ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಉಡುಪಿ ಜಿಲ್ಲೆಯ, ಕೃಷಿ ಇಲಾಖೆಯ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯಡಿ ಬೇಕಾದ ಸಮುದಾಯ ಸಹಾಯಕರು ಹಾಗೂ ಸಮುದಯ ಸಂಪನ್ಮೂಲ ವ್ಯಕ್ತಿಗಳನ್ನು ಹೊರಗುತ್ತಿಗೆ ಮೇಲೆ ಪಡೆಯಲು ಇ ಪ್ರೊಕ್ಯರ್ಮೆಂಟ್ ನ ನಿಬಂದನೆಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಟೆಂಡರ್ ಆಹ್ವಾನಿಸಲಾಗಿದೆ.ಆಸಕ್ತರು ಜುಲೈ 24 ರ ಸಂಜೆ 5 ಗಂಟೆಯ ಒಳಗೆ www.eproc.karnataka.gov.in ನಲ್ಲಿ ಭರ್ತಿ ಮಾಡಿ ಸಲ್ಲಿಸಬಹುದಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಡಿಗೆ ವಾಹನ: ಟೆಂಡರ್ ಆಹ್ವಾನ
ಉಡುಪಿ ಜಿಲ್ಲೆಯ, ಕೃಷಿ ಇಲಾಖೆಗೆ 2020-21ನೇ ಸಾಲಿನಲ್ಲಿ ಕೇಂದ್ರದ ಪುರಸ್ಕೃತ ಯೋಜನೆಗಳಾದ ರಾಷ್ಟ್ರೀಯ ಆಹಾರ ಭದ್ರತಾ ಅಭಿಯನ ಮತ್ತು ಆತ್ಮ ಯೋಜನೆಯಡಿ ಬಾಡಿಗೆ ವಾಹನ ಪಡೆಯಲು ಟೆಂಡರನ್ನು ಆಹ್ವಾನಿಸಲಾಗಿದೆ.
ಇಚ್ಛೆಯುಳ್ಳ ಸಂಸ್ಥೆಯವರು ರೂ 100/- ಪಾವತಿಸಿ ಜಂಟಿ ಕೃಷಿ ನಿರ್ದೇಶಕರ ಕಛೇರಿ, ಕೊಠಡಿ ಸಂಖ್ಯೆ-304, ಸಿ ಬ್ಲಾಕ್, ಎರಡನೇ ಮಹಡಿ, ಜಿಲ್ಲಾಧಿಕಾರಿಗಳ ಕಛೇರಿ ಸಂಕೀರ್ಣ, ರಜತಾದ್ರಿ ಮಣಿಪಾಲ ಇಲ್ಲಿಂದ ಕಛೇರಿ ಅವಧಿಯಲ್ಲಿ ದಿನಾಂಕ 13.07.2020 ರಿಂದ ಪಡೆಯಬಹುದಾಗಿದೆ. ಭರ್ತಿ ಮಾಡಿದ ಟೆಂಡರ್ ಅರ್ಜಿಗಳನ್ನು ದಿನಾಂಕ 10.08.2020ರ ಸಂಜೆ 4.00 ಘಂಟೆಗೆ ಮುಂಚಿತವಾಗಿ ಜಂಟಿ ಕೃಷಿ ನಿರ್ದೇಶಕರ ಕಛೇರಿ ಮಣಿಪಾಲದಲ್ಲಿರುವ ಟೆಂಡರ್ ಪಟ್ಟಿಯಲ್ಲಿ ಸಲ್ಲಿಸಬಹುದಾಗಿದೆ. ಟೆಂಡರ್ನ್ನು ದಿನಾಂಕ 11.08.2020ರ ಸಂಜೆ 4.00ಘಂಟೆಗೆ ತೆರೆಯಲಾಗುವುದು ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










