ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಮಂಗಳೂರು ವಿಕಾಸ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆಶ್ರಿತಾ ಮದ್ದೋಡಿ ವಿಜ್ಞಾನ ವಿಭಾಗದಲ್ಲಿ ಶೆ.97.8 (587) ಅಂಕ ಪಡೆದು ರಾಜ್ಯದಲ್ಲಿ 10ನೇ ಸ್ಥಾನ ಪಡೆದುಕೊಂಡಿದ್ದಾಳೆ.
ವಿಜ್ಞಾನ ವಿಭಾಗದಲ್ಲಿ ದ.ಕ ಜಿಲ್ಲೆಗೆ 6ನೇ ಸ್ಥಾನ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನಿಯಾಗಿದ್ದಾಳೆ. ಆಶ್ರಿತಾ ಪಿಜಿಕ್ಸ್‌ನಲ್ಲಿ – 99, ಕೆಮಿಸ್ಟ್ರೀ – 99, ಮ್ಯಾಥ್ಸ್-99, ಬಯಾಲಜಿ – 100, ಕನ್ನಡ-98, ಇಂಗ್ಲೀಷ್‌ನಲ್ಲಿ 92 ಅಂಕ ಪಡೆದಿದ್ದಾಳೆ.
ಈಕೆ ಬೈಂದೂರು ರತ್ತೂಬಾಯಿ ಜನತಾ ಪ್ರೌಢಶಾಲೆಯ ಅಧ್ಯಾಪಕ ಆನಂದ ಮದ್ದೋಡಿ ಹಾಗೂ ಲತಾ ಆನಂದ ಅವರ ಪುತ್ರಿ.