮೀಡಿಯಾ ಆಂಡ್ ಕ್ಲೈಮೇಟ್ ಆಕ್ಷನ್’ ಎಂಬ ವಿಚಾರದ ಕುರಿತು ನಡೆದ ಅಂತರಾಷ್ಟ್ರೀಯ ಸಮ್ಮೇಳನ ಮತ್ತು ‘ಮೀಡಿಯಾ ಬಝ್ – ೨೦೨೦’ ಮಾಧ್ಯಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಕೃತಿ ಮಾತೆಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಏಕೆಂದರೆ ಪ್ರಕೃತಿಯು ಸಮತೋಲನದಲ್ಲಿದ್ದರೆ ನಾವು ಬದುಕಲು ಸಾಧ್ಯ. ಪ್ರಕೃತಿ ಮುನಿಸಿಕೊಂಡರೆ ಬದುಕು ಸರ್ವನಾಶವಾಗುವುದುಖಚಿತ. ಪ್ರಕೃತಿಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ನಾವು ಕಾರ್ಯ ನಿರ್ವಹಿಸಬಹುದು ಎಂಬುದನ್ನು ಮಾಧ್ಯಮಗಳ ಮೂಲಕ ಜನರಲ್ಲಿ ಅರಿವು ಮೂಡಿಸಬೇಕು. ನಕಾರಾತ್ಮಕ ವಿಚಾರಗಳನ್ನು ಬದಿಗೊತ್ತಿ ಪ್ರತಿಯೊಂದು ಸೂಕ್ಷ್ಮ ವಿಚಾರದ ಕುರಿತು ಅರಿವನ್ನು ಮೂಡಿಸುವುದು ಮಾಧ್ಯಮಗಳ ಮೂಲಭೂತ ಕರ್ತವ್ಯವಾಗಿದೆ. ಹಾಗೂ ನೈಜತೆಯ ಜತೆಗೆ ಧನಾತ್ಮಕ ವಿಷಯಗಳಿಗೆ ಗಮನಹರಿಸುವುದುಅತ್ಯಗತ್ಯ. ಇದರಿಂದಾಗಿ ಸಮಾಜದಲ್ಲಿ ಸಕಾರಾತ್ಮಕ ಭಾವನೆಗಳನ್ನು ಸೃಷ್ಟಿಸಬಹುದು ಎಂದರು.

ಪ್ರಕೃತಿಯ ಮೇಲೆ ಕಾಳಜಿ ತೋರಿದರೆ, ಅದು ನಮ್ಮ ಕಾಳಜಿಯನ್ನು ವಹಿಸುತ್ತದೆ. ಪ್ರಕೃತಿಯನ್ನು ನಾವು ಜವಬ್ದಾರಿಯಿಂದ ಸಂರಕ್ಷಿಸಬೇಕು. ಪತ್ರಿಕೋದ್ಯಮ ಕ್ಷೇತ್ರದಲ್ಲಿ ಜವಬ್ದಾರಿಯುತ ನಡೆಯ ಅವಶ್ಯಕತೆಯಿದೆ. ಪರಿಸರ ಪ್ರತ್ರಿಕೋದ್ಯಮವು ಅನೇಕ ವಿಚಾರಗಳನ್ನು ಒಳಗೊಂಡಿರುವಂತಹ ಕ್ಷೇತ್ರ. ಈ ಕ್ಷೇತ್ರದಲ್ಲಿ ಕಾರ್ಯಮಾಡುವ ಪ್ರತಿಯೊಬ್ಬ ವ್ಯಕ್ತಿಯೂ ಪರಿಸರದಲ್ಲಿನ ವಿವಿಧ ವಿಚಾರಗಳ ಕುರಿತಾದಜ್ಞಾನವನ್ನು ಹೊಂದಿರಬೇಕು.ಆಗ ಮಾತ್ರ ಪ್ರಕೃತಿಯ ಕುರಿತಾಗಿ ಜನರಲ್ಲಿ ಅರಿವನ್ನು ಮೂಡಿಸಲು ಸಾಧ್ಯ ಎಂದುಉಡುಪಿ ಪವರ್ ಕಾರ್ಪೋರೇಷನ್ ಪ್ರವೆಟ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ಎಕ್ಸಿಕ್ಯೂಟಿವ್‌ಡೈರೆಕ್ಟರ್ ಕಿಶೋರ್ ಆಳ್ವ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದರು.

