ಕುಂದಾಪುರ: ನಗರದ ಆಸ್ಪತ್ರೆ, ಕೋರ್ಟು, ಶಾಲಾ ವಠಾರ ಮುಂತಾದ ಪ್ರದೇಶದಲ್ಲಿ ಕರ್ಕಶ ಹಾರ್ನ್ ಗಳಿಂದ ತೊಂದರೆಯಾಗುತ್ತಿರುವ ಬಗ್ಗೆ ಸಂಚಾರಿ ಪೊಲೀಸ್ ಠಾಣೆಗೆ ಹಲವು ದೂರುಗಳು ಬಂದಿರುವುದರಿಂದ ಕುಂದಾಪುರ ಸಂಚಾರಿ ಪೊಲೀಸರು ನಗರದಲ್ಲಿ ಖಾಸಗಿ ಬಸ್ಸುಗಳಲ್ಲಿ ಅಳವಡಿಲಾಗಿರುವ ವ್ಯಾಕ್ಯುಮ್ ಅಥವಾ ಕರ್ಕಶ ಹಾರ್ನ್ ಗಳನ್ನು ತೆಗೆಯುವ ಕಾರ್ಯಾಚರಣೆ ನಡೆಸಿದರು.
ಉಡುಪಿ ಜಿಲ್ಲಾ ಎಸ್ಪಿ ಅಣ್ಣಾಮಲೈ ಅವರ ನಿರ್ದೇಶನದ ಮೇರೆಗೆ ಸಂಚಾರಿ ಪೊಲೀಸ್ ಎಸ್.ಐಗಳಾದ ಕೆ. ಜಯ ಹಾಗೂ ದೇವೇಂದ್ರ ಅವರ ನೇತ್ರತ್ವದಲ್ಲಿ ಅಧಿಕಾರಿಗಳು ಇಲ್ಲಿನ ಪಾರಿಜಾತ ಸರ್ಕಲ್‌ನಲ್ಲಿ ಪ್ರಾಯೋಗಿಕವಾಗಿ ಕಾರ್ಯಾಚರಣೆ ನಡೆಸಿ ಖಾಸಗಿ ಬಸ್ಸುಗಳ ಕರ್ಕಶ ಹಾರ್ನ್ ಗಳನ್ನು ತೆಗೆದು ದಂಡ ಹಾಕುವ ಕಾರ್ಯಾಚರಣೆ ನಡೆಸಿದರು. ಸುಮಾರು 80ಕ್ಕೂ ಅಧಿಕ ಬಸ್ಸುಗಳನ್ನು ಗುರುತಿಸಿ ಹಾರ್ನ್ ತೆಗೆದು ಕ್ರಮ ಕೈಗೊಳ್ಳಲಾಯಿತು.