ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ, ಜೂನ್.2: ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಓರ್ವರಿಗೆ ಮೊದಲ ವರದಿಯಲ್ಲಿ ಕೊರೋನಾ ಪಾಸಿಟಿವ್ ಬಂದಿದ್ದು, ಈಗ ಎರಡನೇ ವರದಿಯಲ್ಲಿ ನೆಗೆಟಿವ್ ಬಂದಿರುವುದು ದೃಢಪಟ್ಟಿದೆ.
ಪೊಲೀಸರಿಗೆ ಮಾಡಲಾಗಿದ್ದ ತಪಾಸಣೆ ವೇಳೆ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಅವರ ಮಾದರಿಯನ್ನು ಸಂಗ್ರಹಿಸಲಾಗಿತ್ತು. ಮೊದಲ ವರದಿಯಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿತ್ತು. ಆದರೆ ಅವರಿಗೆ ಯಾವುದೇ ಟ್ರವೆಲ್ ಹಿಸ್ಟರಿ ಇಲ್ಲದೇ ಇರುವುದರಿಂದ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದೀಗ ನೆಗೆಟಿವ್ ಬಂದಿದೆ. ಈ ಬಗ್ಗೆ ಎಎಸ್ಪಿ ಹರಿರಾಂ ಶಂಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಮುಂಜಾಗೃತಾ ಕ್ರಮವಾಗಿ ಶಂಕರನಾರಾಯಣ ಪೊಲೀಸ್ ಠಾಣೆಯನ್ನು ಸ್ಯಾನಿಟೈನ್ ಮಾಡಲಾಗಿತ್ತು. ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಅವರ ಕೋಟತಟ್ಟು ಮನೆಯನ್ನು ಸೀಲ್ ಡೌನ್ ಮಾಡಲಾಗಿತ್ತು. ಇದೀಗ ಎರಡನೇ ವರದಿಯಲ್ಲಿ ನೆಗೆಟಿವ್ ಬಂದಿರುವುದರಿಂದ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ:
► ಉಡುಪಿ ಜಿಲ್ಲೆಗಿಂದು ಅಮಂಗಳ: ಒಂದೇ ದಿನ 150 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38168 .
► ಶಂಕರನಾರಾಯಣ ಠಾಣೆ ಸಿಬ್ಬಂದಿಗೆ ಕೊರೋನಾ ಶಂಕೆ. ಠಾಣೆ ಸ್ಯಾನಿಟೈಜ್, ಮನೆ ಸೀಲ್‌ಡೌನ್ – https://kundapraa.com/?p=38132 .
► ಕುಂದಾಪುರ ತಾಲೂಕು ಆಸ್ಪತ್ರೆ ಪೂರ್ಣ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆ. ಸೇವೆಗಳು ಕೋಟಕ್ಕೆ ಶಿಫ್ಟ್: ಡಿಸಿ – https://kundapraa.com/?p=38175 .
► ಹೆಚ್ಚುತ್ತಿರುವ ಕೊರೋನಾ ಸೋಂಕು, ಆತಂಕ. ಜಿಲ್ಲಾಡಳಿತದ ಕೈಮೀರುತ್ತಿದೆಯೇ ಕೊರೋನಾ ನಿಯಂತ್ರಣ? – https://kundapraa.com/?p=38142 .