ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು: ಒಂದು ದಿನದ ಹೊರಾಂಗಣ ಕಾರ‍್ಯಕ್ರಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ತಲ್ಲೂರಿನ ನಾರಾಯಣ ವಿಶೇಷ ಮಕ್ಕಳ ಶಾಲೆಯಲ್ಲಿ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರೇಂಜರ್ಸ್ ಘಟಕದ ಆಶ್ರಯದಲ್ಲಿ ಒಂದು ದಿನದ ಹೊರಾಂಗಣ ಕಾರ್ಯಕ್ರಮ ನಡೆಯಿತು.

Call us

Click Here

ರೇಂಜರ್ಸ್ ಘಟಕದ ಸುಮಾರು 28 ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಸಿಗಳನ್ನು ನೆಡುವುದರ ಮೂಲಕ ಶಾಲಾ ಕೈತೋಟ ನಿರ್ಮಾಣ, ಶಾಲಾ ಪರಿಸರದ ಸ್ವಚ್ಛತೆ ಮುಂತಾದ ಕಾರ್ಯಕ್ರಮಗಳಲ್ಲಿ ಶ್ರಮದಾನ ಮಾಡಿದರು ಹಾಗೂ ಅಲ್ಲಿನ ವಿಶೇಷ ಮಕ್ಕಳ ಕುರಿತಾದ ಮಾಹಿತಿಯನ್ನು ಪಡೆದರು.

ಶಾಲೆಯ ಮ್ಯಾನೇಜಿಂಗ್ ಟ್ರಸ್ಟಿ ಸುರೇಶ್ ತಲ್ಲೂರು, ಗೌರವ ಶಿಕ್ಷಕಿ ಮನೋರಮ, ರೇಂಜರ್ಸ್ ಘಟಕದ ಲೀಡರ್ ಹಾಗೂ ಕಾರ್ಯಕ್ರಮದ ಸಂಯೋಜಕಿ ಜ್ಯೋತಿ ಪ್ರಸನ್ನ ಹಾಗೂ ಶಾಲೆಯ ಇತರ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply