ಕೋವಿಡ್ ಪಾಸಿಟಿವ್ ಇದೆ ಎಂದು ಕರೆ ಮಾಡಿ 4 ದಿನವಾದರೂ ಆಸ್ಪತ್ರೆಗೆ ಕರೆದೊಯ್ದಿಲ್ಲ: ಮರವಂತೆಯಲ್ಲಿ ಆಕ್ರೋಶ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ‘ನಿಮಗೆ ಕೊರೋನಾ ಪಾಸಿಟಿವ್ ಬಂದಿದೆ ಆಸ್ಪತ್ರೆ ತೆರಳಲು ಸಿದ್ಧರಾಗಿರಿ’ ಎಂದು ಕರೆ ಮಾಡಿ ನಾಲ್ಕು ದಿನ ಕಳೆದರೂ ಅವರನ್ನು ಮನೆಯಿಂದ ಕರೆದೊಯ್ಯದೇ, ದಿನವೂ ಭಯದಿಂದ ಬದುಕುವಂತೆ ಮಾಡಿರುವ ಬಗ್ಗೆ ಮರವಂತೆ ಗ್ರಾಮದ ಪಾಸಿಟಿವ್ ಬಂದಿರುವವರ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಮರವಂತೆ ಆಸ್ಪತ್ರೆ ಆವರಣದಲ್ಲಿ ಶನಿವಾರ ನಡೆದಿದೆ.

Call us

Click Here

ಪಾಸಿಟಿವ್ ಇರುವ ಬಗ್ಗೆ ಕಾಲ್ ಸೆಂಟರ್‌ನಿಂದ ಕರೆ ಬಂದಿದ್ದು, ಅದರಂತೆ ಮರವಂತೆ ಗ್ರಾಮದ ಮಹಿಳೆ ಸೇರಿದಂತೆ ಇನ್ನಿತರರು ಆಸ್ಪತ್ರೆಗೆ ತೆರಳಲು ಸಿದ್ಧರಾಗಿ ನಿಂತಿದ್ದರು. ಆದರೆ ನಾಲ್ಕು ದಿನ ಕಳೆದರೂ ಆಂಬುಲೆನ್ಸ್ ಬಾರದೇ ಇದ್ದುದರಿಂದ, ಭಯಗೊಂಡು ಮರಳಿ ಆರೋಗ್ಯ ಕಾರ್ಯಕರ್ತರನ್ನು, ವೈದ್ಯರನ್ನು ಸಂಪರ್ಕಿಸಲು ಪ್ರಯತ್ನಿಸಿದ್ದು ಯಾರಿಂದಲೂ ಸಮರ್ಪಕ ಪ್ರತಿಕ್ರಿಯೆ ದೊರೆಯದಿದ್ದುದರಿಂದ ಪಾಸಿಟಿವ್ ಬಂದ ೮ ಮಂದಿ ಸೀದಾ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದಿದಾರೆ.

ಆಸ್ಪತ್ರೆಯ ಮುಂದೆ ಬಂದಿರುವ ವಿಷಯ ತಿಳಿದ ತಕ್ಷಣ ಆರೋಗ್ಯ ಕಾರ್ಯಕರ್ತರು ಅಲ್ಲಿಗೆ ಬಂದಿದ್ದು ಕೂಡಲೇ ಆಂಬುಲೆನ್ಸ್ ಕರೆಸಿಕೊಂಡಿದ್ದಾರೆ. ಆದರೆ ಪಾಟಿಸಿವ್ ಬಂದಿರುವವರು ತಮ್ಮ ಆಕ್ರೋಶ ಹೊರಹಾಕಿದ್ದು, ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ನಡುವೆ ಮರವಂತೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಹಾಗೂ ಗಂಗೊಳ್ಳಿ ಠಾಣೆಯ ಪೊಲೀಸ್ ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಸಿಕೊಳಿಸಿದ ಬಳಿಕ ಎಲ್ಲರೂ ಆಂಬುಲೆನ್ಸ್‌ನಲ್ಲಿ ತೆರಳಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

