ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಆ.06ರ ಗುರುವಾರ 217 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 81, ಉಡುಪಿ ತಾಲೂಕಿನ 90 ಹಾಗೂ ಕಾರ್ಕಳ ತಾಲೂಕಿನ 44 ಮಂದಿಗೆ ಪಾಸಿಟಿವ್ ಬಂದಿದೆ. 2 ಮಂದಿ ಬೇರೆ ಜಿಲ್ಲೆಯವರಾಗಿದ್ದಾರೆ.
ಒಟ್ಟು ಪ್ರಕರಣಗಳಲ್ಲಿ 85 ಸಿಂಥಮೇಟಿವ್ ಹಾಗೂ 132 ಅಸಿಂಥಮೆಟಿಕ್ ಪ್ರಕರಣಗಳಲ್ಲಿದ್ದು, 139 ಪುರುಷರು, 88 ಮಹಿಳೆಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇಂದು 34 ಮಂದಿ ಆಸ್ಪತ್ರೆಯಿಂದ ಹಾಗೂ 51 ಮಂದಿ ಹೋಮ್ ಐಸೋಲೇಶನ್’ನಿಂದ ಬಿಡುಗಡೆಗೊಂಡಿದ್ದಾರೆ. ಕುಂದಾಪುರ ತಾಲೂಕಿನ 82 ಹಾಗೂ 52 ವರ್ಷದ ವ್ಯಕ್ತಿಗಳು, ಇಂದು ಉಡುಪಿ ತಾಲೂಕಿನ 55 , 36 ಹಾಗೂ 70 ವರ್ಷದ ವ್ಯಕ್ತಿಗಳು ಹಾಗೂ ಕಾರ್ಕಳ ತಾಲೂಕಿನ 75 ವರ್ಷದ ವ್ಯಕ್ತಿ ಸೇರಿ ಒಟ್ಟು 6 ಮಂದಿ ಮೃತಪಟ್ಟಿದ್ದಾರೆ.
1685 ನೆಗೆಟಿವ್:
ಈ ತನಕ ಒಟ್ಟು 40044 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 33455 ನೆಗೆಟಿವ್, 5360 ಪಾಸಿಟಿವ್ ಬಂದಿದ್ದು, 1229 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 1685 ನೆಗೆಟಿವ್, 217 ಪಾಸಿಟಿವ್ ಬಂದಿದೆ. ಒಟ್ಟು 1099 ಮಂದಿ ಹೋಮ್ ಐಸೋಲೇಶನ್ ಹಾಗೂ 1054 ಮಂದಿ ಆಸ್ಪತ್ರೆ ಐಸೋಲೇಶನಿನಲ್ಲಿದ್ದಾರೆ.
2153 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 5360 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 3157 ಮಂದಿ ಬಿಡುಗಡೆಯಾಗಿದ್ದು, 2153 ಮಂದಿ ಕೊರೋನಾ ಸೋಂಕಿತರು ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆ, ಕೋವಿಡ್ ಕೇರ್ ಸೆಂಟರ್, ಕೋವಿಡ್ ಹೆಲ್ತ್ ಸೆಂಟರ್ ಹಾಗೂ ಹೋಮ್ ಐಸೋಲೇಶನ್ ಮೂಲಕ ನಿಗಾದಲ್ಲಿದ್ದಾರೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 50 ಮಂದಿ ಮೃತಪಟ್ಟಿದ್ದಾರೆ.