ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: 2020-21ನೇ ಸಾಲಿಗೆ ತೋಟಗಾರಿಕೆ ಇಲಾಖೆಯ ಮುಖಾಂತರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉಡುಪಿ ಜಿಲ್ಲೆಯ ೧೫೮ ಗ್ರಾಮಪಂಚಾಯತ್ ಮಟ್ಟದಲ್ಲಿ, ಗೇರು, ಅಡಿಕೆ, ಕಾಳು ಮೆಣಸು, ಕೊಕೋ, ನುಗ್ಗೆ ಬೆಳೆ ಪ್ರದೇಶಗಳ ವಿಸ್ತರಣೆ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿರುತ್ತದೆ.
ಕಳೆದ ವ?ದಿಂದ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಉಡುಪಿ ಮಲ್ಲಿಗೆ ಬೆಳೆ ಪ್ರದೇಶ ವಿಸ್ತರಣೆ ಕಾಮಗಾರಿಯನ್ನು ಸೇರ್ಪಡೆ ಮಾಡಿದ್ದು 5 ಸೆಂಟ್ ಪ್ರದೇಶದಲ್ಲಿಯೂ, ಮಲ್ಲಿಗೆ ಬೆಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮವನ್ನು ಕೈಗೊಳ್ಳಲು ಅವಕಾಶವಿದ್ದು, ಸಣ್ಣ., ಅತೀ ಸಣ್ಣ ರೈತರು, ಮಹಿಳಾ ಫಲಾನುಭವಿಗಳೂ ಸಹಾ ತಮ್ಮ ಕೃಷಿ ಜಮೀನಿನಲ್ಲಿ ಹೊಸದಾಗಿ ಮಲ್ಲಿಗೆ ಗಿಡ ನಾಟಿ ಕಾರ್ಯವನ್ನು ಕೈಗೊಳ್ಳಲು ಅವಕಾಶವಿರುತ್ತದೆ,
ಅಡಿಕೆ, ತೆಂಗು, ಕಾಳುಮೆಣಸು ತೋಟ ಪುನಶ್ಚೇತನ ಕಾರ್ಯಗಳಿಗೆ ಸಹಾ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅವಕಾಶವಿದ್ದು ಆಸಕ್ತರು ಪ್ರಯೋಜನ ಪಡೆದುಕೊಳ್ಳಲು ಕೋರಿದೆ.
ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳ ಅನುಷ್ಠಾನಕ್ಕಾಗಿ ಉದ್ಯೋಗ ಚೀಟಿ ಕಡ್ಡಾಯವಾಗಿದ್ದು ಹತ್ತಿರದ ಗ್ರಾಮ ಪಂಚಾಯತ್‌ಗಳಲ್ಲಿ ಕಾಮಗಾರಿಗಾಗಿ ಹಾಗೂ ಉದ್ಯೋಗ ಬೇಡಿಕೆಗಾಗಿ ಸಂಪರ್ಕಿಸಬಹುದಾಗಿರುತ್ತದೆ,
ವೈಯಕ್ತಿಕ ಕಾಮಗಾರಿಗಳಲ್ಲಿ ಬೋರ್‌ವೆಲ್ ಮರುಪೂರಣ ಕಾಮಗಾರಿಯನ್ನು ಇಲಾಖೆ ಮುಖಾಂತರ ಕೈಗೊಳ್ಳಬಹುದಾಗಿದ್ದು ಬೆಳೆ ಪ್ರದೇಶ ವಿಸ್ತರಣೆ ಕಾಮಗಾರಿಯನ್ನು 0.20ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚಿನ ಸ್ಥಳದಲ್ಲಿ ಕೈಗೊಂಡ ರೈತರು ಹನಿ ನೀರಾವರಿ ಘಟಕವನ್ನೂ ಕೂಡ ಅಳವಡಿಸಿಕೊಂಡರೆ ಇಲಾಖೆಯ ಯೋಜನೆಯ ಮುಖಾಂತರ ಸಹಾಯಧನ ನೀಡಲು ಅವಕಾಶವಿರುತ್ತದೆ.
ಅಡಿಕೆ, ತೆಂಗು, ಕಾಳುಮೆಣಸು, ಮಲ್ಲಿಗೆ ಗಿಡಗಳನ್ನು ರೈತರು ಖರೀದಿಸಲು ಇಚ್ಛಿಸಿದಲ್ಲಿ ಇಲಾಖೆಯ ಕ್ಷೇತ್ರ ಮತ್ತು ನರ್ಸರಿಗಳಲ್ಲಿ ಗಿಡಗಳ ಲಭ್ಯತೆ ಇದು ಉದ್ಯೋಗ ಖಾತರೀ ಯೋಜನೆಯ ಫಲಾನುಭವಿಗಳಿಗೆ ಆದ್ಯತೆ ಮೇರೆಗೆ ಗಿಡಗಳನ್ನು ಮಾರಾಟ ಮಾಡಲಾಗುವುದು.
2020-21ನೇ ಸಾಲಿಗೆ ತೋಟಗಾರಿಕೆ ಇಲಾಖೆಯ ಮುಖಾಂತರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ಕೈಗೊಳ್ಳಲು ಒಟ್ಟು 280 ಪ್ರದೇಶ ವಿಸ್ತರಣೆ ಕಾಮಗಾರಿ, ೫೦ ತೆಂಗು ಪುನಶ್ಚೇತನ ಕಾಮಗಾರಿ, 34 ಬೋರ್‌ವೆಲ್ ಮರುಪೂರಣ ಕಾಮಗಾರಿಗಳಿಗೆ ರೂ 127.99 ಲಕ್ಷ ಗುರಿ ನಿಗದಿಯಾಗಿರುತ್ತದೆ, ಪ್ರದೇಶ ವಿಸ್ತರಣೆ ಕಾಮಗಾರಿಗಳಲ್ಲಿ, ರೂ 28 ಲಕ್ಷ ಹನಿನೀರಾವರಿ ಅಳವಡಿಕೆಗಾಗಿ ಇಲಾಖೆ ಗುರಿ ನಿಗದಿಪಡಿಸಿದ್ದು ರೈತರು ಪ್ರಯೋಜನ ಪಡೆಯಲು ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು ಸಂಪರ್ಕಿಸುವಂತೆ (ಕಾರ್ಕಳ 9481440812, ಉಡುಪಿ 9900046117, ಕುಂದಾಪುರ 9900565469 ) ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
► ಹೂವಿನ ಬೆಳೆಗಾರರಿಗೆ ನಷ್ಠ ಪರಿಹಾರ ಪಾವತಿಸುವ ಬಗ್ಗೆ ರೈತರಿಗೆ ಮಾರ್ಗಸೂಚಿ – https://kundapraa.com/?p=37537 .
















1 Comment
ಒಳ್ಳೆ ಕೆಲಸ