Click here

Click here

Click here

Click Here

Call us

Call us

ಅಧಿಕಾರಿಗಳ ನಿರ್ಲಕ್ಷ್ಯ, ಜನರ ಜೀವದೊಂದಿಗೆ ಚೆಲ್ಲಾಟ:
ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ಮುಗಿಸಿ ಮನೆಗೆ ಬಂದವರ ಪಾಸಿಟಿವ್ ವರದಿಗಳು ನಿಧಾನವಾಗಿ ಕೈಸೇರುತ್ತಿದ್ದು, ಈ ನಡುವೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಸಮನ್ವಯತೆಯ ಕೊರತೆಯಿಂದಾಗಿ ಜನರು ಭಯದಿಂದ ಬದುಕುವಂತಾಗಿದೆ. ಮರವಂತೆ, ಕಂಬದಕೋಣೆ ಸೇರಿದಂತೆ ಕೆಲವೆಡೆ ಇಂತಹದೇ ಪ್ರಕರಣ ನಡೆದಿದ್ದು, ಪಾಸಿಟಿವ್ ಇದೆ ಎಂದು ಕರೆ ಮಾಡಿ, 2-3 ದಿನಗಳಾದರೂ ಕರೆದೊಯ್ಯದೇ ಇಡೀ ಕುಟುಂಬವನ್ನೇ ಆತಂಕಕ್ಕೆ ನೂಕುತ್ತಿದ್ದಾರೆ. ಇನ್ನು ಪಾಸಿಟಿವ್ ಬಂದಿರುವವರಿಗೆ ಮನೆಯಿಂದ ಬಂದು ಮುಖ್ಯರಸ್ತೆಯಲ್ಲಿ ನಿಲ್ಲಿ, ಆಟೋ ಮಾಡಿಕೊಂಡು ಬನ್ನಿ ಎಂದೆಲ್ಲಾ ಹೇಳಲಾಗುತ್ತಿದೆ. ಆಸ್ಪತ್ರೆಗೆ ಕರೆದೊಯ್ದರೆ ನಿಮಗೆ ನೆಗೆಟಿವ್ ಇದೆ. ನಿಮ್ಮನ್ನು ಯಾಕೆ ಕರೆತಂದಿದ್ದಾರೆ ಎಂದು ಮರಳಿ ಕಳುಹಿಸಿರುವು ಘಟನೆಗಳೂ ನಡೆದಿದೆ.  ಆರೋಗ್ಯ ಇಲಾಖೆಯ ಅವ್ಯವಸ್ಥೆಯ ಬಗ್ಗೆ ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಕಾಲ್‌ಸೆಂಟರ್‌ನಿಂದ ಪಾಸಿಟಿವ್ ಎಂದು ಕರೆ ಮಾಡುವವರು, ಅಂಬುಲೆನ್ಸ್ ಸಿಬ್ಬಂದಿಗಳು, ಸ್ಥಳೀಯ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ನಡುವೆ ಸಮನ್ವಯತೆ ಇಲ್ಲದೇ ಇರುವುದರಿಂದ ಇಂತಹ ಅವಾಂತರಗಳು ಮರುಕಳಿಸುತ್ತಲೇ ಇವೆ.

ಒಟ್ಟಿನಲ್ಲಿ ಜನಸಾಮಾನ್ಯರು ಕೋರೋನಾ ವಿರುದ್ಧ ಜಾಗೃತರಾದರೂ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಭಯದ ನೆರಳಿನಲ್ಲಿ ಬದುಕುವಂತಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

ಇದನ್ನೂ ಓದಿ:
► ಉಡುಪಿ ಜಿಲ್ಲೆ: ಶನಿವಾರ 121 ಕೊರೋನಾ ಪಾಸಿಟಿವ್ ದೃಢ – https://kundapraa.com/?p=38332 .
ಪಾಸಿಟಿವ್ ಬರುವವರಲ್ಲಿ ರೋಗದ ಲಕ್ಷಣಗಳಿಲ್ಲ: ಡಾ. ಪ್ರಶಾಂತ್ ಭಟ್ – https://kundapraa.com/?p=38333 .
► ಜೂ.8 ರಿಂದ ಜಿಲ್ಲೆಯಲ್ಲಿ ದೇವಾಲಯಗಳ ಆರಂಭ. ಇವಿಷ್ಟು ನಿಯಮ ಪಾಲನೆ ಕಡ್ಡಾಯ – https://kundapraa.com/?p=38342 .

 

Leave a Reply