ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಬೈಂದೂರು ತಾಲೂಕು ಘಟಕದ ನೇತೃತ್ವದಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಮಂಗಳವಾರ ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆಯಿತು.
ರಕ್ತದಾನ ಶಿಬಿರವನ್ನು ಬೈಂದೂರು ಪೊಲೀಸ್ ಉಪನಿರೀಕ್ಷಕಿ ಸಂಗೀತಾ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿದರು. ಭಾರತೀಯ ರೆಡ್ ಕ್ರಾಸ್ ಸೊಸೈಟಿ ಬೈಂದೂರು ತಾಲೂಕು ಘಟಕದ ಅಧ್ಯಕ್ಷ ಬೈಂದೂರು ತಹಶೀಲ್ದಾರ ಬಸಪ್ಪ ಪೂಜಾರ್, ಬೈಂದೂರು ರೆಡ್ ಕ್ರಾಸ್ ಸೊಸೈಟಿಯ ಸಭಾಪತಿ ನಿತೀನ್ ಕುಮಾರ್ ಶೆಟ್ಟಿ, ಖಂಜಾಚಿ ಸಂತೋಷ್ ಶೆಟ್ಟಿ, ಸದಸ್ಯರಾದ ಯು. ಸಂದೇಶ ಭಟ್, ಗುರುರಾಜ್ ಶೆಟ್ಟಿ, ಅನಿಲ್ ದೇವಾಡಿಗ, ದಿವಾಕರ್ ಶೆಟ್ಟಿ ನೆಲ್ಯಾಡಿ, ರಮೇಶ್ ಜೋಗಿ ಹಳಗೇರಿ, ಪ್ರಸಾದ್ ಶೆಟ್ಟಿ, ಸುಬ್ರಹ್ಮಣ್ಯ ಬಾಡ ಮೊದಲಾದವರು. ಇದ್ದರು. ಶಿಬಿರದಲ್ಲಿ ಸುಮಾರು ೧೨೦ ಯುನಿಟ್ ರಕ್ತ ಸಂಗ್ರಹವಾಯಿತು.
ಬದುಕಿನ ಹೋರಾಟದಲ್ಲಿ ರಕ್ತದಾನದಂತಹ ಶ್ರೇಷ್ಠ ಕಾರ್ಯವನ್ನು ಕರ್ತವ್ಯವೆಂಬಂತೆ ಮಾಡಬೇಕು. ರಕ್ತದಾನದಿಂದ ಅದೆಷ್ಟೋ ಮಂದಿಯ ಬದುಕು ಬೆಳಗುತ್ತದೆ. ಯುವಕರು ಇಂತಹ ಕಾರ್ಯದಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಮತ್ತು ಎಲ್ಲರಿಗೂ ಪ್ರೇರಣೆಯಾಗಬೇಕು – ಸಂಗೀತಾ, ಪೊಲೀಸ್ ಉಪನಿರೀಕ್ಷಕಿ ಬೈಂದೂರು ಠಾಣೆ
ಇದನ್ನೂ ಓದಿ:
► ರಕ್ತದ ಅಭಾವ ನೀಗಿಸಲು ಗಂಗೊಳ್ಳಿ ಯುವಕರಿಂದ ಸ್ವಯಂಪ್ರೇರಿತ ರಕ್ತದಾನ – https://kundapraa.com/?p=36980 .
► ನಾವುಂದ ಫ್ರೆಂಡ್ಸ್ ನೇತೃತ್ವದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ – https://kundapraa.com/?p=37018 .