ಕುಂದಾಪ್ರ ಡಾಟ್ ಕಾಂ ಸುದ್ದಿ
ಕುಂದಾಪುರ: ಕುಂದಾಪುರ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯ (ಎಪಿಎಂಸಿ) ನೂತನ ಅಧ್ಯಕ್ಷರಾಗಿ ಬೈಂದೂರಿನ ವೆಂಕಟ ಪೂಜಾರಿ ಸಸಿಹಿತ್ಲು ಸೋಮವಾರ ಅಧಿಕಾರ ಸ್ವೀಕರಿಸಿದರು.
ಇತ್ತಿಚಿಗೆ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಳಾಗಿದ್ದ ವೆಂಕಟ ಪೂಜಾರಿ ಸಸಿಹಿತ್ಲು ಅಧ್ಯಕ್ಷರಾಗಿ ವಸಂತ ಕುಮಾರ ಶೆಟ್ಟಿ ಕೇದೂರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಒಟ್ಟು 16 ಸದಸ್ಯ ಬಲವನ್ನು ಹೊಂದಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಈಗ 10 ಬಿಜೆಪಿ, 6 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದಾರೆ. ಸರ್ಕಾರ ಇತ್ತೀಚೆಗೆ ಮೂರು ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡಿತ್ತು.
ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ವೆಂಕಟ ಪೂಜಾರಿ ಅವರು, ಕೃಷಿ ಉತ್ಪನ್ನ ಮಾರುಕಟ್ಟೆಗೆ ಬರುವ ಯಾವುದೇ ಒಬ್ಬ ರೈತನಿಗೂ ಸಮಸ್ಯೆಯಾಗಬಾರದು. ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಹೊತ್ತು ತಂದು ಮಾರಾಟ ಮಾಡಲು ಬಂದವರಿಗೆ ಯಾವುದೇ ಸುಂಕ ವಸೂಲಿ ಮಾಡಬಾರದು. ಜನರಿಗೂ ಯಾವುದೇ ಸಮಸ್ಯೆಯಾಗಬಾರದು. ಅಲ್ಲದೆ ಎಪಿಎಂಸಿ ಪ್ರಾಂಗಣದಲ್ಲಿ ಸ್ವಚ್ಚತೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗುತ್ತದೆ. ರೈತರು ಮತ್ತು ಗ್ರಾಹಕರಿಗೆ ಗರಿಷ್ಠ ಮಟ್ಟದಲ್ಲಿ ಅನುಕೂಲಕ ಕಲ್ಪಿಸಿಕೊಡುವುದು ನನ್ನ ಧ್ಯೆಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ:
► ಕುಂದಾಪುರ ಎಪಿಎಂಸಿ: ಅಧ್ಯಕ್ಷರಾಗಿ ವೆಂಕಟ ಪೂಜಾರಿ, ಉಪಾಧ್ಯಕ್ಷರಾಗಿ ವಸಂತ ಕುಮಾರ್ ಶೆಟ್ಟಿ ಆಯ್ಕೆ – https://kundapraa.com/?p=38639 .
► ಉಡುಪಿ ಜಿಲ್ಲೆ ಕೋವಿಡ್ ಅಪ್ಡೇಟ್: ಸೋಮವಾರ 14 ಪಾಸಿಟಿವ್, ಒಟ್ಟು 969 ಮಂದಿ ಬಿಡುಗಡೆ – https://kundapraa.com/?p=38884 .
► ಬೈಂದೂರು ಪೊಲೀಸ್ ಠಾಣೆ, ಶಿರೂರು ಆರೋಗ್ಯ ಕೇಂದ್ರದ ಸಿಬ್ಬಂದಿಗಳಿಗೆ ಕೊರೋನಾ ಸೊಂಕು ದೃಢ- https://kundapraa.com/?p=38863 .