ನಾವು ಹವಾಮಾನ ಬದಲಾವಣೆಗಳನ್ನು ಅರ್ಥೈಸಿಕೊಳ್ಳುವುದರ ಜತೆಗೆ ಕ್ಷಿಪ್ರ ಬದಲಾವಣೆಯನ್ನು ಗಮನಿಸಬೇಕು.ಆಗ ನಾವು ಅದನ್ನು ಸಂರಕ್ಷಿಸುವುದು ಹೇಗೆ ಎಂಬುದರ ಕುರಿತಾಗಿಯೊಚಿಸಬಹುದು. ಮುಂದಿನ ದಿನಗಳಲ್ಲಿ ಹವಮಾನ ಬದಲಾವಣೆಯನ್ನು ಹೇಗೆ ನೀರೂಪಿಸಬಹುದು? ಅದರಿಂದಾಗುವ ಪರಿಣಾಮಗಳನ್ನು ತಡೆಗಟ್ಟುವುದು ಹೇಗೆ ಎಂಬುದನ್ನು ವಿಚಾರ ಮಾಡಬೇಕಾಗಿದೆ. ಪರಿಸರ ಮಾಲಿನ್ಯಕ್ಕೆ ಕಾರಣವಾದ ಅಂಶಗಳು ಯಾವುದು ಎಂದು ಪತ್ತೆ ಹಚ್ಚಿ, ಅವುಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಪತ್ರಕರ್ತರು ಹವಾಮಾನ ವೈಪರಿತ್ಯ, ಬದಲಾವಣೆ ಮತ್ತು ಪರಿಣಾಮಗಳ ಕುರಿತಾಗಿ ಹೆಚ್ಚಿನ ಜ್ಞಾನವನ್ನು ಹೊಂದಬೇಕು ಎಂದುಇಸ್ರೋದ ಅರ್ತ್‌ಅಬ್ಸರ್ವೇಶನ್‌ಅಪ್ಲಿಕೇಶನ್ಸ್ ಮತ್ತುಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಮ್‌ನ ವಿಜ್ಞಾನಿ ಮತ್ತು ನಿರ್ದೇಶಕ ಪಿ.ಈ ದಿವಾಕರ್ ತಿಳಿಸಿದರು.

Click here

Click here

Click here

Click Here

Call us

Call us

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾಣೇಜ್‌ಮೆಂಟ್ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಯುವಜನರು ಪ್ರಕೃತಿಯನ್ನು ಸಂರಕ್ಷಿಸುವ ಜವಬ್ದಾರಿಯನ್ನು ಹೊರಬೇಕು.ಜತೆಗೆಅದರಕುರಿತಾದಜ್ಞಾನವನ್ನು ಹೊಂದಬೇಕು. ಯಾವುದೇ ವಿಚಾರದ ಕುರಿತು ಅಪಾರಜ್ಞಾನವನ್ನು ಹೊಂದುವ ಮಹತ್ವಾಕಾಂಕ್ಷಿಗಳಾಗಬೇಕೆ ಹೊರತು, ಚೌಕಟ್ಟನ್ನು ನಿರ್ಮಿಸಿಕೊಳ್ಳಬಾರದು. ವಿದ್ಯಾರ್ಥಿಜೀವನವು ನಮ್ಮ ಜ್ಞಾನವನ್ನು ಅಭಿವೃದ್ಧಿಪಡಿಸಿಕೊಳ್ಳುವ ವಯಸ್ಸು. ಆದ್ದರಿಂದ ಪ್ರತಿಯೊಂದು ಸೂಕ್ಷ್ಮ ವಿಚಾರಗಳ ವಿಮರ್ಶೆ ಮಾಡುವ ಮತ್ತುಅದರಿಂದ ಅನೇಕ ವಿಚಾರಗಳನ್ನು ಕಲೆ ಹಾಕುವ ಚಾಣಾಕ್ಷತನವನ್ನು ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಧನಲಕ್ಷ್ಮಿಕಾಶ್ಯೂ ಇಂಡಸ್ಟ್ರಿಯ ಮಾಲಿಕ ಕೆ.ಶ್ರೀಪತಿ ಭಟ್, ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ ಸಂಯೋಜಕ ಶ್ರೀನಿವಾಸ್ ಪೆಜತ್ತಾಯ, ಪದವಿ ಕಲಾ ವಿಭಾಗದ ಡೀನ್ ಸಂಧ್ಯಾ.ಕೆ.ಎಸ್, ಪದವಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ ರೇಷ್ಮಾ ಉಪಸ್ಥಿತರಿದ್ದರು. ಇಕೋಲಿಂಕ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಥಾಮಸ್ ಸ್ಕರಿಯ ವಂದಿಸಿ, ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸ್ವಾಗತಿಸಿ, ವಿದ್ಯಾರ್ಥಿನಿ ಗ್ರೇಶಲ್ ಕಾರ್ಯಕ್ರಮವನ್ನು ನಿರೂಪಿಸಿದರು.

