ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಂಗಳೂರು: ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವತಿಯಿಂದ ಹೊರತಂದಿರುವ ಮೌಲ್ಯವರ್ಧಿತ ಮೀನಿನ ಉತ್ಪನ್ನಗಳನ್ನು ಮುಖ್ಯಂತ್ರಿಗಳಾದ ಬಿ. ಎಸ್. ಯಡಿಯೂರಪ್ಪ ಅವರು ತಮ್ಮ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು.
ಈ ಸಂದರ್ಭ ಬಂದರು ಮತ್ತು ಮೀನುಗಾರಿಕೆ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ನಿರ್ದೇಶಕ ಎಂ. ಎಲ್. ದೊಡ್ಡಮನಿ, ಮತ್ಸ್ಯ ಬಂಧನ ಸಂಸ್ಥೆಯ ಮ್ಯಾನೆಜಿಂಗ್ ಡೈರೆಕ್ಟರ್ ಗೋವಿಂದ ಬಾಬು ಪೂಜಾರಿ, ಅರುಣ್ ಧನ್‌ಪಾಲ್, ಮೀನುಗಾರಿಕಾ ಇಲಾಖೆ ನಿರ್ದೇಶಕರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಮತ್ಸ್ಯ ಬಂಧನ ಸಂಸ್ಥೆಯಿಂದ ಉತ್ಪಾದನೆ:
ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಈ ಹೊಸ ಉತ್ಪನ್ನ ಫಿಶ್ ವೇಫರ‍್ಸ್ ಮೊದಲಾದವುಗಳ್ನು ಮತ್ಸ್ಯ ಬಂಧನ ಸಂಸ್ಥೆಯು ತಯಾರಿಕೆ ಹಾಗೂ ಪ್ಯಾಕಿಂಗ್ ಜವಾಬ್ದಾರಿ ಹೊತ್ತಿದೆ. ಸದ್ಯ ಬೆಂಗಳೂರಿನಲ್ಲಿ ಸಂಸ್ಥೆಯ ಉತ್ಪಾದಕ ಘಟಕ ಕಾರ್ಯನಿರ್ವಹಿಸಲಿದ್ದು, ಕೆಲ ತಿಂಗಳುಗಳಲ್ಲಿ ಬೈಂದೂರು ತಾಲೂಕಿನಲ್ಲಿಯೇ ಉತ್ಪಾದನಾ ಘಟಕ ಆರಂಭವಾಗಲಿದೆ. ಶೆಫ್‌ಟಾಕ್ ಸಂಸ್ಥೆಯ ಅಂಗಸಂಸ್ಥೆಯಾದ ಮತ್ಸ್ಯ ಬಂಧನ ಸಂಸ್ಥೆಯನ್ನು ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಮುನ್ನಡೆಸುತ್ತಿದ್ದಾರೆ.