ಯಾಕುಬ್ ರ ನನ್ನ ಫಾರಿನ್ ಟೂರಿಂಗ್ ಟಾಕೀಸ್ ಬಿಡುಗಡೆ

Click Here

Call us

Call us

Call us

 ಕೆನಡಾದಲ್ಲಿ ಯುವ ಲೇಖಕ ಯಾಕುಬ್ ಖಾದರ್ ಗುಲ್ವಾಡಿ ಅವರ ಕೃತಿ ನನ್ನ ಫಾರಿನ್ ಟೂರಿಂಗ್ ಟಾಕೀಸ್ ಬಿಡುಗಡೆ

Call us

Click Here

ಕುಂದಾಪುರ: ಒಳನೋಟಗಳಿಲ್ಲದ ಪ್ರವಾಸಿಯ ತಿರುಗಾಟ ಮೇಲ್ಪದರದ ಶೋಕಿಯಿಂದ ಕೂಡಿದ್ದು, ಆಳವಾದ ಗ್ರಹಿಕೆಯಿಂದ ವಂಚಿತವಾಗಿರುತ್ತದೆ. ಹೊಸ ನೆಲದಲ್ಲಿ ಪುಳಕ, ಬೆರಗು, ತರತಮ ಅರಿವು ಮತ್ತು ಸಂಶೋಧನಾಪ್ರಜ್ಞೆ ಇದ್ದಾಗ ಮಾತ್ರ ಪ್ರವಾಸವು ಅರ್ಥಪೂರ್ಣವೂ ಅಭಿವ್ಯಕ್ತಿ ಯೋಗ್ಯವೂ ಆಗುತ್ತದೆ ಎನ್ನಲು ಯುವ ಲೇಖಕ ಯಾಕುಬ್ ಖಾದರ್ ಗುಲ್ವಾಡಿ ಅವರ ಕೃತಿ ಪ್ರವಾಸಾನುಭವಗಳ ಮೂಲಕ ಶುಷ್ಕ ವಿವರಗಳಿಂದಾಚೆಗೆ ಇಣುಕಲು, ಹಲವಾರು ಮಾಹಿತಿಗಳನ್ನು ಸಂಗ್ರಹಿಸಿ ವಿಶಿಷ್ಟ ಅನುಭವ ಪ್ರಪಂಚವನ್ನು ತೆರೆಯುತ್ತದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಡಾ. ನಾಗತಿಹಳ್ಳಿ ಚಂದ್ರಶೇಖರ ಹೇಳಿದರು.

  ಅವರು ಕೆನಡಾದಲ್ಲಿ ನಡೆದ ೧೧ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಯುವ ಲೇಖಕ ಯಾಕುಬ್ ಖಾದರ್ ಗುಲ್ವಾಡಿ ಅವರ ಅಮೇರಿಕಾ, ತಾನ್ಜಾನಿಯಾ, ಸಿಂಗಾಪುರ, ಮಾಲ್ಡೀವ್ಸ್ ದೇಶಗಳ ಕಲೆ, ಸಾಹಿತ್ಯ ಸಂಸ್ಕ್ರತಿ, ಭಾಷೆ, ಇತಿಹಾಸವನ್ನೊಳಗೊಂಡ ಪ್ರವಾಸ ಕಥನ ನನ್ನ ಫಾರಿನ್ ಟೂರಿಂಗ್ ಟಾಕೀಸ್ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್. ನರಸಿಂಹಯ್ಯ, ಡಬ್ಲ್ಯೂಕೆಸಿಸಿ ಅಧ್ಯಕ್ಷ ಇಂ. ಕೆ. ಪಿ. ಮಂಜುನಾಥ ಸಾಗರ್, ಕನ್ನಡ ಕಸ್ತೂರಿ ರೇಡಿಯೊ ನಿರ್ದೇಶಕ ಬಿ. ವಿ. ನಾಗರಾಜು, ಡಾ. ಎಲ್. ಹನುಂತಯ್ಯ ಇನ್ನಿತರರು ಉಪಸ್ಥಿತರಿದ್ದರು.

Leave a Reply