ಬಾಕ್ಸ್ ಐಟಮ್:
►ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈ ಲಿ, ಅದಾನಿ ಹಾಗೂ ದ ಹಿಂದೂ ಪತ್ರಿಕೆ ಕಾರ‍್ಯಕ್ರಮದ ಪ್ರಮುಖ ಪ್ರಾಯೋಜಕರಾಗಿದ್ದರು.

►ಆಳ್ವಾಸ್ ಪತ್ರಿಕೋದ್ಯಮ ವಿಭಾಗದ ಹಳೆಯ ವಿದ್ಯಾರ್ಥಿ ನಿರಂಜನ್ ಕಡ್ಲಾರ್‌ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇವರು ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಪದವಿಯನ್ನು ಪಡೆದಿದ್ದು, ದೂರ ಶಿಕ್ಷಣದಲ್ಲಿ ಕನ್ನಡ ಎಮ್‌ಎ ಪದವಿಯನ್ನು ಪಡೆದುಕೊಂಡಿದ್ದಾರೆ. ಜತೆಗೆ ಎರಡು ವಿಷಯದಲ್ಲಿ ಎನ್‌ಇಟಿ ಪರೀಕ್ಷೆಯನ್ನು ತೇರ್ಗಡೆಯಾಗಿದ್ದಾರೆ.

►ಮಾಧ್ಯಮೋತ್ಸವದ ಸಲುವಾಗಿ ಪದವಿ ವಿದ್ಯಾರ್ಥಿಗಳು ತಯಾರಿಸಿದ ಆಳ್ವಾಸ್ ಮಿರರ್, ಆಳ್ವಾಸ್ ಮಾಧ್ಯಮ ಮತ್ತು ಆಳ್ವಾಸ್ ಸುದ್ದಿಮನೆ ವಿಶೇಷ ಸಂಚಿಕೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.ಜತೆಗೆ ಪದವಿ ಸ್ನಾತಕೋತ್ತರ ವಿದ್ಯಾರ್ಥಿ ಮಂಜುನಾಥ್‌ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ’ಆಳ್ವಾಸ್ ಸಿರಿ ಅಭಿಮಾನದಗರಿ’ ಎಂಬ ಆಲ್ಬಮ್ ಸಾಂಗ್‌ನಆಡಿಯೋ ಲಾಂಚ್ ಮಾಡಲಾಯಿತು.

►ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಗಳು ಪದ್ಮಶ್ರೀ ತುಳಸಿಗೌಡರಿಗೆ ಸಮರ್ಪಿತ ’ವೃಕ್ಷಸ್ವರ’ ಪತ್ರಿಕೆಯನ್ನು ಅನಾವರಣಗೊಳಿಸಲಾಯಿತು.

►ಹಾಗೆಯೇ ಸ್ನಾತಕೋತ್ತರ ಪತ್ರಿಕೋದ್ಯಮವಿಭಾಗದ ವತಿಯಿಂದ ಮೂಡಿಬಂದ ‘ದಂತಿ’ ಇದು ಗಜರಾಜನದೃಶ್ಯಕಾವ್ಯ ಎಂಬ ಸಾಕ್ಷ್ಯಚಿತ್ರವನ್ನು ಬಿಡುಗಡೆಗೊಳಿಸಿದರು.

ಪೆನಲ್ ಡಿಸ್ಕಶನ್:
”ಕಮ್ಯೂನಿಟಿ ಚಾಲೆಂಜಸ್ ಇನ್ ಕ್ಲೈಮೇಟ್ ಆಕ್ಷನ್” ಎಂಬ ವಿಷಯದ ಕುರಿತು ನಡೆದ ಪೆನಲ್ ಡಿಸ್ಕಶನ್‌ನಲ್ಲಿ ಮಂಗಳೂರಿನ ಮೀನುಗಾರಿಕ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಾತನಾಡಿ, ಭಾರತವು ಉತ್ಪಾದನೆಯಿಂದ ಉತ್ಪಾದಕತೆಯತ್ತ ಸಾಗಬೇಕು. ಆಗ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರ ಎಂದು ಕರೆಯಲ್ಪಡುತ್ತದೆ. ಹಾಗೆಂದು ಪರಿಸರ ನಾಶ ಮಾಡುವುದಲ್ಲ. ಬದಲಾಗುತ್ತಿರುವ ಹವಾಮಾನವನ್ನು ಎದುರಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ. ನಾವು ಮಾಲಿನ್ಯದ ವಿರುದ್ಧ ಕೂಗುವ ಘೋಷಣೆಗಳು ಕಾರ್ಯರೂಪಕ್ಕೆ ಬರಬೇಕು ಎಂದರು.

ಬೆಂಗಳೂರಿನ ಎನ್ವಿಗ್ರೀನ್ ಬಯೋಟೆಕ್ ಇಂಡಿಯಾ ಪ್ರೈವೆಟ್ ಲಿಮಿಟೆಡ್‌ನ ಸಂಸ್ಥಾಪಕ ಅಶ್ವಥ್ ಹೆಗ್ಡೆ ಮಾತನಾಡಿ, ಕೇವಲ ’ಗೋ ಗ್ರೀನ್, ಸೇ ನೋ ಟು ಪ್ಲಾಸ್ಟಿಕ್, ಸೇವ್‌ಅರ್ತ್’ ಎಂಬ ಘೋಷಣೆಗಳನ್ನು ಹೇಳುವುದಲ್ಲದೇ ಅವುಗಳನ್ನು ದೈನಂದಿನ ಚಟುವಟಿಕೆಗಳ ಒಂದು ಭಾಗವಾಗಬೇಕು. ಭೂಮಿ ತಾಯಿಯನ್ನು ಪ್ರೀತಿಸುವ, ಕಾಳಜಿ ವಹಿಸುವ ಮಾನವೀಯತೆ ಇದ್ದಾಗಲೇಅದರ ಸುಧಾರಣೆಗೆ ನಾವು ಶ್ರಮಿಸುತ್ತೇವೆ. ಸುಮಾರು ಶೇಕಡಾ. ೬೦ರಷ್ಟು ಪ್ರಾಣಿಗಳು ಅಸಮಂಜಸ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿಯಿಂದಾಗಿ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದೆ. ಇದನ್ನು ತಡೆಗಟ್ಟಲು ನಾವು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.

ಪರಸರ ಸಂಬಂಧಿತ ವರದಿಗಳಾದಾಗ ಜನರು ಸಹನೂಭೂತಿಯನ್ನು ತೋರುತ್ತಾರೆ. ಅದರ ಪರಿಣಾಮವನ್ನು ಅರಿಯಲು ಅಥವಾ ತಡೆಯಲು ಮುಂದಾಗುವುದಿಲ್ಲ. ಇದರಿಂದಾಗಿ ಪರಿಸರ ನಾಶ, ಹವಾಮಾನ ವೈಪರೀತ್ಯಗಳು ಸಂಭವಿಸುತ್ತಿದೆ. ಹವಾಮಾಣ ಏರುಪೇರುಗಳ ಬಗ್ಗೆ, ಅದಕ್ಕೆ ಸೂಕ್ತ ಕಾರಣ, ಅದರಿಂದಾಗುವ ಪರಿಣಾಮದಕುರಿತು ಪ್ರತಿಯೊಬ್ಬರು ಜಾಗೃತಿಯನ್ನು ಮೂಡಿಸಿಕೊಳ್ಳಬೇಕು ಎಂದು ಸ್ವತಂತ್ರ ಪತ್ರಕರ್ತ ಮೋಹಿತ್ ರಾವ್ ತಿಳಿಸಿದರು.

ಸಂವಾದ ಕಾರ್ಯಕ್ರಮವನ್ನು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರೊಫೆಸರ್ ಡಾ.ಡಿ. ಎಸ್ ಪೂರ್ಣಾನಂದ ಮಾಡರೇಟರ್ ಆಗಿ ಕಾರ್ಯ ನಿರ್ವಹಿಸಿದರು. ವಿವಿಧಕಾಲೇಜಿನಿಂದ ಆಗಮಿಸಿದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply